ಬೆಂಗಳೂರಿನ ಐಷಾರಾಮಿ ಅಧಿಕಾರಿ ಬಂಧಿಸಿದ ACB


ಬೆಂಗಳೂರು: ನಗರದ ಗ್ರಾಮೀಣ ನಿರ್ಮಿತಿ ಕೇಂದ್ರದ ಮಾಜಿ ಯೋಜನಾ ನಿರ್ದೇಶಕ ಆರ್.ಎನ್.ವಾಸುದೇವ್ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದರು. ಇದೀಗ ಭ್ರಷ್ಟಾಚಾರ ಆರೋಪ ಹೊತ್ತ ವಾಸುದೇವ್​ ಅವರನ್ನ ಬೆಂಗಳೂರು ಗ್ರಾಮಾಂತರ ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

ವಾಸುದೇವ್ ವಿರುದ್ಧ ಆದಾಯಕ್ಕಿಂತ ಶೇ.203ರಷ್ಟು ಆಸ್ತಿ ಗಳಿಸಿರುವ ಆರೋಪ ಇದೆ. ಕುಟುಂಬಸ್ಥರ ಹೆಸರಿನಲ್ಲಿ ಆಸ್ತಿ ಗಳಿಸಿರುವ ಬಗ್ಗೆ ತಿಳಿದು ಬಂದಿದೆ. ಮನೆಗಳನ್ನು ಬಾಡಿಗೆಗೆ ನೀಡುವ ಉದ್ದೇಶದಿಂದ​ ಅವರು ನಗರದಾದ್ಯಂತ ಒಟ್ಟು 5 ಮನೆಗಳನ್ನು ನಿರ್ಮಾಣ ಮಾಡಿದ್ದರು ಎನ್ನಲಾಗಿದೆ. ಜೊತೆಗೆ ಕುಟುಂಬಸ್ಥರ ಹೆಸರಲ್ಲಿ ಒಟ್ಟು 28 ಮನೆಗಳು ಇರುವ ಕುರಿತು ನ್ಯೂಸ್​ಫಸ್ಟ್​ಗೆ ಮಾಹಿತಿ ಲಭ್ಯವಾಗಿದೆ.

ಪತ್ನಿಯ ಹೆಸರಲ್ಲಿ ಮಲ್ಲೇಶ್ವರಂನ 18ನೇ ಕ್ರಾಸ್​ನಲ್ಲಿ ಹೆಂಡತಿ ಹೆಸರಿನಲ್ಲಿ 1 ಮನೆ, ಕೆಂಗೇರಿ ಉಪನಗರದ 3ನೇ ಮುಖ್ಯರಸ್ತೆಯಲ್ಲಿ ಒಂದು ಮನೆ, ಕೆಂಗೇರಿಯ ಶಾಂತಿ ವಿಲಾಸ ಲೇಔಟ್​ನ ಚರ್ಚ್ ಬಳಿ 1 ಮನೆ, ಸೋಂಪುರ ಗ್ರಾಮದಲ್ಲಿ ಪುತ್ರನ ಹೆಸರಿನಲ್ಲಿ ಮನೆ ನಿರ್ಮಾಣ ಮಾಡಲಾಗಿದೆ. ಮಾಕಳಿಕುಪ್ಪೆ ಗ್ರಾಮದಲ್ಲಿ 1 ಎಕರೆ 38 ಗುಂಟೆ ಜಮೀನು, ಮಾಕಳಿ ಗ್ರಾಮದಲ್ಲಿ 2 ಎಕರೆ 8 ಗುಂಟೆ ಜಮೀನು 4 ಸೈಟ್​, ಪತ್ತೆ ಆಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕು ಹೊಸಕೆರೆಹಳ್ಳಿ ಬ್ಯಾರಮೌಂಟ್​ ಅಪಾರ್ಟ್​ಮೆಂಟ್​ನಲ್ಲಿ ಫ್ಲ್ಯಾಟ್​ ಹೊಂದಿರುವುದು ಪತ್ತೆ ಆಗಿದೆ.

ಆರ್ಕಾವತಿ 7ನೇ ಬ್ಯಾಕ್ ಬಡಾವಣೆಯಲ್ಲಿ 3 ಬಿ.ಡಿ.ಎ ನಿವೇಶನ.ಜ್ಞಾನಭಾರತಿಯ ನಾಗದೇವನಹಳ್ಳಿಯ ಬಿಡಿಎ ನಿವೇಶನ, ವಿಶ್ವೇಶ್ವರಯ್ಯ ಬಡಾವಣೆಯಲ್ಲಿ 2 ನಿವೇಶನ, ಕೆಂಗರಿ ಸಮೀಪದ ಸೂಲಿಕೆರೆಯಲ್ಲಿ ನಿವೇಶನ ಹೊದಿದ್ದಾರೆ ಎನ್ನಲಾಗಿದೆ. ಜೊತೆಗೆ ಸ್ಕೋಡಾ, ವೋಲ್ವೋ, ಬೆನ್ಜ್, ಟಾಟಾ ಕಂಪನಿಯ 5 ಐಷಾರಾಮಿ ಕಾರುಗಳು ಮತ್ತು 925.60 ಗ್ರಾಂ ಚಿನ್ನಾಭರಣ, 9 ಕೆ.ಜಿ ಬೆಳ್ಳಿ ಸಾಮಾನು17.27 ಲಕ್ಷ ನಗದು, 1.31 ಕೋಟಿ ಬ್ಯಾಂಕ್ ಖಾತೆಯಲ್ಲಿ ಹಣ ಪತ್ತೆಯಾಗಿದೆ ಎಂದು ಮಾಹಿತಿ ಸಿಕ್ಕಿದೆ.

ಇದನ್ನೂ ಓದಿ:ಕಳ್ಳತನಕ್ಕಾಗಿ ಆಂಧ್ರ to ಬೆಂಗಳೂರು: ಸಿವಿಲ್ ಎಂಜಿನಿಯರ್​​ನ ಖತರ್ನಾಕ್ ದಂಧೆ..!

News First Live Kannada


Leave a Reply

Your email address will not be published. Required fields are marked *