ಬೆಂಗಳೂರು: ಕೋವಿಡ್ ವಾಕ್ಸಿನ್ ಪಡೆದ ಬಹುಪಾಲು ಬೆಂಗಳೂರು ನಗರ ಪೊಲೀಸರು ಸೇಫ್ ಆಗಿದ್ದಾರೆ. ಕೊರೊನಾ ಫ್ರಂಟ್ ಲೈನ್ ವಾರಿಯರ್ಸ್ ಆದ ಶೇ.96.1% ಪೊಲೀಸ್ರಿಗೆ ವಾಕ್ಸಿನೇಷನ್ ಆಗಿದೆ.

ನಗರದಲ್ಲಿರುವ 21 ಸಾವಿರದ 130 ಪೊಲೀಸರ ಪೈಕಿ ಇದುವರೆಗೂ ಮೊದಲ ಡೋಸ್ ಪಡೆದವರು 18,297.. ಇನ್ನು ಈ ಪೈಕಿ 15,093 ಪೊಲೀಸರು ಎರಡೂ ಡೋಸ್​ ಪಡೆದುಕೊಂಡಿದ್ದಾರೆ. ಈಗಿನ ಎರಡನೇ ಅಲೆಯಲ್ಲಿ ಬೆಂಗಳೂರಿನ 1,663 ಪೊಲೀಸರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 16 ಪೊಲೀಸ್ ಸಿಬ್ಬಂದಿ ಚಿಕಿತ್ಸೆ ಫಲಕಾರಿಯಾಗದೆ ಎರಡನೇ ಅಲೆಯಲ್ಲಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಇನ್ನು 1,319 ಪೊಲೀಸರು ಚಿಕಿತ್ಸೆ ಪಡೆದು ಗುಣುಮುಖರಾಗಿದ್ದಾರೆ. ಸದ್ಯ 328 ಪೊಲೀಸರು ಆ್ಯಕ್ಟಿವ್ ಕೊರೊನಾ​ ಕೇಸ್ ಪಟ್ಟಿಯಲ್ಲಿದ್ದಾರೆ.

 

The post ಬೆಂಗಳೂರಿನ ಬಹುಪಾಲು ಪೊಲೀಸರು ಕೊರೊನಾದಿಂದ ಸೇಫ್​.. ಹೇಗೆ ಗೊತ್ತಾ..? appeared first on News First Kannada.

Source: newsfirstlive.com

Source link