ಬೆಂಗಳೂರು: ಎಲಿ ಲಿಲ್ಲಿ ಅಂಡ್ ಕೋ ಅಭಿವೃದ್ಧಿಪಡಿಸಿರುವ ಆ್ಯಂಟಿ ಬಾಡಿ ಡ್ರಗ್​ ಕಾಕ್​ಟೇಲ್​ನ್ನು ಕೋವಿಡ್ ಸೋಂಕಿತರ ಚಿಕಿತ್ಸೆಗೆ ದೇಶದಲ್ಲಿ ಬಳಸಲು ಡಿಸಿಜಿಐನಿಂದ ಅನುಮತಿ ಸಿಕ್ಕಿದೆ. ಈ ಕಾಕ್​ಟೇಲ್​ನ್ನು​ ಮೃದು ಮತ್ತು ಮಧ್ಯಮ ಸೋಂಕಿತರ ಚಿಕಿತ್ಸೆಗೆ ಬಳಸಲಾಗುತ್ತದೆ.

ಯುಎಸ್​ ಔಷಧಿ ತಯಾರಕರ ಮೊನೊಕೊಲೊನಾಲ್ ಆ್ಯಂಟಿಬಾಡೀಸ್​​ಗಳಾದ ಬಾಮ್ಲನಿವಿಮ್ಯಾಬ್ ಮತ್ತು ಎಸ್ಟೆವಿಮ್ಯಾಬ್​ಗಳ ಮಿಶ್ರಣ ಇದಾಗಿದ್ದು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಯಸ್ಕ ಸೋಂಕಿತರಿಗೆ ಈ ಔಷಧಿಯನ್ನು ನೀಡಬಹುದಾಗಿದೆ. ಮೊನೊಕೊಲೊನಾಲ್ ಆ್ಯಂಟಿ ಬಾಡೀಸ್​​ಗಳು ನೈಸರ್ಗಿಕ ಆ್ಯಂಟಿಬಾಡೀಸ್​ಗಳಂತೆ ವರ್ತಿಸುವ ಮೂಲಕ ಸೋಂಕಿನ ವಿರುದ್ಧ ಹೋರಾಡಲಿದೆ ಎನ್ನಲಾಗಿದೆ.

ಸದ್ಯ ಲಿಲ್ಲಿ ಅಂಡ್ ಕೊ ಕಂಪನಿ ಭಾರತ ಸರ್ಕಾರದ ಜೊತೆಗೆ ಔಷಧಿಯನ್ನ ದಾನವಾಗಿ ನೋಡುವ ಮೂಲಕ ಕೋವಿಡ್ ವಿರುದ್ಧದ ಹೋರಾಟಕ್ಕೆ ಮತ್ತಷ್ಟು ವೇಗ ತುಂಬುವ ಕುರಿತು ಮಾತುಕತೆ ನಡೆಸಿದೆ ಎನ್ನಲಾಗಿದೆ.

The post ಬೆಂಗಳೂರಿನ ಲಿಲ್ಲಿಯ ಕಾಕ್​​ಟೇಲ್​ ಔಷಧಿಗೆ ಸಿಕ್ತು DCGI ಅನುಮತಿ appeared first on News First Kannada.

Source: newsfirstlive.com

Source link