ಬೆಂಗಳೂರಿನ ಶಾಲೆಗಳಿಗೆ ಹುಸಿ ಬಾಂಬ್ ಇ-ಮೇಲ್ ಪ್ರಕರಣ; VPN ಬಳಸಿ ಮೇಲ್ ಮಾಡಿರೋ ಶಂಕೆ | Bengaluru Police suspect that an bomb e mail was made using a VPN


ಬೆಂಗಳೂರಿನ ಶಾಲೆಗಳಿಗೆ ಹುಸಿ ಬಾಂಬ್ ಇ-ಮೇಲ್ ಪ್ರಕರಣ; VPN ಬಳಸಿ ಮೇಲ್ ಮಾಡಿರೋ ಶಂಕೆ

ಸಾಂಕೇತಿಕ ಚಿತ್ರ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಶಾಲೆಗಳಿಗೆ ಬಾಂಬ್ (Bomb) ಇಟ್ಟಿರುವುದಾಗಿ ಬೆದರಿಕೆ ಮೇಲ್ ಬಂದಿರುವ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರಗೊಂದು ಅನುಮಾನ ಮೂಡಿದೆ. ವಿಪಿಎನ್ (VPN) ಬಳಸಿ ಮೇಲ್ ಮಾಡಿರುವ ಬಗ್ಗೆ ಪೊಲೀಸರಿಗೆ ಶಂಕೆ ವ್ಯಕ್ತವಾಗಿದ್ದು, ವಿಪಿಎನ್ ಪ್ರೊವೈಡರ್​ಗೆ ಪೊಲೀಸರು ಮಾಹಿತಿಯನ್ನು ಕೇಳಿದ್ದಾರೆ. ಸಂಜೆಯೊಳಗೆ ಮಾಹಿತಿ ಪೊಲೀಸರ ಕೈಸೇರುವ ಸಾಧ್ಯತೆಯಿದೆ. ಇನ್ನು ಬೇರೆ ಬೇರೆ ದೇಶಗಳ ಐಡಿ ಬಳಸಿರುವ ಬಗ್ಗೆಯೂ ಶಂಕೆ ಮೂಡಿದೆ. ಸದ್ಯ ಪೊಲೀಸರು ಗೂಗಲ್ನಿಂದ ಕೆಲ ಮಾಹಿತಿ ಪಡೆದಿದ್ದಾರೆ.

ಬೆದರಿಕೆ ಇ-ಮೇಲ್​ಗಳ ಬಗ್ಗೆ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ. ಇ-ಮೇಲ್ ರಿಜಿಸ್ಟ್ರೇಷನ್ ಮಾಹಿತಿ, ಲಾಗಿನ್ IP ಮಾಹಿತಿ, ಇ-ಮೇಲ್ ಡ್ರಾಫ್ಟ್, ಇ-ಮೇಲ್ ಇನ್ ಬಾಕ್ಸ್ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ. ಸರ್ವರ್ ಪ್ರೊ ವೈಡರ್ ಬಳಿ ಪೊಲೀಸರು 11 ಪ್ರಶ್ನೆ ಕೇಳಿದ್ದು, ಗೂಗಲ್ ಪೊಲೀಸ್ ಅಧಿಕಾರಿಗಳಿಗೆ ಬಾಂಬ್ ಬೆದರಿಕೆ ಮೇಲ್ಗಳ ಐಪಿ (IP) ಅಡ್ರೆಸ್ ಕೊಟ್ಟಿದೆ. ದಕ್ಷಿಣ ಕೊರಿಯಾ, ಮೊರಾಕೋ, ಜೋರ್ಡನ್ ಐಪಿ ಅಡ್ರೆಸ್ಗಳನ್ನು ನೀಡಿರುವ ಬಗ್ಗೆ ಮಾಹಿತಿ ಇದೆ. ಬೇರೆ ಬೇರೆ ದೇಶಗಳ ಐಪಿ ಮೂಲಕ ಮೇಲ್ ಬಂದಿರೋದು ಪತ್ತೆಯಾಗಿದ್ದು, ಸೈಬರ್ ಕ್ರೈಮ್ ಪೊಲೀಸರ ನೆರವಿನಿಂದ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

TV9 Kannada


Leave a Reply

Your email address will not be published.