ಬೆಂಗಳೂರು: ನಗರದ ಮಿಲಿಟರಿ ಅಧಿಕಾರಿಗಳ ಮೇಲೆ ಸೈಬರ್​ ದಾಳಿ ನಡೆದ ಪ್ರಕರಣ ಬೆಳಕಿಗೆ ಬಂದಿದೆ. ಮಿಲಿಟರಿ ವೆಬ್​ಸೈಟ್​ಗೆ ಸಂಬಂಧಿತ ಲಿಂಕ್​ಗಳು ಹ್ಯಾಕ್​ ಆಗಿರುವ ಕುರಿತು ನ್ಯೂಸ್​ಫಸ್ಟ್​ಗೆ ಸಿಸಿಬಿ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಮಿಲಿಟರಿ ಅಧಿಕಾರಿಯೊಬ್ಬರು ಕೆಲಸದ ನಿಮಿತ್ತ ತಮ್ಮ ಸಿಬ್ಬಂದಿಗೆ ಪಿಡಿಎಫ್​ನ ಲಿಂಕ್​ ಒಂದನ್ನ ಕಳುಹಿಸಿದ್ದರಂತೆ. ಆ ಲಿಂಕ್ ಓಪನ್​ ಮಾಡಿದಾಗ ಆ ಲಿಂಕ್​ ಬೇರೆ ಯಾವುದೋ ವೆಬ್​ಸೈಟ್​ಗೆ ಅಟ್ಯಾಚ್ ಆಗಿದೆ. ಜೊತೆಗೆ ಬೇರೆ ವೆಬ್​ಸೈಟ್​ ಓಪನ್​ ಆಗಿದೆ. ಮತ್ತು ಬೇರೆ ಬೇರೆ ಇಮೇಜಸ್​ಗಳು ಓಪನ್​ ಆಗಿವೆ ಅನ್ನೋ ಮಾಹಿತಿ ಸಿಕ್ಕಿದೆ. ಕೂಡಲೇ ಅಲರ್ಟ್ ಆದ ಮಿಲಿಟರಿ ಅಧಿಕಾರಿಗಳು ಮಿಲಿಟರಿ ಇಂಟಲಿಜೆನ್ಸ್ ಹಾಗೂ ಸಿಸಿಬಿಗೆ ಮಾಹಿತಿ ನೀಡಿದ್ದಾರೆ.

ವೆಬ್​ಸೈಟ್​ ಲಿಂಕ್​ಗಳು ಹ್ಯಾಕ್ ಆಗಿರುವ ಅನುಮಾನದ ಮೇರೆಗೆ ತನಿಖೆಗಿಳಿದ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಌಂಡ್​ ಟೀಮ್​.. ವೆಬ್​ಸೈಟ್​ ಮೂಲ ತಡಕಾಡಿದಾಗ ಜರ್ಮನ್ ಬೇಸ್ಡ್ ಲಿಂಕ್​ ಕಲ್ಯಾಣ ನಗರದ HRBR ಲೇಔಟ್​ನಿಂದ ಆಪರೇಟ್ ಆಗಿರೋದು ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಕೂಡಲೇ ಎಚ್ಚೆತ್ತ ಪೊಲೀಸ್ ಅಧಿಕಾರಿಗಳು ಹೆಚ್​ಆರ್​ಬಿಆರ್ ಲೇಔಟ್​ನಲ್ಲಿರುವ ಖಾಸಗಿ ಕಂಪನಿ ಮೇಲೆ ದಾಳಿ ನಡೆಸಿದ್ದಾರೆ. ಆದರೆ ಈ ಬಗ್ಗೆ ನಮಗೆ ಏನೂ ಗೊತ್ತಿಲ್ಲ ಅಂತಾ ಕಂಪನಿ ಹೇಳಿದೆ. ಸದ್ಯ ತನಿಖೆಯನ್ನ ಮುಂದುವರಿಸಿರುವ ಸಿಸಿಬಿ ಅಧಿಕಾರಿಗಳು ಖಾಸಗಿ ಕಂಪನಿಯ ಕಂಪ್ಯೂಟರ್​ಗಳನ್ನು ಸೀಜ್ ಮಾಡಿ ಪರಿಶೀಲನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

The post ಬೆಂಗಳೂರಿನ ಸಂಸ್ಥೆಯಿಂದಲೇ ದೇಶ ದ್ರೋಹ? ಮಿಲಿಟರಿ ವೆಬ್​ಸೈಟ್​ ಹ್ಯಾಕ್ ಹಿನ್ನೆಲೆ CCB ದಾಳಿ appeared first on News First Kannada.

Source: newsfirstlive.com

Source link