ಬೆಂಗಳೂರಿನ ಸಿಂಗಪೂರ್ ಕಾಲೊನಿಯಲ್ಲಿ  ಮಳೆನೀರಿನ ಜೊತೆ ಹಾವುಗಳೂ ಹರಿದು ಬರುತ್ತಿವೆ!


Boys with snake

ಬೆಂಗಳೂರಿನಲ್ಲಿ ಮಳೆ ಸುರಿಯುವುದು ನಿಂತಿಲ್ಲ. ರವಿವಾರ ಬೆಳಿಗ್ಗೆ ನಗರದಲ್ಲಿ ಆಗಸ ಶುಭ್ರವಾಗಿತ್ತು. ಮಧ್ಯಹ್ನದವರೆಗೆ ಎಳೆ ಬಿಸಿಲು ಹರಡಿ ಮಳೆ ಬಾರದೇ ಹೋದಾಗ ನಗರದ ನಿವಾಸಿಗಳು ಸದ್ಯ ತೊಲಗಿತಲ್ಲ ಅಂತ ನಿಟ್ದುಸಿರಾಗಿದ್ದರು. ಮಳೆ ಕಾರಣ ಕಳೆದೊಂದು ವಾರದಿಂದ ಮನೆಯಿಂದ ಹೊರಗೆ ಹೋಗಿರದ ಅವರು ಮಾರ್ಕೆಟ್ ಗೆ, ಮಾಲ್ಗಳಿಗೆ ಮತ್ತು ಸಿನಿಮಾ ಥೇಟರ್ಗಳಿಗೆ ಲಗ್ಗೆಯಿಟ್ಟಿದ್ದರು. ಮಧ್ಯಾಹ್ನ ಮೂರು ಗಂಟೆವರೆಗೆ ಎಲ್ಲರೂ ಸಂಡೇಯನ್ನು ಎಂಜಾಯ್ ಮಾಡುತ್ತಿದ್ದರು. ಅದರೆ ಅಲ್ಲಿಂದ ಶುರುವಾಯಿತು ನೋಡಿ ಮಳೆ. ನಾನಾ ಕಾರಣಗಳಿಗೆ ಹೊರಹೋಗಿದ್ದ ಜನ ಮಳೆಯಲ್ಲಿ ಸಿಕ್ಕಿಕೊಂಡರು. ಕಾರುಗಳಿದ್ದವರು ಮನೆ ಸೇರಿದರು ಅದರೆ, ಟೂ ವ್ಹೀಲರ್ಗಳಲ್ಲಿ ಹೊರ ಹೋದವರು ಮಳೆಯಲ್ಲಿ ನೆನೆದು ಅದಕ್ಕೆ ಹಿಡಿಶಾಪ ಹಾಕುತ್ತಾ ಮನಗಳಿಗೆ ವಾಪಸ್ಸು ಹೋದರು. ಮಧ್ಯಾಹ್ನ ಶುರುವಾದ ಮಳೆ ಮಧ್ಯರಾತ್ರಿಯವರೆಗೆ ಸುರಿಯುತ್ತಲೇ ಇತ್ತು.

ನಗರದಲ್ಲಿ ಮಳೆಯಿಂದ ಆಗುತ್ತಿರುವ ಅನಾಹುತಗಳ ಬಗ್ಗೆ ನಿಮಗೊಂದು ವಿಡಿಯೋ ತೋರಿಸಬೇಕಿದೆ. ಇದು ಬೆಂಗಳೂರಿನಲ್ಲಿರುವ ಸಿಂಗಾಪುರ ಹೆಸರಿನ ಪ್ರದೇಶ. ಇಲ್ಲಿನ ನಿವಾಸಿಗಳಿಗೆ ಮಳೆ ಜೊತೆ ಹಾವುಗಳ ಕಾಟವು ಹೆಚ್ಚಾಗಿದೆ. ಕಾಲುವೆಗಳಲ್ಲಿ ಹರಿದು ಬರುತ್ತಿರುವ ಮಳೆ ನೀರಿನ ಜೊತೆ ಹಾವುಗಳೂ ಹರಿದು ಬರುತ್ತಿವೆ. ಈ ಯುವಕ ಒಂದು ಹಾವನ್ನು ಹಿಡಿದು ಅದನ್ನು ಸುರಕ್ಷಿತವಾದ ಸ್ಥಳಕ್ಕೆ ತೆಗೆದುಕೊಂಡು ಹೋಗಿ ಬಿಟ್ಟಿದ್ದಾನೆ.

ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಯುವಕ ಉರಗ ಪರಿಣಿತನೇನೂ ಅಲ್ಲ. ಆದರೂ ಧೈರ್ಯ ಮಾಡಿ ಅದನ್ನು ಹಿಡಿದಿದ್ದಾನೆ. ಆಫ್ ಕೋರ್ಸ್ ಅವನ ಧೈರ್ಯವನ್ನು ಮೆಚ್ಚಬೇಕು. ಆದರೆ, ಅವನ ಜೊತೆ ಬೇರೆ ಯುವಕರು ಮತ್ತು ಚಿಕ್ಕ ವಯಸ್ಸಿನ ಹುಡುಗರೂ ಇದ್ದಾರೆ. ಅವರು ಕೆಮೆರಾಗೆ ಪೋಸು ನೀಡುತ್ತಿರುವ ಪರಿಯನ್ನು ಗಮನಿಸಿ. ತಾವೇ ಹಾವು ಹಿಡಿದವರಂತಿದೆ ಅವರ ಧೋರಣೆ, ಅದರಲ್ಲೂ ವಿಶೇಷವಾಗಿ ಹಸಿರು ಸ್ವೆಟರ್ ತೊಟ್ಟಿರುವ ಯುವಕನ ವರ್ತನೆ.

ಇದನ್ನೂ ಓದಿ:    ರಾಜಕಾರಣಿಗಳಿಂದ ಮಹಿಳೆಯರಿಗೆ ಅವಮಾನ; ಜ್ಯೂ. ಎನ್​ಟಿಆರ್​ ನೀಡಿದ ಎಚ್ಚರಿಕೆ ಸಂದೇಶದ ವಿಡಿಯೋ ಇಲ್ಲಿದೆ

TV9 Kannada


Leave a Reply

Your email address will not be published. Required fields are marked *