ಮಂಡ್ಯ: ಬೆಂಗಳೂರಿನಲ್ಲಿ ಕೊರೊನಾದಿಂದ ಸಾವನ್ನಪ್ಪಿರುವವರ ಅಸ್ಥಿಗಳು ಅನಾಥವಾಗಿ ಬಿದ್ದಿದ್ದು, ಅಂತಹ ಅಸ್ಥಿಗಳಿಗೆ ಇಂದು ಕಾವೇರಿ ಮತ್ತು ಕಪಿಲ ನದಿಗಳ ಸಂಗಮ ಸ್ಥಳದಲ್ಲಿ ಮುಕ್ತಿ ಕೊಡಲಾಗುವುದು.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಬೆಳಕವಾಡಿ ಗ್ರಾಮದ ಬಳಿಯ ಕಾವೇರಿ ಮತ್ತು ಕಪಿಲ ನದಿಗಳು ಸಂಗಮವಾಗುವ ಸ್ಥಳದಲ್ಲಿ 857 ಅಸ್ಥಿಗಳನ್ನು ಸಚಿವ ಆರ್.ಅಶೋಕ್ ಅವರ ನೇತೃತ್ವದಲ್ಲಿ ಅಸ್ತಿಯನ್ನು ವಿಸರ್ಜನೆ ಮಾಡಲಾಗುತ್ತದೆ.

ಬೆಂಗಳೂರಿನ ಸ್ಮಶಾನಗಳಲ್ಲಿ ಅಸ್ತಿಗಳು ಅನಾಥವಾಗಿ ಬಿದ್ದಿದ್ದ, ಪರಿಣಾಮ ಅಸ್ಥಿಗಳನ್ನು ವಿಸರ್ಜನೆ ಮಾಡಿ ಎಂದು ಬಿಬಿಎಂಪಿ ಮನವಿ ಮಾಡಿಕೊಂಡಿತ್ತು. ಇದಾದ ಬಳಿಕವೂ ಅಸ್ಥಿಯನ್ನು ತೆಗೆದುಕೊಂಡು ಹೋಗಲು ಯಾರು ಬಂದಿರಲಿಲ್ಲ.

ಹೀಗಾಗಿ ರಾಜ್ಯ ಸರ್ಕಾರದ ವತಿಯಿಂದ ಸಚಿವ ಆರ್.ಅಶೋಕ್ ಅವರು ಇಂದು 12.30ಕ್ಕೆ ವಿಸರ್ಜನೆ ಮಾಡಲಿದ್ದಾರೆ. ಬೆಳಕವಾಡಿಯಲ್ಲಿ ಅನಾಥ ಅಸ್ಥಿಗಳನ್ನು ವಿಧಿ-ವಿಧಾನದ ಮೂಲಕ ವಿಸರ್ಜನೆ ಮಾಡಲು ಸಕಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

The post ಬೆಂಗಳೂರಿನ ಸ್ಮಶಾನಗಳಲ್ಲಿರುವ ಅನಾಥ ಅಸ್ಥಿಗಳಿಗೆ ಇಂದು ಮಂಡ್ಯದಲ್ಲಿ ಮೋಕ್ಷ appeared first on Public TV.

Source: publictv.in

Source link