ಬೆಂಗಳೂರು: ಶವ ಸಂಸ್ಕಾರಕ್ಕೆ ತೊಂದರೆಯಾಗಿರೋ ಹಿನ್ನೆಲೆಯಲ್ಲಿ, ಗಿಡ್ಡೇನಹಳ್ಳಿ ಹಾಗೂ ಕುರುಬರಹಳ್ಳಿಯಲ್ಲಿ 3 ಎಕರೆ ಜಾಗದಲ್ಲಿ ತಾತ್ಕಾಲಿಕ ಶವಾಗಾರ ನಿರ್ಮಾಣ ಮಾಡಲಾಗಿದೆ.

ರಾಜ್ಯದಲ್ಲಿ ಕೊರನಾ ಅಟ್ಟಹಾಸ ದಿನೇ ದಿನೆ ಹಚ್ಚಾಗುತ್ತಲೇ ಇದೆ, ಸೋಂಕಿತರ ಸಂಖ್ಯೆಯ ಜೊತೆಗೆ ಕೊರೊನಾದಿಂದ ಮೃತ ಪಟ್ಟವರ ಸಂಖ್ಯೆ ಸಹ ಏರಿಕೆಯಾಗುತ್ತಿದೆ. ಈ ಕಾರಣದಿಂದಾಗಿ ಶವಾಗಾರಗಳ ಮುಂಭಾಗ ಕ್ಯೂ ಸಹ ಜೋರಾಗಿದ್ದು, ಸಿಬ್ಬಂದಿ ದಿನದ 24 ಗಂಟೆಯೂ ಸಂಸ್ಕಾರ ಮಾಡುವ ಪರಿಸ್ಥಿತಿ ಉಂಟಾಗಿತ್ತು. ಇದಕ್ಕೆ ಅನುಕೂಲವಾಗಲಿ ಎಂದು ಬಿಬಿಎಂಪಿ 2 ತಾತ್ಕಾಲಿಕ ಚಿತಾಗಾರಗಳನ್ನ ಆರಂಭಿಸಿದೆ. 2 ಚಿತಾಗಾರಗಳಲ್ಲಿ ಒಂದೇ ಸಮಯದಲ್ಲಿ 25 ಮೃತ ದೇಹಗಳ ಅಂತ್ಯಸಂಸ್ಕಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.  ಗಿಡ್ಡನಹಳ್ಳಿಯಲ್ಲಿ ತಾತ್ಕಾಲಿಕ ಚಿತಾಗಾರ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಕುರುಬರಹಳ್ಳಿ ಚಿತಾಗಾರದಲ್ಲಿ ಇಂದಿನಿಂದ ಕೊರೊನಾ ಮೃತದೇಹಗಳ ಅಂತ್ಯ ಸಂಸ್ಕಾರ ಪ್ರಾರಂಭವಾಗಿದೆ.

The post ಬೆಂಗಳೂರಿನ ಹೊರವಲಯದಲ್ಲಿ 2 ತಾತ್ಕಾಲಿಕ ಚಿತಾಗಾರ ನಿರ್ಮಾಣ appeared first on News First Kannada.

Source: News First Kannada
Read More