ಬೆಂಗಳೂರು: ನಗರದ ಬೆಂಗಳೂರು ಇನ್ಸ್​ಟಿಟ್ಯೂಟ್ ಆಫ್ ಗ್ಯಾಸ್ಟ್ರೋಎಂಟಿರಾಲಜಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಮಸ್ಯೆ ಎದುರಾಗಿದೆ. ಈ ಆಸ್ಪತ್ರೆಯ ಐಸಿಯು, ವೆಂಟಿಲೇಟರ್, ಆಕ್ಸಿಜನ್ ಸಪೋರ್ಟ್​ನಲ್ಲಿ 42 ಮಂದಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು ಸದ್ಯ 550 ಲೀಟರ್ ಆಕ್ಸಿಜನ್ ಮಾತ್ರ ಉಳಿದಿದೆ ಎನ್ನಲಾಗಿದೆ. ದಿನವೊಂದಕ್ಕೆ ಈ ಆಸ್ಪತ್ರೆಗೆ 1.5 ಟನ್ ಆಕ್ಸಿಜನ್ ಅವಶ್ಯಕತೆ ಇದೆಯಂತೆ.

ಸದ್ಯ ಉಳಿದಿರುವ ಆಕ್ಸಿಜನ್ ಮುಂದಿನ 4 ರಿಂದ 5 ಗಂಟೆಗಳವರೆಗೆ ಮಾತ್ರ ಬಳಕೆಯಾಗಲಿದೆ ಎಂದು ಆಸ್ಪತ್ರೆಯ ಸಿಬ್ಬಂದಿ ಆತಂಕ ವ್ಯಕ್ತಪಡಿಸಿದ್ದಾರೆ. ಈ ಕುರಿತು ಆರೋಗ್ಯ ಸಚಿವರಿಗೆ ಹೇಳಿದ್ರೂ ಯಾವುದೇ ರೆಸ್ಪಾಂಡ್ ಮಾಡಿಲ್ಲವಂತೆ. ಇತ್ತ ಸಂಸದ ತೇಜಸ್ವಿ ಸೂರ್ಯ ಅವರ ಗಮನಕ್ಕೆ ತಂದ್ರೂ ರೆಸ್ಪಾನ್ಸ್ ಸಿಕ್ಕಿಲ್ಲವಂತೆ. ಗ್ಯಾಸ್ ಪೂರೈಕೆ ಮಾಡುವ ಅಮೋಘ್ ಗ್ಯಾಸ್ ಏಜೆನ್ಸಿಯನ್ನು ಸಂಪರ್ಕಿಸಿದರೂ ಆಕ್ಸಿಜನ್ ಸಪ್ಲೈ ಆಗ್ತಿಲ್ಲ ಎನ್ನಲಾಗಿದೆ.

 

The post ಬೆಂಗಳೂರಿನ BIG ಆಸ್ಪತ್ರೆಯಲ್ಲಿ ಆಕ್ಸಿಜನ್ ಎಮರ್ಜೆನ್ಸಿ.. ಆರೋಗ್ಯ ಸಚಿವರು ನೋ ರೆಸ್ಪಾನ್ಸ್ appeared first on News First Kannada.

Source: newsfirstlive.com

Source link