ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಸದ್ಯ ದೇಶದ ಅತ್ಯಂತ ಬ್ಯುಸಿ ನಗರ. ಊಹೆಗೂ ನಿಲುಕದ ರೀತಿಯಲ್ಲಿ ಬೆಳವಣಿಗೆ ಹೊಂದುತ್ತಿರುವ ಈ ಉದ್ಯಾನ ನಗರಿಯಲ್ಲಿ ಅಪಘಾತಗಳ ಸಂಖ್ಯೆಗಳು ಕೂಡ ಅಷ್ಟೇ ವೇಗವಾಗಿ ದಾಖಲಾಗುತ್ತಿವೆ. ಹೌದು, ಕಳೆದ 17 ದಿನಗಳಲ್ಲಿ ಬರೋಬ್ಬರಿ 25 ರಸ್ತೆ ಅಪಘಾತಗಳು ಬೆಂಗಳೂರಲ್ಲಿ ದಾಖಲಾಗಿವೆ.
ಹೊಸ ವರ್ಷದ ಆರಂಭವಾಗುತ್ತಿದ್ದಂತೆ ಅಪಘಾತಗಳ ಸಂಖ್ಯೆ ತೀವ್ರವಾಗಿದ್ದು 25 ಅಪಘಾತ ಪ್ರಕರಣಗಳ ಪೈಕಿ 29 ಮಂದಿ ದಾರುಣ ಸಾವು ಕಂಡಿದ್ದಾರೆ. ಎಷ್ಟೇ ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದರೂ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿರೋದು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಇನ್ನು ಈ ಡೆಡ್ಲಿ ಆಕ್ಸಿಡೆಂಡ್ಗಳಿಗೆ ಕಾರಣ ಏನು?
- ರಾತ್ರಿ ವೇಳೆ ರಸ್ತೆಯಲ್ಲಿ ಸರಿಯಾಗಿ ಬೆಳಕಿನ ಸೌಕರ್ಯವೇ ಇಲ್ಲ
- ಅವೈಜ್ಞಾನಿಕ ಉಬ್ಬು. ಮತ್ತೊಂದು ಕಾರಣ ಉಬ್ಬು ಇದ್ದರೂ ಅದರ ಮೇಲೆ ಪೈಂಟ್ ಹಾಕದೇ ಇರೋದು.
- ರಸ್ತೆ ತಿರುವುಗಳು ಇರೋ ಮಾಹಿತಿನೇ ಇಲ್ಲದಿರೋದು
- ಹೀಗೆ ಈ ಎಲ್ಲ ಹಲವಾರು ಕಾರಣಗಳಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ ಎನ್ನಲಾಗ್ತಿದೆ.
25 ಅಪಘಾತಗಳಲ್ಲಿ 6 ಮೇಜರ್
- ಜನವರಿ 10 ರಂದು ಕುಂಬಳಗೋಡಿನಲ್ಲಿ ನಡೆದ ಅಪಘಾತದಲ್ಲಿ ನಾಲ್ವರ ಸಾವು
- 11ನೇ ತಾರೀಕು ಯಲಹಂಕದಲ್ಲಿ ನಡೆದ ಆಕ್ಸಿಡೆಂಟ್ ನಲ್ಲಿ ಓರ್ವ ಮಹಿಳೆ ಮೃತ
- 13ನೇ ತಾರೀಕು ಕುಮಾರಸ್ವಾಮಿಲೇಔಟ್ ನಲ್ಲಿ ಓರ್ವ ಸಾವು
- ಜನವರಿ 8 ರಂದು ಕುಮಾರಸ್ವಾಮಿ ಲೇಔಟ್ ನಲ್ಲಿ ನಡೆದ ಅಪಘಾತದಲ್ಲಿ ಒಂದೇ ಕುಟುಂಬದ ಮೂರು ಜನರ ದುರ್ಮರಣ
- ಬನಶಂಕರಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಇಬ್ಬರ ಸಾವು
The post ಬೆಂಗಳೂರು ಆಗ್ತಿದೆ ‘ಆಕ್ಸಿಡೆಂಟ್ ಸಿಟಿ’: 17 ದಿನದಲ್ಲಿ 29 ಮಂದಿ ಸಾವು appeared first on News First Kannada.