ಬೆಂಗಳೂರು ಉಸ್ತುವಾರಿ ಪಡೆಯಲು ಬೆನ್ನುಬಿದ್ದ ನಾಯಕರು.. ಬೊಮ್ಮಾಯಿ ನಿರ್ಧಾರವೇನು..?

ಬೆಂಗಳೂರು: ನಗರ ಉಸ್ತುವಾರಿ ನೀಡುವಂತೆ ನಗರ ಸಚಿವರು ಒತ್ತಡ ಹಾಕಿದ್ದು ಇದು ಸಿಎಂ ಬಸವರಾಜ್ ಬೊಮ್ಮಾಯಿಗೆ ಕಿರಿಕಿರಿ ತಂದಿದೆ ಎನ್ನಲಾಗಿದೆ. CM ಗೆ ಬೆಂಗಳೂರು ಉಸ್ತುವಾರಿ ನೀಡುವಂತೆ ನಗರ ಸಚಿವರು ಒತ್ತಡ ಹಾಕುತ್ತಿದ್ದು ಆರಂಭದಿಂದಲೂ ಮಹಾ ನಗರದ ಉಸ್ತುವಾರಿ ಪಡೆಯಲು ಹಲವು ಸಚಿವರು ಪೈಪೋಟಿ ನಡೆಸಿದ್ದಾರೆ ಎನ್ನಲಾಗಿದೆ.

ಸದ್ಯದಲ್ಲೇ BBMP ಚುನಾವಣೆ ಕೂಡ ಘೋಷಣೆ ಆಗುವ ಸಾಧ್ಯತೆ ಇದೆ.. ಇಂತಹ ಸಂದರ್ಭದಲ್ಲಿ ಬೆಂಗಳೂರು ಉಸ್ತುವಾರಿ ನೀಡುವಂತೆ ಸಚಿವರ ಬೇಡಿಕೆ ಹೆಚ್ಚಾಗಿದ್ದು ಈ ಬಗ್ಗೆ ಪರಿಶೀಲನೆ ಮಾಡುವ ತೀರ್ಮಾನಕ್ಕೆ ಬೊಮ್ಮಾಯಿ ಬಂದಿದ್ದರು. ಆದರೆ, ಪೈಪೋಟಿ, ನಗರ ಸಚಿವರಲ್ಲಿ ಮೂಡದ ಒಮ್ಮತ, ಮಹಾ ನಗರದ ಸಚಿವರಲ್ಲಿ ಏಕತೆ ಕಂಡುಬಂದಿರಲಿಲ್ಲ. ಇಂತಹ ಸಂದರ್ಭದಲ್ಲಿ ಬೆಂಗಳೂರು ನಗದರ ಉಸ್ತುವಾರಿ ಹಂಚಿಕೆ ಸೂಕ್ತವಲ್ಲ ಎಂಬ ತೀರ್ಮಾನಕ್ಕೆ ಸದ್ಯ ಸಿಎಂ ಬಂದಿದ್ದಾರಂತೆ.

ಇಲ್ಲದ ಗೊಂದಲ ಉಂಟು ಮಾಡುವುದು ಬೇಡ ಎಂಬ ತೀರ್ಮಾನಕ್ಕೆ ಬೊಮ್ಮಾಯಿ ಬಂದಿದ್ದು ಯಾರಿಗೂ ಬೆಂಗಳೂರು ಉಸ್ತುವಾರಿ ನೀಡುವುದು ಬೇಡ. ಅನಿವಾರ್ಯವಾದರೆ, BBMP ಚುನಾವಣೆಗೂ ಉಸ್ತುವಾರಿಯನ್ನ ತಮ್ಮ ಬಳಿಯೇ ಇಟ್ಟುಕೊಳ್ಳಲು ತೀರ್ಮಾನ ಮಾಡಿದ್ದಾರಂತೆ.

News First Live Kannada

Leave a comment

Your email address will not be published. Required fields are marked *