ಕಲುಷಿತ ನೀರು (ಸಾಂದರ್ಭಿಕ ಚಿತ್ರ)
ಬೆಂಗಳೂರು: ಕಲುಷಿತ ನೀರು ಸೇವಿಸಿ 20ಕ್ಕೂ ಹೆಚ್ಚು ಜನರು ಅಸ್ವಸ್ಥರಾದ ಘಟನೆ ಬೆಂಗಳೂರಿನ ಟೆಲಿಕಾಂ ಲೇಔಟ್‌ನಲ್ಲಿ ನಡೆದಿದೆ. ಹೆಚ್‌ಬಿಆರ್ ಲೇಔಟ್‌ನ ಟೆಲಿಕಾಂ ಲೇಔಟ್‌ನಲ್ಲಿ ಘಟನೆ ಸಂಭವಿಸಿದೆ. ವಾಂತಿ, ಬೇಧಿಯಿಂದ 20ಕ್ಕೂ ಹೆಚ್ಚು ಜನ ಬಳಲುತ್ತಿದ್ದಾರೆ. ಅಸ್ವಸ್ಥ ಜನರಿಗೆ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕುಡಿಯುವ ನೀರಿಗೆ ಒಳಚರಂಡಿ ನೀರು ಸೇರಿ ಅವಘಡ ಸಂಭವಿಸಿದೆ.
ಶಿವಮೊಗ್ಗ: ಮದುವೆ ಮನೆಯಲ್ಲಿ ಊಟ ಮಾಡಿದ್ದವರಿಗೆ ವಾಂತಿ ಭೇದಿ; 150ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲು
ಮದುವೆ ಮನೆಯಲ್ಲಿ ಊಟ ಮಾಡಿದ್ದವರಿಗೆ ವಾಂತಿ ಭೇದಿ ಉಂಟಾದ ಘಟನೆ ಸಂಭವಿಸಿದೆ. ಈ ಸಂಬಂಧ ಮೆಗ್ಗಾನ್ ಆಸ್ಪತ್ರೆಗೆ 150ಕ್ಕೂ ಹೆಚ್ಚು ಜನರು ದಾಖಲು ಆಗಿದ್ದಾರೆ. ಶಿವಮೊಗ್ಗ ತಾಲೂಕಿನ ಹರಮಘಟ್ಟದಲ್ಲಿ ನಿನ್ನೆ (ನವೆಂಬರ್ 12) ಮದುವೆ ನಡೆದಿತ್ತು. ನಿನ್ನೆ ವಾಂತಿ ಭೇದಿಯಿಂದ 50 ಜನರು ಆಸ್ಪತ್ರೆಗೆ ದಾಖಲು ಆಗಿದ್ದರು. ಇಂದು (ನವೆಂಬರ್ 13) 100ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲು ಆಗಿದ್ದಾರೆ.
ಮಕ್ಕಳಿಬ್ಬರ ಮದುವೆ ಮಾಡಿದ್ದ ಮಲ್ಲಿಕಪ್ಪ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಚಿಕಿತ್ಸೆ ಪಡೆಯುತ್ತಿದ್ದವರ ಆರೋಗ್ಯ ವಿಚಾರಿಸಿದ್ದಾರೆ. ಊಟ, ನೀರು ಕುರಿತು ಎಲ್ಲಾ ಮುಂಜಾಗ್ರತೆ ವಹಿಸಲಾಗಿತ್ತು. ಆದರೆ, ಊಟ ಮಾಡಿದ್ದವರಿಗೆ ವಾಂತಿ ಭೇದಿ, ಚಳಿ ಜ್ವರ ಬರುತ್ತಿದೆ ಎಂದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮಲ್ಲಿಕಪ್ಪ ಹೇಳಿಕೆ ನೀಡಿದ್ದಾರೆ.
ಚಿಕ್ಕಮಗಳೂರು: ಜನ್ನಾಪುರದಲ್ಲಿ ಕಾರಲ್ಲಿ ಬಂದು 48 ಲೀ. ಹಾಲು ಕಳವು
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಜನ್ನಾಪುರದಲ್ಲಿ ಕಾರಲ್ಲಿ ಬಂದು 48 ಲೀ. ಹಾಲು ಕಳವು ಮಾಡಿದ ಘಟನೆ ಸಂಭವಿಸಿದೆ. ಕರುಣಾಕರ ಎಂಬುವರ ಅಂಗಡಿಯಲ್ಲಿ ಹಾಲು ಕಳ್ಳತನ ಮಾಡಲಾಗಿದೆ. ಹಾಲು ಕದ್ದು ಬೇಲೂರು ಮಾರ್ಗದ ಕಡೆಗೆ ಕಾರು ತೆರಳಿದೆ. ಹಾಲು ಕಳ್ಳತನ ಮಾಡಿದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ. ಗೋಣಿಬೀಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ: ಶಿವಮೊಗ್ಗ: ಮದುವೆಯಲ್ಲಿ ಊಟ ಮಾಡಿದ್ದ 30ಕ್ಕೂ ಹೆಚ್ಚು ಜನರಿಗೆ ವಾಂತಿ ಭೇದಿ; ಮೆಗ್ಗಾನ್ ಆಸ್ಪತ್ರೆಗೆ ದಾಖಲು
ಇದನ್ನೂ ಓದಿ: ಸೆಲ್ಫಿ ಹುಚ್ಚಿಗೆ ನದಿ ಮಧ್ಯದ ಬಂಡೆ ಏರಿದ್ದ ಯುವಕ ನೀರು ಪಾಲು