ಬೆಂಗಳೂರು: ಕಳ್ಳಸಾಗಣೆ ಮಾಡುತ್ತಿದ್ದ 170 ನಕ್ಷತ್ರ ಆಮೆಗಳ ರಕ್ಷಣೆ | Star Tortoise Smuggling in Bengaluru Milk Theft in Chikkamagalur Crime News


ಬೆಂಗಳೂರು: ಕಳ್ಳಸಾಗಣೆ ಮಾಡುತ್ತಿದ್ದ 170 ನಕ್ಷತ್ರ ಆಮೆಗಳ ರಕ್ಷಣೆ

ನಕ್ಷತ್ರ ಆಮೆಗಳ ರಕ್ಷಣೆ

ಬೆಂಗಳೂರು: ಕಳ್ಳಸಾಗಣೆ ಮಾಡುತ್ತಿದ್ದ 170 ನಕ್ಷತ್ರ ಆಮೆಗಳ ರಕ್ಷಣೆ ಮಾಡಲಾಗಿದೆ. ಬೆಂಗಳೂರಿನ ಕಲಾಸಿಪಾಳ್ಯ ಠಾಣೆ ಪೊಲೀಸರಿಂದ ರಕ್ಷಣೆ ಕಾರ್ಯ ನಡೆದಿದೆ. ಸಿಟಿ ಮಾರ್ಕೆಟ್ ಖಾಸಗಿ ಬಸ್ ನಿಲ್ದಾಣದಲ್ಲಿ ಬ್ಯಾಗ್​​ನಲ್ಲಿರಿಸಿದ್ದ 170 ನಕ್ಷತ್ರ ಆಮೆಗಳ ಕಳ್ಳಸಾಗಣೆ ಪತ್ತೆಯಾಗಿತ್ತು. ಇದೀಗ ಆಮೆಗಳನ್ನು ರಕ್ಷಣೆ ಮಾಡಲಾಗಿದ್ದು, ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಆಮೆಗಳ ರವಾನೆ ಮಾಡಲಾಗಿದೆ.

ಚಿಕ್ಕಮಗಳೂರು: ಜನ್ನಾಪುರದಲ್ಲಿ ಕಾರಲ್ಲಿ ಬಂದು 48 ಲೀ. ಹಾಲು ಕಳವು
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಜನ್ನಾಪುರದಲ್ಲಿ ಕಾರಲ್ಲಿ ಬಂದು 48 ಲೀ. ಹಾಲು ಕಳವು ಮಾಡಿದ ಘಟನೆ ಸಂಭವಿಸಿದೆ. ಕರುಣಾಕರ ಎಂಬುವರ ಅಂಗಡಿಯಲ್ಲಿ ಹಾಲು ಕಳ್ಳತನ ಮಾಡಲಾಗಿದೆ. ಹಾಲು ಕದ್ದು ಬೇಲೂರು ಮಾರ್ಗದ ಕಡೆಗೆ ಕಾರು ತೆರಳಿದೆ. ಹಾಲು ಕಳ್ಳತನ ಮಾಡಿದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ. ಗೋಣಿಬೀಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಬೆಂಗಳೂರು: ಕಲುಷಿತ ನೀರು ಸೇವಿಸಿ 20ಕ್ಕೂ ಹೆಚ್ಚು ಜನರು ಅಸ್ವಸ್ಥ
ಕಲುಷಿತ ನೀರು ಸೇವಿಸಿ 20ಕ್ಕೂ ಹೆಚ್ಚು ಜನರು ಅಸ್ವಸ್ಥರಾದ ಘಟನೆ ಬೆಂಗಳೂರಿನ ಟೆಲಿಕಾಂ ಲೇಔಟ್‌ನಲ್ಲಿ ನಡೆದಿದೆ. ಹೆಚ್‌ಬಿಆರ್ ಲೇಔಟ್‌ನ ಟೆಲಿಕಾಂ ಲೇಔಟ್‌ನಲ್ಲಿ ಘಟನೆ ಸಂಭವಿಸಿದೆ. ವಾಂತಿ, ಬೇಧಿಯಿಂದ 20ಕ್ಕೂ ಹೆಚ್ಚು ಜನ ಬಳಲುತ್ತಿದ್ದಾರೆ. ಅಸ್ವಸ್ಥ ಜನರಿಗೆ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕುಡಿಯುವ ನೀರಿಗೆ ಒಳಚರಂಡಿ ನೀರು ಸೇರಿ ಅವಘಡ ಸಂಭವಿಸಿದೆ.

ಶಿವಮೊಗ್ಗ: ಮದುವೆ ಮನೆಯಲ್ಲಿ ಊಟ ಮಾಡಿದ್ದವರಿಗೆ ವಾಂತಿ ಭೇದಿ; 150ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲು
ಮದುವೆ ಮನೆಯಲ್ಲಿ ಊಟ ಮಾಡಿದ್ದವರಿಗೆ ವಾಂತಿ ಭೇದಿ ಉಂಟಾದ ಘಟನೆ ಸಂಭವಿಸಿದೆ. ಈ ಸಂಬಂಧ ಮೆಗ್ಗಾನ್ ಆಸ್ಪತ್ರೆಗೆ 150ಕ್ಕೂ ಹೆಚ್ಚು ಜನರು ದಾಖಲು ಆಗಿದ್ದಾರೆ. ಶಿವಮೊಗ್ಗ ತಾಲೂಕಿನ ಹರಮಘಟ್ಟದಲ್ಲಿ ನಿನ್ನೆ (ನವೆಂಬರ್ 12) ಮದುವೆ ನಡೆದಿತ್ತು. ನಿನ್ನೆ ವಾಂತಿ ಭೇದಿಯಿಂದ 50 ಜನರು ಆಸ್ಪತ್ರೆಗೆ ದಾಖಲು ಆಗಿದ್ದರು. ಇಂದು (ನವೆಂಬರ್ 13) 100ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲು ಆಗಿದ್ದಾರೆ.

ಇದನ್ನೂ ಓದಿ: Crime News: ಮಾನವ ಹಕ್ಕು, ಭ್ರಷ್ಟಾಚಾರ ಮುಕ್ತ ಸಂಘಟನೆಯ ಉಪಾಧ್ಯಕ್ಷರ ಬರ್ಬರ ಹತ್ಯೆ

ಇದನ್ನೂ ಓದಿ: ಬೆಂಗಳೂರು: ಒಂಟಿ ಮನೆಯಲ್ಲಿ ವಾಸವಾಗಿದ್ದ ಮಹಿಳೆಯನ್ನು ಕಟ್ಟಿ ಹಾಕಿ ಕಳ್ಳತನ; ಇಬ್ಬರು ಅರೆಸ್ಟ್!

TV9 Kannada


Leave a Reply

Your email address will not be published. Required fields are marked *