ಬೆಂಗಳೂರು: ಕೊವಿಡ್ ಲಸಿಕೆ ಪೂರೈಸುವುದಕ್ಕೆ ಡ್ರೋನ್ ಬಳಕೆ; 10 ನಿಮಿಷದಲ್ಲಿ 14 ಕಿ.ಮೀ ದೂರ ಸಾಗಾಟ | Corona Vaccine Covid Vaccine Transported in Drone Bengaluru News


ಬೆಂಗಳೂರು: ಕೊವಿಡ್ ಲಸಿಕೆ ಪೂರೈಸುವುದಕ್ಕೆ ಡ್ರೋನ್ ಬಳಕೆ; 10 ನಿಮಿಷದಲ್ಲಿ 14 ಕಿ.ಮೀ ದೂರ ಸಾಗಾಟ

ಕೊವಿಡ್ ಲಸಿಕೆ ಪೂರೈಸುವುದಕ್ಕೆ ಡ್ರೋನ್ ಬಳಕೆ

ಬೆಂಗಳೂರು: ಕೊವಿಡ್ ಲಸಿಕೆ ಪೂರೈಸುವುದಕ್ಕೆ ಡ್ರೋನ್ ಬಳಕೆ ಮಾಡಲಾಗಿದೆ. ಡ್ರೋನ್ ಮೂಲಕ ಕೊವಿಡ್ ಲಸಿಕೆ ಸಾಗಾಟ ಯಶಸ್ವಿ ಆಗಿದೆ. ಎನ್​ಎಎಲ್ ಅಭಿವೃದ್ಧಿಪಡಿಸಿದ ಆಕ್ಟಾ ಕಾಪ್ಟರ್ ಮೂಲಕ ಲಸಿಕೆ ಸಾಗಾಟ ಮಾಡಲಾಗಿದೆ. ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರೀಸ್ ಡ್ರೋನ್ ಆಕ್ಟಾ ಕಾಪ್ಟರ್ ಅಭಿವೃದ್ಧಿಪಡಿಸಿದೆ. ಚಂದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಹಾರಗದ್ದೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಡ್ರೋನ್ ಮೂಲಕ ಲಸಿಕೆ ರವಾನೆ ಮಾಡಲಾಗಿದೆ.

ಡ್ರೋನ್ ಮೂಲಕ 10 ನಿಮಿಷದಲ್ಲಿ 14 ಕಿ.ಮೀ. ದೂರವನ್ನು ಆಕ್ಟಾ ಕಾಪ್ಟರ್ ಕ್ರಮಿಸಿದೆ. ರಸ್ತೆ ಮಾರ್ಗದಲ್ಲಾದರೆ 30ರಿಂದ 40 ನಿಮಿಷ ಬೇಕಾಗುತ್ತದೆ. ಇದೇ ದೂರವನ್ನು ಡ್ರೋನ್ 10 ನಿಮಿಷದಲ್ಲಿ ಕ್ರಮಿಸಿದೆ. 15 ಕೆಜಿ ತೂಕದ ಐಸ್ ಬಾಕ್ಸ್‌ನಲ್ಲಿ 50 ವಯಲ್ಸ್ ಲಸಿಕೆ ಸಾಗಾಟ ಮಾಡಲಾಗಿದೆ. ಬೆಂಗಳೂರಲ್ಲಿ ಮೊದಲ ಬಾರಿ ಡ್ರೋನ್ ಬಳಸಿ ಲಸಿಕೆ ಪೂರೈಕೆ ಯಶಸ್ವಿ ಆಗಿದೆ.

Covid Vaccine Drone

ಕೊವಿಡ್ ಲಸಿಕೆ ಪೂರೈಸುವುದಕ್ಕೆ ಡ್ರೋನ್ ಬಳಕೆ

ಇದನ್ನೂ ಓದಿ: ತುಮಕೂರು: ಕೊವಿಡ್ ಲಸಿಕೆಗೆ ಹಿಂದೇಟು; ಬಡಾವಣೆ ಜನರ ನೀರು, ವಿದ್ಯುತ್ ಸ್ಥಗಿತಗೊಳಿಸಿದ ಅಧಿಕಾರಿಗಳು

ಇದನ್ನೂ ಓದಿ: ಮುಂಬೈ ಮಹಾ ಸಾಧನೆ; ಕೊವಿಡ್ 19 ಲಸಿಕೆ ಮೊದಲ ಡೋಸ್​ ನೀಡಿಕೆ ಶೇ.100ರಷ್ಟು ಮುಕ್ತಾಯ

TV9 Kannada


Leave a Reply

Your email address will not be published. Required fields are marked *