ಬೆಂಗಳೂರು ಗಾಂಧಿನಗರದ ಮಿಂಚು ಫ್ಯಾಮಿಲಿ ರೆಸ್ಟೋರೆಂಟ್​ನಲ್ಲಿ ಹೊಡೆದಾಟ! ತುಮಕೂರಿನಲ್ಲಿ ಕಾರಿನಲ್ಲಿದ್ದ 15 ಲಕ್ಷ ನಗದು ದೋಚಿ ಪರಾರಿಯಾಗಿದ್ದ ಆರೋಪಿ ಬಂಧನ | Two men assaulted a young man at a Minchu family restaurant in Bangalore Gandhinagar


ಬೆಂಗಳೂರು ಗಾಂಧಿನಗರದ ಮಿಂಚು ಫ್ಯಾಮಿಲಿ ರೆಸ್ಟೋರೆಂಟ್​ನಲ್ಲಿ ಹೊಡೆದಾಟ! ತುಮಕೂರಿನಲ್ಲಿ ಕಾರಿನಲ್ಲಿದ್ದ 15 ಲಕ್ಷ ನಗದು ದೋಚಿ ಪರಾರಿಯಾಗಿದ್ದ ಆರೋಪಿ ಬಂಧನ

ಮಿಂಚು ಫ್ಯಾಮಿಲಿ ರೆಸ್ಟೋರೆಂಟ್, ಹಲ್ಲೆಗೆ ಒಳಗಾದ ಯುವಕ

ಪ್ರಸನ್ನ, ಅಜಯ್ ಯುವಕನ ತಲೆಯ ಭಾಗಕ್ಕೆ ಹೊಡೆದು ಪರಾರಿಯಾಗಲು ಮುಂದಾಗಿದ್ದರು. ಹೊಯ್ಸಳ ಪೊಲೀಸರು ಸ್ಥಳಕ್ಕಾಗಮಿಸಿ ಆರೋಪಿಗಳನ್ನ ವಶಕ್ಕೆ ಪಡೆದಿದ್ದಾರೆ.

ಬೆಂಗಳೂರು: ಗಾಂಧಿನಗರದಲ್ಲಿರುವ ಮಿಂಚು ಫ್ಯಾಮಿಲಿ ರೆಸ್ಟೋರೆಂಟ್​ನಲ್ಲಿ (Family Restaurant) ಹೊಡೆದಾಟ ನಡೆದಿದ್ದು, ಕ್ಷುಲ್ಲಕ ವಿಚಾರಕ್ಕೆ ಯುವಕನ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಪಬ್ನಲ್ಲಿ (Pub) ಬಾಣಸವಾಡಿ ನಿವಾಸಿಗಳಾದ ಪ್ರಸನ್ನ, ಅಜಯ್ ಎಂಬುವವರು ಮೊಬೈಲ್ ವಿಚಾರವಾಗಿ ಜಗಳ ತೆಗೆದು ಭಕ್ಷಿಗಾರ್ಡನ್ ನಿವಾಸಿ ಸುಂದರ್ ಎಂಬುವನ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹಲ್ಲೆ ಮಾಡಿದ್ದ ಇಬ್ಬರನ್ನು ವಿಚಾರಣೆ ಮಾಡುತ್ತಿದ್ದಾರೆ.

ಪ್ರಸನ್ನ, ಅಜಯ್ ಯುವಕನ ತಲೆಯ ಭಾಗಕ್ಕೆ ಹೊಡೆದು ಪರಾರಿಯಾಗಲು ಮುಂದಾಗಿದ್ದರು. ಹೊಯ್ಸಳ ಪೊಲೀಸರು ಸ್ಥಳಕ್ಕಾಗಮಿಸಿ ಆರೋಪಿಗಳನ್ನ ವಶಕ್ಕೆ ಪಡೆದಿದ್ದಾರೆ. ಇನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಗಾಯಾಳುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ತಡರಾತ್ರಿ 1.30 ರ ಸುಮಾರಿಗೆ ನಡೆದಿದೆ.

15 ಲಕ್ಷ ನಗದು ದೋಚಿ ಪರಾರಿಯಾಗಿದ್ದ ಆರೋಪಿ ಸೆರೆ:
ತುಮಕೂರು: ಕಾರಿನಲ್ಲಿ ಇಟ್ಟಿದ್ದ 15 ಲಕ್ಷ ನಗದು ದೋಚಿ ಪರಾರಿಯಾಗಿದ್ದ ಆರೋಪಿಯನ್ನು ಜಿಲ್ಲೆಯ ಕೊರಟಗೆರೆ ಪೊಲೀಸರು ಕಾರ್ಯಾಚರಣೆ ನಡೆಸಿ ಸೆರೆ ಹಿಡಿದಿದ್ದಾರೆ. ಬಿಹಾರ ಮೂಲದ ಕಾರು ಚಾಲಕ ಬಿಪಿನ್ ಬಂಧಿತ ಆರೋಪಿ. ಬೆಂಗಳೂರು ಮೂಲದ ಸತೀಶ್ ಎಂಬುವರು ಜಮೀನು ಕೊಳ್ಳಲು ಕೊರಟಗೆರೆಗೆ ಬಂದಿದ್ದರು. ಈ ವೇಳೆ ಕಾರಿನಲ್ಲಿ 15 ಲಕ್ಷ ರೂ. ಹಣ ಇಟ್ಟುಕೊಂಡು ಕಾರಿನಲ್ಲಿ ಬಂದಿದ್ದರು. ಈ ವೇಳೆ ಚಾಲಕ ಹಣ ಕಸಿದುಕೊಂಡು ಪರಾರಿಯಾಗಿದ್ದ. ತಮ್ಮ ಕಾರು ಚಾಲಕ ವಿರುದ್ಧ ಸತೀಶ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

TV9 Kannada


Leave a Reply

Your email address will not be published.