ಬೆಂಗಳೂರು: ತೆರಿಗೆ ಪಾವತಿಸದ ಮಂತ್ರಿ ಮಾಲ್‌ಗೆ ಮತ್ತೆ ಬೀಗ ಹಾಕಿದ BBMP ಅಧಿಕಾರಿಗಳು | BBMP Officials at Mantri Mall Bengaluru News Mantri Mall Locked for not paying Tax


ಬೆಂಗಳೂರು: ತೆರಿಗೆ ಪಾವತಿಸದ ಮಂತ್ರಿ ಮಾಲ್‌ಗೆ ಮತ್ತೆ ಬೀಗ ಹಾಕಿದ BBMP ಅಧಿಕಾರಿಗಳು

ಮಂತ್ರಿ ಮಾಲ್‌

ಬೆಂಗಳೂರು: ಮಂತ್ರಿ ಮಾಲ್‌ಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳು ಇಂದು (ನವೆಂಬರ್ 15) ಮತ್ತೆ ಬೀಗ ಹಾಕಿದ್ದಾರೆ. ತೆರಿಗೆ ಪಾವತಿಸದ ಹಿನ್ನೆಲೆ ಮಂತ್ರಿ ಮಾಲ್​ಗೆ ಮತ್ತೆ ಬೀಗ ಹಾಕಲಾಗಿದೆ. 22 ಕೋಟಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಮಂತ್ರಿಮಾಲ್ ವಿರುದ್ಧ ಬಿಬಿಎಂಪಿ ಕ್ರಮ ಕೈಗೊಂಡಿದೆ. ಹಿಂದೆ ಬೀಗ ಹಾಕಿದ್ದಾಗ 5 ಕೋಟಿ ತೆರಿಗೆ ಪಾವತಿಸಿದ್ದ ಮಾಲ್ ಬಳಿಕ ಬಾಕಿ ತೆರಿಗೆ ಪಾವತಿಗೆ ಸಮಯ ಕೇಳಿತ್ತು. ಆಡಳಿತ ಮಂಡಳಿಗೆ ಕೊಟ್ಟ ಸಮಯಾವಕಾಶ ಇದೀಗ ಮುಕ್ತಾಯಗೊಂಡ ಹಿನ್ನೆಲೆ ಇಂದು ಮತ್ತೆ ಮಂತ್ರಿಮಾಲ್​ಗೆ ಬೀಗ ಹಾಕಲಾಗಿದೆ.

ಮಾಲ್​ನ ಮುಖ್ಯದ್ವಾರಕ್ಕೆ ಅಡ್ಡಲಾಗಿ ಅಧಿಕಾರಿಗಳು ನಿಂತಿದ್ದಾರೆ. ಮಾಲ್ ಒಳಗೆ ಯಾರನ್ನು ಬಿಡದೆ ಬಾಗಿಲು ಹಾಕಿದ್ದಾರೆ. ಕಳೆದ ಮೂರು ವರ್ಷದಿಂದ ಟ್ಯಾಕ್ಸ್ ಕಟ್ಟದ ಮಂತ್ರಿಮಾಲ್ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ. ಮಂತ್ರಿ ಮಾಲ್ 27 ಕೋಟಿ ಬಾಕಿ ಬಡ್ಡಿ ಸಮೇತ 36 ಕೋಟಿ ಹಣ ಕಟ್ಟಬೇಕಿದೆ. ಕಳೆದ ಬಾರಿ 5 ಕೋಟಿ ಹಣ ಕಟ್ಟಿ ಟೈಂ ತೆಗೆದುಕೊಂಡಿದ್ದ ಮಂತ್ರಿಮಾಲ್, ಮತ್ತೆ ಟ್ಯಾಕ್ಸ್ ಕಟ್ಟದ ಕಾರಣ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.

ಸ್ಥಳಕ್ಕೆ ಬಂದಿರುವ ಬಿಬಿಎಂಪಿ ಅಧಿಕಾರಿಗಳು‌ ಹಣ ಕಟ್ಟದೇ ಇದ್ರೆ ಮಂತ್ರಿಮಾಲ್ ಬಾಗಿಲು ಹಾಕಿಸುವ ಎಚ್ಚರಿಕೆ ನೀಡಿದ್ದಾರೆ. ಮಂತ್ರಿಮಾಲ್​ನಿಂದ ಮೂರು ವರ್ಷದಿಂದ 27 ಕೋಟಿ ತೆರಿಗೆ ಕಟ್ಟಿಲ್ಲ. ಕಳೆದ ಬಾರಿ 5 ಕೋಟಿ ಕಟ್ಟಿದ್ರು, ಆಗಸ್ಟ್‌ ಮೂವತ್ತಕ್ಕೆ ಉಳಿದ ಹಣ ನೀಡುವುದಾಗಿ ಹೇಳಿದ್ರು‌. ಇನ್ನೂ ಕಟ್ಟಿಲ್ಲ ಹಾಗಾಗಿ ಇವತ್ತು ತೆರಿಗೆ ಕೇಳೋಕೆ ಬಂದಿದ್ದೀವಿ. ಕಮಿಷನರ್ ಹತ್ರ ಮಾತಾಡ್ತಿವಿ ಅಂತಿದ್ದಾರೆ. ಕಮಿಷನರ್​ರಿಂದ ನಮಗೆ ಯಾವುದೇ ಸೂಚನೆ ಬಂದಿಲ್ಲ. ಸ್ವಲ್ಪ ಸಮಯ ಕಾಯ್ತಿವಿ, ನಂತರ ನಿರ್ಧಾರ ತಗೋತಿವಿ ಎಂದು ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: Delhi Pollution: ದೆಹಲಿಯಲ್ಲಿ ಸಂಪೂರ್ಣ ಲಾಕ್​ಡೌನ್​ಗೆ ಸಿದ್ಧ; ಸುಪ್ರೀಂ ಕೋರ್ಟ್​ಗೆ ಅಫಿಡವಿಟ್ ಸಲ್ಲಿಸಿದ ಕೇಜ್ರಿವಾಲ್ ಸರ್ಕಾರ

ಇದನ್ನೂ ಓದಿ: Kurup: ದುಲ್ಕರ್ ಸಲ್ಮಾನ್ ನಟನೆಯ ಕುರುಪ್ ಚಿತ್ರಕ್ಕೆ ಸಂಕಷ್ಟ; ಹೈಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ

TV9 Kannada


Leave a Reply

Your email address will not be published. Required fields are marked *