ಬೆಂಗಳೂರು: ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯ ದೇಹ ಪತ್ತೆ, ಅಳಿಯನೇ ಮಗಳನ್ನು ಕೊಂದಿದ್ದಾನೆಂದು ತಂದೆಯ ಆರೋಪ – Body of a homemaker found hanging in Bengaluru, deceased’s father cries foul video story in Kannadaಅಳಿಯ ಮಹಬೂಬ್ ಷರೀಫ್ ಗೆ ಸೋನಿಯಾ ಹೆಸರಿನ ಇನ್ನೊಬ್ಬ ಮಹಿಳೆ ಜೊತೆ ಸಂಬಂಧವಿತ್ತು, ಅದಕ್ಕೆ ಅಡ್ಡಿಪಡಿಸುತ್ತಿದ್ದ ತನ್ನ ಮಗಳನ್ನು ಕೊಲ್ಲಲಾಗಿದೆ ಎಂದು ಜಾವೆದ್ ಹೇಳುತ್ತಾರೆ.

TV9kannada Web Team


| Edited By: Arun Belly

Nov 28, 2022 | 10:43 AM
ಬೆಂಗಳೂರು: ನಗರದ ಸದ್ದುಗುಂಟೆಪಾಳ್ಯದ ಗುರಪ್ಪಮಪಾಳ್ಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ 29-ವರ್ಷ-ವಯಸ್ಸಿನ ಗೃಹಿಣಿ ಕುಬ್ರಾ ಖಾನಮ್ (Kubra Khanum) ಅವರ ದೇಹ ಪತ್ತೆಯಾಗಿದೆ. ಮಾಧ್ಯಮದವರ ಜೊತೆ ಮಾತಾಡಿದ ಮೃತಳ ತಂದೆ ಜಾವೆದ್ ಉಲ್ಲಾ ಖಾನ್ (Javed Ullah Khan), ತನ್ನ ಅಳಿಯನೇ ಮಗಳನ್ನು ಕೊಂದು ದೇಹವನ್ನು ನೇಣಿಗೆ ಹಾಕಿದ್ದಾನೆ ಎಂದು ಅರೋಪಿಸಿದ್ದಾರೆ. ಅಳಿಯ ಮಹಬೂಬ್ ಷರೀಫ್ ಗೆ (Mehaboob Shariff) ಸೋನಿಯಾ ಹೆಸರಿನ ಇನ್ನೊಬ್ಬ ಮಹಿಳೆ ಜೊತೆ ಸಂಬಂಧವಿತ್ತು, ಅದಕ್ಕೆ ಅಡ್ಡಿಯಾದ್ದ ತನ್ನ ಮಗಳನ್ನು ಕೊಲ್ಲಲಾಗಿದೆ ಎಂದು ಅವರು ಹೇಳುತ್ತಾರೆ. ಮಹಬೂಬ್ ಷರೀಫ್, ಮೌಲಾ, ಮಹ್ಮದ್ ಷರೀಫ್ ಮತ್ತು ನಗೀನಾ ತಾಜ್-ನಾಲ್ವರು ಸೇರಿ ಕುಬ್ರಾ ಖಾನಮ್ ಳನ್ನು ಕೊಂದಿದ್ದಾರೆಂದು ಅವರು ಆರೋಪಿಸುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

TV9 Kannada


Leave a Reply

Your email address will not be published. Required fields are marked *