Notice: Trying to access array offset on value of type bool in /home/savikannada/public_html/wp-content/plugins/featured-image-from-URL-premium/includes/attachment.php on line 89

Notice: Trying to access array offset on value of type bool in /home/savikannada/public_html/wp-content/plugins/featured-image-from-URL-premium/includes/attachment.php on line 90

ಬೆಂಗಳೂರು: ರಾಜ್ಯದಲ್ಲಿ ಅನ್​​ಲಾಕ್​​ ಆಗಿದೆ ಎಂದಾಕ್ಷಣ ಕೊರೊನಾ ಹೊರಟು ಹೋಗಿದೆ ಎಂದರ್ಥವಲ್ಲ. ಕನಿಷ್ಠ ಶೇ.75 ರಷ್ಟು ಮಂದಿಗೆ ಲಸಿಕೆ ಸಿಗುವವರೆಗೂ ನಾವು ಎಚ್ಚರಿಕೆಯಿಂದ ಇರಬೇಕು. ಜನರ ಆರ್ಥಿಕ ಪರಿಸ್ಥಿತಿಯನ್ನು ಗಮನಹರಿಸಿ ಅನ್​​ಲಾಕ್​ ಮಾಡಿದ್ದೇವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಸಚಿವ ಸುಧಾಕರ್​​ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು.. ರಾಜ್ಯದಲ್ಲಿ ಸಾವಿನ ಸಂಖ್ಯೆ ಮುಚ್ಚಿಟ್ಟಿಲ್ಲ. ಅನ್​ಲಾಕ್ ಮಾಡಿದ್ದರೂ ಜನರು ಎಚ್ಚರಿಕೆಯಿಂದ ಇರಬೇಕು. ಎರಡು ಡೋಸ್ ಲಸಿಕೆ ಪಡೆಯೋವರೆಗೂ ಜನ ಎಚ್ಚರವಾಗಿ ಇರಬೇಕು. ರಾಜ್ಯದಲ್ಲಿ ಕನಿಷ್ಠ 70% ಡೋಸ್ ಕಂಪ್ಲೀಟ್ ಆದ ಮೇಲೆ ನಾವು ಮೊದಲಿನಂತೆ ಆರಾಮ ಆಗಬಹುದು. ಲಸಿಕೆ‌ ಹಾಕಿಸಿಕೊಳ್ಳೋವರೆಗೂ ಯಾರು ಮೈಮರೆಯಬಾರದು. ರಾಜ್ಯದಲ್ಲಿ ಆರ್ಥಿಕ ನಷ್ಟ ಆಗಿದೆ. ಹೀಗಾಗಿ ಕೆಲ ವಿನಾಯಿತಿ ಕೊಡಲಾಗಿದೆ. ಒಂದು ವೇಳೆ ರಿಯಾಯ್ತಿಯಿಂದ ಸೋಂಕು ಹೆಚ್ಚಳವಾದ್ರೆ ಮತ್ತೆ ಕಠಿಣ ಕ್ರಮಕೈಗೊಳ್ಳುತ್ತೇವೆ. ಶೇ.10 ಹೆಚ್ಚು ಸೋಂಕು ಇರುವ ಜಿಲ್ಲೆಗಳನ್ನ ಗಂಭೀರವಾಗಿ ಪರಿಗಣಿಸಬೇಕು. ಶೇ.5 ಒಳಗೆ ಸೋಂಕು ಇರುವ ಜಿಲ್ಲೆಗಳು ಎಚ್ಚರ ತಪ್ಪಬಾರದು ಎಂದರು.

ಸೋಂಕಿನ ನಿಯಂತ್ರಣಕ್ಕೆ ಹೆಚ್ಚು ಹೆಚ್ಚು ಟೆಸ್ಟ್ ಗಳನ್ನು ಮಾಡಲು ಕ್ರಮವಹಿಸಬೇಕು. ಅಂತರ ರಾಜ್ಯ, ಹೊರ ದೇಶದಿಂದ ಬರೋರಿಗೆ ಕಡ್ಡಾಯ ಚೆಕ್ ಪಾಯಿಂಟ್ ಗಳಲ್ಲಿ ಕಡ್ಡಾಯವಾಗಿ ಟೆಸ್ಟ್ ಆಗಬೇಕು. ಒಂದು ಗ್ರಾಮದಲ್ಲಿ 5 ಸೋಂಕಿತರು ಕಂಡು ಬಂದರೇ ಗ್ರಾಮವನ್ನೆ ಸೀಲ್ ಡೌನ್ ಮಾಡಬೇಕು. ಗ್ರಾಮ ಭಾಗದಲ್ಲಿ ಸೋಂಕು ಬಂದ ವ್ಯಕ್ತಿಯನ್ನ ಕೂಡಲೇ ಕೋವಿಡ್ ಕೇರ್ ಸೆಂಟರ್ ಗೆ ಸೇರಿಸಬೇಕು. ನಗರ ಭಾಗದಲ್ಲಿ ಜನ ಅನಗತ್ಯವಾಗಿ ಓಡಾಡಬಾರದು. ಬೆಂಗಳೂರು ನೋಡಿದ್ರೆ ನನಗೂ ಭಯ ಆಗುತ್ತೆ. ಏಕೆಂದರೆ ಸ್ವಲ್ಪ ಎಚ್ಚರ ತಪ್ಪಿದ್ರು ಆಪಾಯ ಗ್ಯಾರಂಟಿ. ಬೆಂಗಳೂರಿನಲ್ಲಿ ಶೇ.15-20 ಜನರು ವಾಸಿಸುತ್ತಿದ್ದಾರೆ. ಆದ್ದರಿಂದ ಜನ ಎಚ್ಚರಿಕೆಯಿಂದ ಇರಬೇಕು. ಸರ್ಕಾರದ ನಿಯಮ ಎಲ್ಲರೂ ಕಡ್ಡಾಯವಾಗಿ ಪಾಲನೆ ಮಾಡಬೇಕು. 3-4 ತಿಂಗಳಲ್ಲಿ ಎಲ್ಲರಿಗೂ ಲಸಿಕೆ ಸಿಗುತ್ತೆ. ಅಲ್ಲಿಯವರೆಗೂ ಎಲ್ಲರೂ ಎಚ್ಚರವಾಗಿ ನಿಯಮ ಪಾಲನೆ ಮಾಡಬೇಕು ಮನವಿ ಮಾಡಿದರು.

The post ‘ಬೆಂಗಳೂರು ನೋಡಿದ್ರೆ ನನಗೂ ಭಯ ಆಗುತ್ತೆ’ -ಹೀಗೆ​ ಯಾಕೆ ಅಂದ್ರು ಸುಧಾಕರ್? appeared first on News First Kannada.

Source: newsfirstlive.com

Source link

Leave a Reply

You missed