ಬೆಂಗಳೂರು: ದೇಶದಲ್ಲಿ ಆರೋಗ್ಯ ತುರ್ತುಪರಿಸ್ಥಿತಿಯನ್ನು ನಿರ್ಮಿಸಿರುವ ಕೊರೊನಾ ಮಹಾಮಾರಿ ವಿರುದ್ಧ ರಿಯಲ್​​ ಹೀರೋ ಸೋನು ಸೂದ್ ನಡೆಸುತ್ತಿರುವ ಮುಂದುವರಿದಿದೆ. ಒಂದೆಡೆ ಕನ್ನಡಿಗರ ಪ್ರೀತಿ, ಅಭಿಮಾನದಿಂದ ದೊಡ್ಡ ದೊಡ್ಡ ಸ್ಟಾರ್​ಗಳಾದ್ರೆ.. ಇನ್ನೊಂದೆಡೆ ಸೋನು ಸೂದ್ ಕನ್ನಡಿಗ ಪೊಲೀಸರಿಗೆ ಬೆರವಾಗಿದ್ದಾರೆ. ಹೌದು ಕೊರೊನಾ ಸೋಂಕಿನ ನಿಯಂತ್ರಣಕ್ಕಾಗಿ ದಿನದ 24 ಗಂಟೆಯೂ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಪೊಲೀಸ್​​ ಇಲಾಖೆಯ ನೆರವಿಗೆ ಸೋನು ಸೂದ್​​ ಚಾರಿಟಬಲ್​​ ಟ್ರಸ್ಟ್​​​ ಬಂದಿದೆ.

ಕೊರೊನಾ ವಾರಿಯರ್ಸ್ ಆಗಿರುವ ಪೊಲೀಸರು ಸೋಂಕಿಗೆ ತುತ್ತಾರುತ್ತಿರುವ ಹಲವು ವರದಿಗಳು ನಮ್ಮ ಎದುರಿದೆ. ಈ ಹಿನ್ನೆಲೆಯಲ್ಲಿ ಪೊಲೀಸರ ನೆರವಿಗೆ ಧವಿಸಿರುವ ಸೋನುಸೂದ್ ಚಾರಿಟಬಲ್ ಟ್ರಸ್ಟ್ ಪೊಲೀಸ್​ ಇಲಾಖೆಗೆ ಆಕ್ಸಿಜನ್ ಕಾನ್ಸ್​ಂಟ್ರೇಟರ್ ಯಂತ್ರಗಳನ್ನು ನೀಡಿದ್ದಾರೆ. ಈ ಆಕ್ಸಿಜನ್ ಕಾನ್ಸ್​ಂಟ್ರೇಟರ್​ಗಳು ಯಂತ್ರಗಳು ಸುಮಾರು 80 ಸಾವಿರ ರೂಪಾಯಿ ಬೆಲೆಬಾಳುತ್ತವೆ.

ಬೆಂಗಳೂರು ಪೊಲೀಸ್​ ಕಮಿಷನರ್ ಕಮಲ್ ಪಂತ್ ಅವರಿಗೆ ವಿಡಿಯೋ ಕಾಲ್​ ಮಾಡಿ ಆಕ್ಸಿಜನ್ ಕಾನ್ಸನ್​ಟ್ರೇಟರ್​​​ ಯಂತ್ರಗಳನ್ನು ಸ್ವೀಕರಿಸುವಂತೆ ಮನವಿ ಮಾಡಿದ್ದಾರೆ. ಸೋನು ಸೂದ್ ಚಾರಿಟಬಲ್ ಟ್ರಸ್ಟ್​​​ನ ಹಶ್ಮತ್ ಎಂಬುವವರಿಗೆ ಆಕ್ಸಿಜನ್ ಕಾನ್ಸ್​ಂಟ್ರೇಟರ್​​ಗಳನ್ನು ನೀಡಿ, ಯಾವುದೇ ಪ್ರಚಾರವಿಲ್ಲದೇ ಸೈಲೆಂಟಾಗಿ ಪೊಲೀಸ್​ ಇಲಾಖೆಗೆ ತಲುಪಿಸಿದ್ದಾರೆ.

The post ಬೆಂಗಳೂರು ಪೊಲೀಸ್​​ ಪಾಲಿಗೆ ‘ನಮ್ಮ’ ಹೀರೋ ಸೋನು ಸೂದ್; ಅವರು ಮಾಡಿದ್ದು ನೋಡಿದ್ರೆ ಹೆಮ್ಮೆ ಪಡ್ತೀರಾ appeared first on News First Kannada.

Source: newsfirstlive.com

Source link