ಮಂಡ್ಯ: ಬೆಂಗಳೂರಿನಲ್ಲಿ ಇಂದು ಮಧ್ಯಾಹ್ನ 12;15ರಲ್ಲಿ ಭೂಮಿ ಕಂಪಿಸಿದ ಅನುಭವ ಆಗಿತ್ತು. ಈ ಬೆನ್ನಲ್ಲೇ ರಾಮನಗರ ಹಾಗೂ ಮಂಡ್ಯ ಜಿಲ್ಲೆಯ ಕೆಲವು ಭಾಗಗಳಲ್ಲಿ ಕಂಪಿಸಿದ ಅನುಭವ ಜನರಿಗೆ ಎದುರಾಗಿದೆ.
ರಾಮನಗರದಲ್ಲಿ ಮಧ್ಯಾಹ್ನ 12:30 ರ ವೇಳೆಗೆ ಮಾಗಡಿ, ಚನ್ನಪಟ್ಟಣ ಹಾಗೂ ಬಿಡದಿಯಲ್ಲಿ ಜನರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಇನ್ನು ಮಂಡ್ಯದ ಬೆಳಗ್ಗೆ 10;15ರ ಸಮಯದಲ್ಲಿ 2 ಬಾರಿ ದೊಡ್ಡ ಶಬ್ದದೊಂದಿಗೆ ಭೂಮಿ ಕಂಪಿಸಿದ ಅನುಭವಾಗಿದ್ದು, 11:50ರ ಸುಮಾರಿಗೆ ಜೋರು ಶಬ್ದದೊಂದಿಗೆ ಭೂಕಂಪನದ ಅನುಭವವಾಗಿದ್ದು, ಮನೆ, ಕಚೇರಿ ಕಟ್ಟಡಗಳ ಕಿಟಕಿಗಳು, ವಸ್ತುಗಳು ಅಲುಗಾಡಿದ ಅನುಭವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
The post ಬೆಂಗಳೂರು ಬೆನ್ನಲ್ಲೇ ಮಂಡ್ಯ, ರಾಮನಗರದಲ್ಲೂ ಕಂಪಿಸಿದ ಭೂಮಿ appeared first on News First Kannada.