ಬೆಂಗಳೂರು: ಮಾಜಿ ಕಾರ್ಪೊರೇಟರ್ ಶಿವಪ್ಪ ಆತ್ಮಹತ್ಯೆ ಪ್ರಕರಣ; ಐವರ ವಿರುದ್ಧ ಎಫ್​ಐಆರ್ ದಾಖಲು | Bengaluru FIR Registered against Five People Crime News Karnataka Police


ಬೆಂಗಳೂರು: ಮಾಜಿ ಕಾರ್ಪೊರೇಟರ್ ಶಿವಪ್ಪ ಆತ್ಮಹತ್ಯೆ ಪ್ರಕರಣ; ಐವರ ವಿರುದ್ಧ ಎಫ್​ಐಆರ್ ದಾಖಲು

ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಮಾಜಿ ಕಾರ್ಪೊರೇಟರ್ ಶಿವಪ್ಪ ಆತ್ಮಹತ್ಯೆ ಪ್ರಕರಣ ಸಂಬಂಧ ಐವರ ವಿರುದ್ಧ ಎಫ್​ಐಆರ್ ದಾಖಲು ಮಾಡಲಾಗಿದೆ. ಬೆಂಗಳೂರಿನ ಚಂದ್ರಾಲೇಔಟ್ ಠಾಣೆಯಲ್ಲಿ FIR ದಾಖಲು ಮಾಡಲಾಗಿದೆ. ಪ್ರಕರಣ ಸಂಬಂಧ ಧನಂಜಯಗೌಡ, ಅರುಣ್ ಕುಮಾರ್, ಅಶೋಕ್ ಕುಮಾರ್ ಸೇರಿ ಐವರ ವಿರುದ್ಧ FIR ದಾಖಲಾಗಿದೆ. ಮೃತ ಶಿವಪ್ಪ ಪತ್ನಿ ಗಾಯತ್ರಿ ಐವರ ವಿರುದ್ಧ ದೂರು ನೀಡಿದ್ದರು. ಅತ್ತಿಗುಪ್ಪೆ ನಿವಾಸದಲ್ಲಿ ಮಾಜಿ ಕಾರ್ಪೊರೇಟರ್ ಆತ್ಮಹತ್ಯೆ ನಡೆದಿತ್ತು.

ಶಿವಮೊಗ್ಗದ ಹುಣಸೋಡು ಬಳಿ ಜಿಲೆಟಿನ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಪಿಐಎಲ್ ವಿಚಾರಣೆ ನಡೆಸಲಾಗಿದೆ. ತನಿಖೆ ಪೂರ್ಣಗೊಳಿಸಿ ಮೂವರ ವಿರುದ್ಧ ಚಾರ್ಜ್​​ಶೀಟ್ ಸಲ್ಲಿಸಲಾಗಿದೆ. ಮೃತ ಐವರ ಕುಟುಂಬಕ್ಕೆ ತಲಾ ₹5 ಲಕ್ಷ ಪರಿಹಾರ ನೀಡಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ನಡೆಯುತ್ತಿದ್ದ ಅಕ್ರಮ ಕಲ್ಲು ಗಣಿಗಾರಿಕೆ ನಡೆದಿತ್ತು. ಕ್ರಷರ್ ಘಟಕಗಳ ಕುರಿತು ತನಿಖೆ ನಡೆಸಲಾಗಿದೆ. ಅಕ್ರಮದ ವಿರುದ್ಧ ಅಗತ್ಯ ಕ್ರಮ ಜರುಗಿಸಲಾಗಿದೆ. ಈ ಬಗ್ಗೆ ಹೈಕೋರ್ಟ್​ಗೆ ರಾಜ್ಯ ಸರ್ಕಾರದಿಂದ ಮಾಹಿತಿ ನೀಡಿದ. ಹೇಳಿಕೆ ಪರಿಗಣಿಸಿ ಹೈಕೋರ್ಟ್ ಅರ್ಜಿ ಇತ್ಯರ್ಥಪಡಿಸಿದೆ.

ಬಿಡಿಎ ಕಚೇರಿ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ದಾಳಿ
ಬಿಡಿಎ ಕಚೇರಿ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ದಾಳಿ ನಡೆದಿದೆ. ಈ ವೇಳೆ ಹಲವು ಅಕ್ರಮ ಎಸಗಿರುವುದು ಬೆಳಕಿಗೆ ಬಂದಿದೆ. ಬೆಂಗಳೂರು ಪೂರ್ವ ತಾಲೂಕಿನ ನಾರಾಯಣಪುರದ ಸಂಘವೊಂದಕ್ಕೆ 34 ಸೈಟ್​ ಮಂಜೂರು ಮಾಡಲಾಗಿದೆ. ಅರ್ಹತೆ ಇಲ್ಲದಿದ್ದರೂ 34 ನಿವೇಶನ ಮಂಜೂರಾತಿ ಮಾಡಿರುವುದು ಬೆಳಕಿಗೆ ಬಂದಿದೆ. ಸಂಘದ ಜತೆ ಶಾಮೀಲಾಗಿ ಅಕ್ರಮವಾಗಿ ಸೈಟ್ ಮಂಜೂರು ಮಾಡಲಾಗಿದೆ. ಎಸಿಬಿ ದಾಳಿ ವೇಳೆ ಸಂಘಕ್ಕೆ ಸಂಬಂಧಿಸಿದ ದಾಖಲೆಗಳು ಪತ್ತೆ ಆಗಿದೆ. 34 ಸೈಟ್ ನೀಡಿದ್ದರಿಂದ ಬಿಡಿಎಗೆ ಕೋಟ್ಯಂತರ ರೂ. ನಷ್ಟ ಉಂಟಾಗಿದೆ. ಒಂದೇ ನಿವೇಶನ ಇಬ್ಬರಿಗೆ ಮಂಜೂರು ಮಾಡಿರುವುದು ಪತ್ತೆ ಆಗಿದೆ. ಎಸಿಬಿ ಅಧಿಕಾರಿಗಳ ತನಿಖೆಯಲ್ಲಿ ಅಕ್ರಮಗಳು ಪತ್ತೆಯಾಗಿದೆ.

ಬಿಡಿಎ ಕಚೇರಿ ಮೇಲೆ ಭ್ರಷ್ಟಾಚಾರ ನಿಗ್ರಹ ದಳದಿಂದ ದಾಳಿ ನಡೆಸಲಾಗಿದೆ. ಬಿಡಿಎ ಅಧಿಕಾರಿಗಳಿಗೆ ಎಸಿಬಿ DySP ರವಿಶಂಕರ್ ಕ್ಲಾಸ್​ ತೆಗೆದುಕೊಳ್ಳಲಾಗಿದೆ. ಸಮರ್ಪಕವಾದ ದಾಖಲೆಗಳನ್ನು ನೀಡದ ಬಿಡಿಎ ಸಿಬ್ಬಂದಿಗೆ ಅಗತ್ಯ ದಾಖಲೆ ಒದಗಿಸದಿದ್ದರೆ ಸೂಕ್ತ ಕ್ರಮದ ಎಚ್ಚರಿಕೆ ನೀಡಿದ್ದಾರೆ. ಬಿಡಿಎ ಸಿಬ್ಬಂದಿಗೆ ಎಸಿಬಿ DySP ರವಿಶಂಕರ್ ಎಚ್ಚರಿಕೆ ನೀಡಿದ್ದಾರೆ.

ಇಂದಿನ ಎಸಿಬಿ ದಾಳಿ ಅಂತ್ಯವಾಗಿದೆ. ನಾಳೆ ಬೆಳಗ್ಗೆ ಮತ್ತೆ ಪರಿಶೀಲನೆ ಮುಂದುವರಿಯಲಿದೆ. ಎಸಿಬಿ ಅಧಿಕಾರಿಗಳು ಸದ್ಯ ಬಿಡಿಎ ಕಚೇರಿಯಲ್ಲೆ ದಾಖಲೆಗಳನ್ನ ಇಟ್ಟು ಲಾಕ್ ಮಾಡಿದ್ದಾರೆ. ರಜೆಯಲ್ಲಿರುವ ಅಧಿಕಾರಿ, ಸಿಬ್ಬಂದಿ ಬೆಳಗ್ಗೆ ಹಾಜರಿರುವಂತೆ ಎಸಿಬಿ ತಿಳಿಸಿದೆ. ಇಂದಿನ ದಾಳಿ ಮುಗಿಸಿ, ಮಹಜರು ಪ್ರಕ್ರಿಯೆ ನಡೆಸಿ ಅಧಿಕಾರಿಗಳು ತೆರಳುತ್ತಿದ್ದಾರೆ.

ಇದನ್ನೂ ಓದಿ: ರಸ್ತೆ ಅಪಘಾತದಲ್ಲಿ ಸುಶಾಂತ್​ ಕುಟುಂಬದ 6 ಮಂದಿ ನಿಧನ; ಇನ್ನೂ 4 ಜನರ ಸ್ಥಿತಿ ಗಂಭೀರ

ಇದನ್ನೂ ಓದಿ: ವರುಣನ ಅಬ್ಬರದ ನಡುವೆಯೇ ಬಿಡಿಎ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳ ದಾಳಿ, ಡಿಎಸ್ ನವೀನ್ ಜೋಸೆಫ್ ಕಚೇರಿಯಲ್ಲಿ ಹಣ ಜಪ್ತಿ

TV9 Kannada


Leave a Reply

Your email address will not be published. Required fields are marked *