ಬೆಂಗಳೂರು ಮೆಟ್ರೋದಲ್ಲಿ ‘ಬೈ ಟೂ ಲವ್’ ತಂಡ; ಶ್ರೀಲೀಲಾ-ಧನ್ವೀರ್ ಮಸ್ತಿ | Dhanveer Gowda And Sree Leela travelled in Bengaluru Metro


ಧನ್ವೀರ್​ (Dhanveer) ಮತ್ತು ಶ್ರೀಲೀಲಾ (SreeLeela) ನಟನೆಯ ‘ಬೈ ಟೂ ಲವ್​’ ಸಿನಿಮಾ (By Two Love Movie) ಶುಕ್ರವಾರ (ಫೆಬ್ರವರಿ 18) ತೆರೆಗೆ ಬರುತ್ತಿದೆ. ಸದ್ಯ, ಈ ಸಿನಿಮಾ ಸಾಕಷ್ಟು ಹೈಪ್​ ಪಡೆದಿದೆ. ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ಇಡೀ ತಂಡ ಬ್ಯುಸಿ ಆಗಿದೆ. ಧನ್ವೀರ್​ ಹಾಗೂ ಶ್ರೀಲೀಲಾ ಈ ಬಾರಿ ಬೆಂಗಳೂರಿನ ಮೆಟ್ರೋದಲ್ಲಿ ತೆರಳಿ ಸಿನಿಮಾ ಪ್ರಚಾರ ಮಾಡಿದ್ದಾರೆ. ಮೆಟ್ರೋದಲ್ಲಿ ಪ್ರಯಾಣ ಮಾಡುತ್ತಿರುವ ಎಲ್ಲರನ್ನೂ ಭೇಟಿ ಮಾಡಿ ಚಿತ್ರದ ಬಗ್ಗೆ ತಂಡ ಮಾತುಕತೆ ನಡೆಸಿದೆ. ಸದ್ಯ, ಈ ವಿಡಿಯೋ ವೈರಲ್​ ಆಗುತ್ತಿದೆ. ‘ಬಜಾರ್​’ ಸಿನಿಮಾ ಮೂಲಕ ಧನ್ವೀರ್​ ಸ್ಯಾಂಡಲ್​ವುಡ್​ಗೆ ಕಾಲಿಟ್ಟರು. ಮೊದಲ ಸಿನಿಮಾದಲ್ಲಿಯೇ ಗಮನ ಸೆಳೆದರು. ‘ಬೈ ಟೂ ಲವ್​’ ಅವರ ಎರಡನೇ ಸಿನಿಮಾ. ಇನ್ನು, ಶ್ರೀಲೀಲಾಗೆ ಕೇವಲ ಸ್ಯಾಂಡಲ್​ವುಡ್​ ಮಾತ್ರವಲ್ಲದೆ, ಪರಭಾಷೆಗಳಿಂದಲೂ ಸಾಕಷ್ಟು ಆಫರ್​ಗಳು ಬರುತ್ತಿವೆ.

TV9 Kannada


Leave a Reply

Your email address will not be published. Required fields are marked *