ಬೆಂಗಳೂರು: ಯಾರಾದರೂ ಕಾಣೆಯಾದರೆ, ಕರೆಗೆ ಸ್ಪಂದಿಸದಿದ್ದರೆ ತಕ್ಷಣ 112ಗೆ ಮಾಹಿತಿ ನೀಡಿ; ಡಿಸಿಪಿ ಸಂಜೀವ ಪಾಟೀಲ್ | If any emergency in Bengaluru call to 112 says Bengaluru west DCP Sanjeev Patil


ಬೆಂಗಳೂರು: ಯಾರಾದರೂ ಕಾಣೆಯಾದರೆ, ಕರೆಗೆ ಸ್ಪಂದಿಸದಿದ್ದರೆ ತಕ್ಷಣ 112ಗೆ ಮಾಹಿತಿ ನೀಡಿ; ಡಿಸಿಪಿ ಸಂಜೀವ ಪಾಟೀಲ್

ಬೆಂಗಳೂರು ಪಶ್ಚಿಮ ಡಿಸಿಪಿ ಸಂಜೀವ್ ಪಾಟೀಲ್

ಬೆಂಗಳೂರು: ಯಾರಾದರೂ ಕಾಣೆಯಾದರೆ ಅಥವಾ ಕರೆಗೆ ಸ್ಪಂದಿಸದಿದ್ದರೆ ತಕ್ಷಣ 112 ಗೆ ಕರೆ ಮಾಡಿ ಎಂದು ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ಮನವಿ ಮಾಡಿದ್ದಾರೆ. ‘ಯಾರೇ ಕಾಣೆಯಾದ್ರೂ, ಕರೆಗೆ ಸ್ಪಂದಿಸದಿದ್ರೂ ಮಾಹಿತಿ ನೀಡಿ. ಕೂಡಲೇ 112ಗೆ ಕರೆ ಮಾಡಿ ಮಾಹಿತಿ ನೀಡಿ. ತಕ್ಷಣ ದೂರು ನೀಡಿದರೆ ಅಪರಾಧ ತಡೆಯಬಹುದು. ಅನುಮಾನಾಸ್ಪದ ಚುಟುವಟಿಕೆಗಳ ಬಗ್ಗೆಯೂ ಮಾಹಿತಿ ನೀಡಿ’ ಎಂದು ಬೆಂಗಳೂರು ಜನತೆಯಲ್ಲಿ ಡಿಸಿಪಿ ಮನವಿ ಮಾಡಿಕೊಂಡಿದ್ದಾರೆ. ಇದೇ ವೇಳೆ ಅವರು ನಿರ್ಜನ ಪ್ರದೇಶದಲ್ಲಿ ಯಾರಾದರೂ ಗಲಾಟೆ ಮಾಡುವುದು ಅಥವಾ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದರೂ ಮಾಹಿತಿ ನೀಡಿ ಎಂದು ಕೋರಿಕೊಂಡಿದ್ದಾರೆ.

ಮಂಗಳೂರಿನಲ್ಲಿದೆ 112ಗೆ ಕರೆ ಮಾಡುವ ವ್ಯವಸ್ಥೆ:
ಮೈಸೂರಿನಲ್ಲಿ ಸಾಮೂಹಿಕ ಅತ್ಯಾಚಾರದ ಪ್ರಕರಣದ ನಂತರ ಮಂಗಳೂರಿನಲ್ಲಿಯೂ 112ಗೆ ಕರೆ ಮಾಡಿ ತುರ್ತಾಗಿ ಸ್ಪಂದಿಸುವ ಸೇವೆಯನ್ನು ಆರಂಭಿಸಲಾಗಿತ್ತು. ನಗರ ವ್ಯಾಪ್ತಿಯಲ್ಲಿ 5 ನಿಮಿಷದಲ್ಲಿ ಸ್ಥಳಕ್ಕೆ ಬಂದು ಪ್ರತಿಕ್ರಿಯೆ ನೀಡುವ ಬಗ್ಗೆಯೂ ಪ್ರಾಯೋಗಿಕವಾಗಿ ಕರೆ ಮಾಡಿ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಪರೀಕ್ಷೆ ನಡೆಸಿದ್ದರು. ಇದೀಗ ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ ಪಾಟೀಲ್ ಕೂಡ, ಈ ಸೇವೆ ಬಳಸುವಂತೆ ಕೋರಿಕೊಂಡಿದ್ದಾರೆ.

ಮಾನಸಿಕ ಅಸ್ವಸ್ಥನಿಗೆ ಸಹಾಯ ಮಾಡಿದ ಎಎಸ್‌ಐ ಸಿದ್ದಲಿಂಗೇಗೌಡ
ಮಳೆಯಲ್ಲಿ ರಸ್ತೆ ಬದಿ ಜ್ವರದಿಂದ ಬಳಲುತ್ತಿದ್ದ ಮಾನಸಿಕ ಅಸ್ವಸ್ಥರೋರ್ವರಿಗೆ ವಿಲ್ಸನ್ ಗಾರ್ಡನ್ ASI ಸಿದ್ದಲಿಂಗೇಗೌಡ ನೆರವು ನೀಡಿದ್ದಾರೆ. ತಮ್ಮ ಹೆಸರು ವಿಳಾಸ ಏನು ತಿಳಿಯದೆ ಮಳೆಯಲ್ಲಿ ನೆನೆದು ನಿಂತಿದ್ದ ವ್ಯಕ್ತಿಗೆ ಸ್ವಂತ ಹಣದಲ್ಲಿ ಚಿಕಿತ್ಸೆ ಕೊಡಿಸಿ, ಊಟ, ಹೊಸ ಬಟ್ಟೆ ಕೊಡಿಸಿದ್ದಾರೆ. ಎಎಸ್​ಐ ಸಿದ್ಧಲಿಂಗೇಗೌಡ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ:

ಕುದುರೆ ರೇಸ್​ಗೆ ಅನುಮತಿ ನೀಡಿ ಕರ್ನಾಟಕ ಸರ್ಕಾರದ ಆದೇಶ; ಕೊವಿಡ್ ಕಾರ್ಯವಿಧಾನ ಪಾಲಿಸುವಂತೆ ಷರತ್ತು

ಮೈಸೂರು: ಮಳೆ ಹಾನಿಗೆ ಪರಿಹಾರವಾಗಿ ನಗರ ಪಾಲಿಕೆಯ ಪ್ರತಿ ವಾರ್ಡ್​ಗೆ ತಲಾ ₹ 8 ಲಕ್ಷ ಅನುದಾನ; ಎಸ್.ಟಿ ಸೋಮಶೇಖರ್

TV9 Kannada


Leave a Reply

Your email address will not be published. Required fields are marked *