
ರಾಷ್ಟ್ರಪತಿ ರಾಮನಾಥ ಕೋವಿಂದ್
ಇಸ್ಕಾನ್ ಪ್ರಕಾರ, ಕನಕಪುರ ರಸ್ತೆಯಲ್ಲಿರುವ ವೈಕುಂಠ ಬೆಟ್ಟದಲ್ಲಿರುವ ಶ್ರೀ ರಾಜಾಧಿರಾಜ ಗೋವಿಂದ ದೇವಸ್ಥಾನವು ಸಾಂಪ್ರದಾಯಿಕ, ಕಲ್ಲಿನ ಕೆತ್ತಿದ ರಚನೆಯಾಗಿದೆ. ಇದು ಆಂಧ್ರಪ್ರದೇಶದ ತಿರುಮಲದಲ್ಲಿರುವ ಪ್ರಸಿದ್ಧ ಶ್ರೀ ವೆಂಕಟೇಶ್ವರ ದೇವಸ್ಥಾನದ ಪ್ರತಿರೂಪವಾಗಿದೆ
ಬೆಂಗಳೂರು: ಇಸ್ಕಾನ್ ನಿರ್ಮಿಸಿರುವ ರಾಜಾಧಿರಾಜ ಗೋವಿಂದ ದೇವಾಲಯವನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಮಂಗಳವಾರ ಲೋಕಾರ್ಪಣೆ ಮಾಡಿದ್ದಾರೆ. ಕನಕಪುರ ರಸ್ತೆಯ ವಸಂತಪುರದಲ್ಲಿ ನಿರ್ಮಿಸಲಾಗಿರುವ ದೇವಾಲಯಕ್ಕೆ ಕೋವಿಂದ್ ಪತ್ನಿ ಸವಿತಾ ಜತೆ ಆಗಮಿಸಿದ್ದು ದೇವರ ದರ್ಶನ ಪಡೆದಿದ್ದಾರೆ. ದೇವರ ದರ್ಶನ ನಂತರ ಉದ್ಘಾಟನಾ ಕಾರ್ಯಕ್ರಮ ನಡೆದಿದೆ. ಕರ್ನಾಟಕ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಇಸ್ಕಾನ್ (International Society for Krishna Consciousness) ಪ್ರಕಾರ, ಕನಕಪುರ ರಸ್ತೆಯಲ್ಲಿರುವ ವೈಕುಂಠ ಬೆಟ್ಟದಲ್ಲಿರುವ ಶ್ರೀ ರಾಜಾಧಿರಾಜ ಗೋವಿಂದ ದೇವಸ್ಥಾನವು ಸಾಂಪ್ರದಾಯಿಕ, ಕಲ್ಲಿನ ಕೆತ್ತಿದ ರಚನೆಯಾಗಿದೆ. ಇದು ಆಂಧ್ರಪ್ರದೇಶದ ತಿರುಮಲದಲ್ಲಿರುವ ಪ್ರಸಿದ್ಧ ಶ್ರೀ ವೆಂಕಟೇಶ್ವರ ದೇವಸ್ಥಾನದ ಪ್ರತಿರೂಪವಾಗಿದೆ. ಇಲ್ಲಿರುವಶ್ರೀನಿವಾಸ ದೇವರು ಕೂಡಾ ಸರಿಸುಮಾರು ಅದೇ ಎತ್ತರವಿದ್ದು ಶ್ರೀ ರಾಜಾಧಿರಾಜ ಗೋವಿಂದ ಎಂದು ಹೆಸರಿಸಲಾಗಿದೆ, ಅಂದರೆ ಅವನು ರಾಜರ ರಾಜ ಎಂದು ಇಸ್ಕಾನ್ ಹೇಳಿದೆ.
Hon’ble President of India Shri Ramnath Kovind ji graces the Lokarpana ceremony of Sri Rajadhiraja Govinda Temple at Bengaluru https://t.co/pYOTfwS6oR
— Basavaraj S Bommai (@BSBommai) June 14, 2022