ಬೆಂಗಳೂರು: ವನಿತಾ ಹಾಕಿಪಟುಗಳ ಮೇಲೆ ಕೊರೊನಾ ದಾಳಿ ಮಾಡಿದೆ. ನಾಯಕಿ ರಾಣಿ ರಾಮ್‌ಪಾಲ್‌ ಸೇರಿದಂತೆ ಏಳು ಮಂದಿ ಆಟಗಾರ್ತಿಯರ ಕೋವಿಡ್‌ ಫ‌ಲಿತಾಂಶ ಪಾಸಿಟಿವ್‌ ಬಂದಿದೆ. ಜತೆಗೆ ಇಬ್ಬರು ಸಹಾಯಕ ಸಿಬಂದಿಗೆ ಕೊರೊನಾ ತಗುಲಿದೆ.

ಬೆಂಗಳೂರಿನ “ಸಾಯ್‌’ ಕೇಂದ್ರದಲ್ಲಿ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳುವುದಕ್ಕಿಂತ ಮೊದಲು ಇವರನ್ನು ಕೋವಿಡ್‌ ಪರೀಕ್ಷೆಗೆ ಒಳ ಪಡಿಸಲಾಗಿತ್ತು. ಸೋಮವಾರ ಫ‌ಲಿತಾಂಶ ಬಂದಿದ್ದು, ಏಳು ಆಟಗಾರ್ತಿಯರಿಗೆ ಕೊರೊನಾ ಸೋಂಕು ತಗುಲಿದ್ದು ದೃಢಪಟ್ಟಿದೆ.

ಉಳಿದವರೆಂದರೆ ಸವಿತಾ ಪುನಿಯ, ಶರ್ಮಿಳಾ ದೇವಿ, ರಜನಿ, ನವಜೋತ್‌ ಕೌರ್‌, ನವನೀತ್‌ ಕೌರ್‌ ಮತ್ತು ಸುಶೀಲಾ. ಜತೆಗೆ ವೀಡಿಯೋ ಅನಾಲಿಸ್ಟ್‌ ಅಮೃತಪ್ರಕಾಶ್‌ ಮತ್ತು ಸೈಂಟಿಫಿಕ್‌ ಎಡ್ವೆ„ಸರ್‌ ವೇನ್‌ ಲೊಂಬಾರ್ಡ್‌ ಅವರಲ್ಲೂ ಕೊರೊನಾ ಕಾಣಿಸಿಕೊಂಡಿದೆ.

10 ದಿನಗಳ ವಿರಾಮದ ಬಳಿಕ ಈ ಆಟಗಾರ್ತಿಯರೆಲ್ಲ ರವಿವಾರ ಬೆಂಗಳೂರಿನ ಸಾಯ್‌ ಕೇಂದ್ರಕ್ಕೆ ಆಗಮಿಸಿದ್ದರು.

ಇದನ್ನೂ ಓದಿ :ಪಂಜಾಬ್ ವಿರುದ್ಧ 5 ವಿಕೆಟ್‌ಗಳ ಜಯ ಸಾಧಿಸಿ ಗೆಲುವಿನ ಹಳಿ ಏರಿದ ಕೆಕೆಆರ್‌

ಕ್ರೀಡೆ – Udayavani – ಉದಯವಾಣಿ
Read More

Leave a comment