ಬೆಂಗಳೂರು ಸೌತ್ ವೆಸ್ಟರ್ನ್ ರೈಲು ವಿಭಾಗ ನವೆಂಬರ್ ತಿಂಗಳಲ್ಲಿ ಸಂಗ್ರಹಿಸಿದ ದಂಡದ ಮೊತ್ತ 2 ಕೋಟಿ ರೂ.! ಇಲ್ಲಿದೆ ವಿವರ | Bengaluru South Western Railways Fine Collection details here Indian Railway


ಬೆಂಗಳೂರು ಸೌತ್ ವೆಸ್ಟರ್ನ್ ರೈಲು ವಿಭಾಗ ನವೆಂಬರ್ ತಿಂಗಳಲ್ಲಿ ಸಂಗ್ರಹಿಸಿದ ದಂಡದ ಮೊತ್ತ 2 ಕೋಟಿ ರೂ.! ಇಲ್ಲಿದೆ ವಿವರ

ಸಂಗ್ರಹ ಚಿತ್ರ

ಬೆಂಗಳೂರು: ಇಲ್ಲಿನ ಸೌತ್ ವೆಸ್ಟರ್ನ್ ರೈಲು ವಿಭಾಗ ಟಿಕೆಟ್ ರಹಿತ ಪ್ರಯಾಣಕ್ಕೆ ಸಂಬಂಧಿಸಿ ನವೆಂಬರ್ ತಿಂಗಳು ಒಂದರಲ್ಲೇ ಒಟ್ಟು 38,479 ಪ್ರಕರಣಗಳನ್ನು ದಾಖಲಿಸಿದೆ. ಹಾಗೂ ಆ ಮೂಲಕ, 2,18,73,555 ರೂಪಾಯಿ ಮೊತ್ತದ ದಂಡ ಸಂಗ್ರಹಿಸಿದೆ. ಈ ಬಾರಿಯ ಹಣಕಾಸು ವರ್ಷದಲ್ಲಿ ಇದು ಮೊದಲ ಬಾರಿಗೆ ಈ ರೈಲ್ವೇ ವಿಭಾಗ 2 ಕೋಟಿಗೂ ಅಧಿಕ ದಂಡ ಸಂಗ್ರಹಿಸಿರುವುದಾಗಿದೆ.

ಕಳೆದ ವರ್ಷದ ನವೆಂಬರ್ ತಿಂಗಳಿನಲ್ಲಿ 6,910 ಪ್ರಕರಣ ದಾಖಲಿಸಿದ್ದ ಇಲಾಖೆ 44,93,765 ರೂಪಾಯಿ ದಂಡ ಸಂಗ್ರಹಿಸಿತ್ತು. ಈ ಬಾರಿ, ಏಪ್ರೀಲ್ ಬಳಿಕ ನವೆಂಬರ್ ತಿಂಗಳ ವರೆಗೆ ಇಲಾಖೆ ಒಟ್ಟು 1,66,983 ಪ್ರಕರಣ ದಾಖಲು ಮಾಡಿ 9,33,42,980 ರೂಪಾಯಿ ದಂಡ ಸಂಗ್ರಹಿಸಿದೆ.

ರೈಲ್ವೇ ಆಕ್ಟ್ 1989 ರ ಸೆಕ್ಷನ್ 138 ರ ಪ್ರಕಾರ, ಅಗತ್ಯ ಟಿಕೆಟ್ ಅಥವಾ ಪಾಸ್ ಇಲ್ಲದೆ ಯಾವುದೇ ಪ್ರಯಾಣಿಕ ರೈಲಿನಲ್ಲಿ ಪ್ರಯಾಣಿಸುತ್ತಿರುವುದು ಅಪರಾಧ ಆಗಿದೆ. ಅದಕ್ಕೆ ಸುಮಾರು 250 ರೂಪಾಯಿಗಳಂತೆ ದಂಡ ಹಾಕಲಾಗುತ್ತದೆ. ಜೊತೆಗೆ, ಈ ಬಾರಿ ಮಾಸ್ಕ್ ಧರಿಸದ ಕಾರಣ 214 ಪ್ರಕರಣ ದಾಖಲಿಸಿಕೊಂಡು 57,750 ರೂಪಾಯಿ, ರೈಲು ನಿಲ್ದಾಣದಲ್ಲಿ ಧೂಮಪಾನ ಮಾಡಿರುವುದಕ್ಕೆ 3 ಪ್ರಕರಣ ದಾಖಲಿಸಿ 600 ರೂಪಾಯಿ ದಂಡ ಸಂಗ್ರಹಿಸಲಾಗಿದೆ. ರೈಲು ನಿಲ್ದಾಣಗಳಲ್ಲಿ ಕಸ ಹಾಕಿರುವುದಕ್ಕೆ 35 ಪ್ರಕರಣ ದಾಖಲಿಸಿ 9,200 ರೂಪಾಯಿ ದಂಡ ಸಂಗ್ರಹಿಸಲಾಗಿದೆ.

Railway Fine Collection details

ದಂಡದ ವಿವರ ಇಲ್ಲಿದೆ

TV9 Kannada


Leave a Reply

Your email address will not be published. Required fields are marked *