ಬೇಕಾಗುವ ಪದಾರ್ಥಗಳು

  • ಎಣ್ಣೆ- 1 ಬಟ್ಟಲು
  • ಕೋಳಿ ಮಾಂಸ- ಅರ್ಧ ಕೆಜಿ
  • ಹಸಿಮೆಣಸಿನ ಕಾಯಿ- 5
  • ಈರುಳ್ಳಿ- ಉದ್ದಕ್ಕೆ ಹೆಚ್ಚಿದ್ದು ಸ್ವಲ್ಪ
  • ಶುಂಠಿ, ಬೆಳ್ಳುಳ್ಳಿ ಪೇಸ್ಟ್- 1 ಚಮಚ
  • ಟೊಮ್ಯಾಟೋ- ಸಣ್ಣಗೆ ಕತ್ತರಿಸಿದ್ದು 2
  • ಕೊತ್ತಂಬರಿ ಸೊಪ್ಪು- ಸಣ್ಣಗೆ ಹೆಚ್ಚಿದ್ದು ಸ್ವಲ್ಪ
  • ಪುದೀನಾ ಸೊಪ್ಪು-ಸ್ವಲ್ಪ
  • ಅಚ್ಚ ಖಾರದ ಪುಡಿ- 1 ಚಮಚ
  • ಗರಂ ಮಸಾಲೆ ಪುಡಿ – ಅರ್ಧ ಚಮಚ
  • ನಿಂಬೆಹಣ್ಣು- 1 (ರಸ)
  • ಮೊಸರು- ಅರ್ಧ ಬಟ್ಟಲು
  • ಉಪ್ಪು-ರುಚಿಗೆ ತಕ್ಕಷ್ಟು
  • ಅಕ್ಕಿ- 1 ಬಟ್ಟಲು (ನೆನೆಸಿದ್ದು)

ಮಾಡುವ ವಿಧಾನ…

  • ಮೊದಲಿಗೆ ಒಲೆಯ ಮೇಲೆ ಪಾತ್ರೆಯೊಂದನ್ನು ಇಟ್ಟು ಎಣ್ಣೆ ಹಾಕಿ. ಎಣ್ಣೆ ಕಾದ ಬಳಿಕ ಈರುಳ್ಳಿಯನ್ನು ಹಾಕಿ ಕೆಂಪಗೆ ಹುರಿಯಿರಿ.
  • ಬಳಿಕ ಶುಂಠಿ, ಬೆಳ್ಳುಳ್ಳಿ, ಟೊಮೆಟೋ ಹಾಕಿ ಕೆಂಪಗಾದ ಬಳಿಕ ಕೊತ್ತಮಂಬರಿ ಸೊಪ್ಪು, ಪುದೀನಾ, ಅಚ್ಚ ಖಾರದ ಪುಡಿ, ಗರಂ ಮಸಾಲೆ ಪುಡಿ, ನಿಂಬೆ ಹಣ್ಣಿನ ರಸ ಹಾಗೂ ಮೊಸರು ಹಾಕಿ 5 ನಿಮಿಷ ಬಿಡಿ.
  • ನಂತರ ಉಪ್ಪು ಹಾಗೂ ಮಾಂಸವನ್ನು ಹಾಕಿ 10 ನಿಮಿಷ ಚೆನ್ನಾಗಿ ಬೇಯಲು ಬಿಡಿ.
  • ಮತ್ತೊಂದೆಡೆ ಒಲೆಯ ಮೇಲೆ ಪಾತ್ರೆಯೊಂದಕ್ಕೆ ನೀರು, ಉಪ್ಪು, ಸ್ವಲ್ಪ ಪುದೀನಾ ಸೊಪ್ಪು ಹಾಗೂ ಅಕ್ಕಿಯನ್ನು ಹಾಕಿಡಿ. ಅಕ್ಕಿ 3/4 ಭಾಗದಷ್ಟು ಬೆಂದ ಬಳಿಕ ಬಸಿದು ಅನ್ನವನ್ನು ಸಿದ್ಧಪಡಿಸಿಕೊಳ್ಳಿ.
  • ನಂತರ ಸ್ವಲ್ಪ ಅನ್ನು ತೆಗೆದು ತಟ್ಟೆಯೊಂದಕ್ಕೆ ಹಾಕಿ ಈಗಾಗಲೇ ಮಾಡಿಕೊಂಡ ಮಸಾಲೆಯನ್ನು ಸ್ವಲ್ಪ ಹಾಕಿ ನಂತರ ಮತ್ತೆ ಸ್ವಲ್ಪ ಅನ್ನವನ್ನು ಹಾಕಿ ಲೇಯರ್ ಲೇಯರ್ ರೀತಿ ಹಾಕಿ ಮಧ್ಯಮ ಉರಿಯಲ್ಲಿ ಅನ್ನ ಪೂರ್ತಿ ಬೇಯುವವವರೆ 5-6 ನಿಮಿಷ ಬಿಡಿ. ನಂತರ ನಿಧಾನವಾಗಿ ಮಸಾಲೆ ಜೊತೆಗೆ ಅನ್ನವನ್ನು ಮಿಶ್ರಣ ಮಾಡಿದರೆ, ರುಚಿಕರವಾದ ಬೆಂಗಳೂರು ಸ್ಟೈಲ್ ಬಿರಿಯಾನಿ ಸವಿಯಲು ಸಿದ್ಧ.

Kannadaprabha – ಆಹಾರ-ವಿಹಾರ – https://www.kannadaprabha.com/food/
Read More