ಬೆಂಗಳೂರು: ಮಂಡ್ಯ ವಿಧಾನ ಪರಿಷತ್ ಚುನಾವಣೆಗೆ ರಂಗೇರಿದೆ. ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ತಮ್ಮ ಅಧ್ಯರ್ಥಿಯನ್ನು ಘೋಷಿಸಿವೆ. ಇಂದು ಬೆಳಿಗ್ಗೆ ಬಿಜೆಪಿ ಎಂಎಲ್ಸಿ ಅಭ್ಯರ್ಥಿ ಬೂಕನಕೆರೆ ಮಂಜು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರನ್ನು ಭೇಟಿಯಾಗಿ ಬೆಂಬಲ ಕೋರಿದ್ದರು. ಈಗ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಗೂಳಿಗೌಡ ಸುಮಲತಾ ಅಂಬರೀಶ್ ಬೆಂಬಲ ಕೋರಿದರು.
ಇಂದು ಜೆಪಿ ನಗರದ ಅಂಬರೀಶ್ ನಿವಾಸದಲ್ಲಿ ಭೇಟಿಯಾದ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಗೂಳಿಗೌಡ, ಸುಮಲತಾರನ್ನು ಭೇಟಿಯಾಗಿ ಬೆಂಬಲ ಕೋರಿದರು. ಸುಮಲತಾ ಮಂಡ್ಯ ಸಂಸದೆ, ಹೀಗಾಗಿ ಇವರಿಗೆ ಕ್ಷೇತ್ರದ ಮೇಲೆ ಭಾರೀ ಹಿಡಿತ ಇದೆ. ಆದ್ದರಿಂದ ತನಗೆ ಬೆಂಬಲ ನೀಡಿದಲ್ಲಿ ಗೆಲುವು ಸುಲಭ ಎಂದು ಭಾವಿಸಿದ್ದಾರೆ ದಿನೇಶ್ ಗೂಳಿಗೌಡ.
ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪರೋಕ್ಷವಾಗಿ ಬೆಂಬಲಿಸಿದ್ದೇವೆ. ಇದರ ಫಲವಾಗಿ ನೀವು ಗೆದ್ದಿರಿ. ಈಗ ನಮಗೂ ಬೆಂಬಲ ನೀಡಿ ಎಂದು ಸುಮಲತಾ ಮುಂದೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: MLC ಎಲೆಕ್ಷನ್; ಸುಮಲತಾ, ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಲು ಮುಂದಾದ HDK