ಬೆಂಗಳೂರು: ಸಚಿವ ಎಂಟಿಬಿ ನಾಗರಾಜ್‌ ಅವರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ವಹಿಸಿ ಸಿಎಂ ಬಿಎಸ್​​ ಯಡಿಯೂರಪ್ಪ ಅವರು ನೇಮಕ ಮಾಡಿದ ಬೆನ್ನಲ್ಲೇ ಸಿಎಂಗೆ ಕಂದಾಯ ಸಚಿವ ಆರ್​​.ಅಶೋಕ್​ ಪತ್ರ ಬರೆದಿದ್ದಾರೆ.

ಎಂಟಿಬಿ ನಾಗರಾಜ್ ಅವರು ನನ್ನನ್ನು ಭೇಟಿಯಾಗಿದ್ದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿಯನ್ನು ನಿರ್ವಹಿಸುವುದಾಗಿ ಕೇಳಿ ಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಸಚಿವರ ಕೋರಿಕೆಯಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿಯನ್ನು ಎಂಟಿಬಿ ನಾಗರಾಜ್ ಅವರಿಗೆ ನೀಡಿರುತ್ತೇನೆ. ಇದಕ್ಕೆ ತನ್ನ ಅಭ್ಯಂತರವೇನೂ ಇಲ್ಲ ಎಂದು ಪತ್ರದಲ್ಲಿ ಆರ್​​.ಅಶೋಕ್​ ಉಲ್ಲೇಖ ಮಾಡಿದ್ದಾರೆ.

ಎಂಟಿಬಿಯನ್ನ ಬಿಜೆಪಿಗೆ ಕರೆ ತಂದಿದ್ದು ನಾನೇ..
ಈ ನಡುವೆ ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅಶೋಕ್, ನಾನೇ ಎಂಟಿಬಿ ನಾಗರಾಜ್ ಅವರನ್ನು ಬಿಜೆಪಿಗೆ ಕರೆ ತಂದಿದ್ದು, ಆಗಲೇ ಗ್ರಾಮಾಂತರ ಉಸ್ತುವಾರಿ ಕೇಳಿದ್ದರು. ಇದನ್ನ ಸಿಎಂ ಗಮನಕ್ಕೆ ತಂದಿದ್ದೆ. ಇದೀಗ ಅವರಿಗೆ ಗ್ರಾಮಾಂತರ ಉಸ್ತುವಾರಿ ಸಿಕ್ಕಿದೆ. ಅವರ ತ್ಯಾಗದ ಫಲವಾಗಿ ಬಿಜೆಪಿ ಸರ್ಕಾರ ಬಂದಿದೆ. ಸಿಎಂ ಅವರ ಕ್ರಮವನ್ನು ಸ್ವಾಗತಿಸಿತ್ತೇನೆ. ಎಂಟಿಬಿ ನಾಗರಾಜ್ ಅವರಿಗೆ ಉಸ್ತುವಾರಿ ಬಿಟ್ಟುಕೊಟ್ಟಿದ್ದೇನೆ. ಇದರಲ್ಲಿ ತ್ಯಾಗದ ಪ್ರಶ್ನೆ ಬರುವುದಿಲ್ಲ. ಸಿಎಂ ಬಳಿಯೇ ಬೆಂಗಳೂರು ನಗರ ಉಸ್ತುವಾರಿ ಇದ್ದು, ಅವರೇ ಮುಂದುವರಿಯಲಿ ಎಂದರು.

ದೇಶದಲ್ಲಿ ಎ, ಬಿ, ಸಿ.. ರಾಜ್ಯದಲ್ಲಿ ಡಿ ಮತ್ತು ಎಸ್ ಕಾಂಗ್ರೆಸ್
ಕಾಂಗ್ರೆಸ್​​ ಪಕ್ಷದಲ್ಲಿ ಸಿಎಂ ಸ್ಥಾನ ಜಟಾಪಟಿ ವಿಚಾರವಾಗಿ ಪ್ರತಿಕ್ರಿಯೆ ನೀಡದ ಅವರು, ದೇಶದಲ್ಲಿ ಎ, ಬಿ, ಸಿ ಕಾಂಗ್ರೆಸ್ ಇದೆ. ಕರ್ನಾಟಕದಲ್ಲಿ ಇದೀಗ ಡಿ (ಡಿಕೆಎಸ್​ ಶಿವುಕುಮಾರ್) ಮತ್ತು ಎಸ್ (ಸಿದ್ದರಾಮಯ್ಯ) ಕಾಂಗ್ರೆಸ್ ಆರಂಭವಾಗಿದೆ. ಕಾಂಗ್ರೆಸ್ ನಲ್ಲಿ ಕೂಸು ಹುಟ್ಟುವ ಮೊದಲೇ ಕುಲಾವಿ ಎಂಬಂತಾಗಿದೆ. ಯಾರ ಕೈ ಮೇಲೆ, ಯಾರದ್ದು ಕೆಳಗೆ ಎಂದು ನಿರ್ಧಾರ ಆಗುವ ಸಮಯ ಬಂದಿದ್ದು, ಕಾಂಗ್ರೆಸ್ ಹೈ ಕಮಾಂಡ್ ವೀಕ್ ಆಗಿದೆ. ಆ ಕಾರಣಕ್ಕೆ ಸಿದ್ದರಾಮಯ್ಯ ಮುಂದಿನ ಸಿಎಂ ಹೌದೋ ಅಲ್ಲವೋ ಎಂದು ಹೇಳಲು ಆಗುತ್ತಿಲ್ಲ. ಹಲವು ಶಾಸಕರು ಸಿದ್ದರಾಮಯ್ಯ ಆಗಲಿ ಎನ್ನುತ್ತಿದ್ದಾರೆ. ಆದರೆ ನಮ್ಮ ಪಕ್ಷದ ಮುಂದಿನ ಸಿಎಂ ಯಾರು ಎಂಬುವುದನ್ನು ಹೈಕಮಾಂಡ್ ನಿರ್ಧಾರ ಮಾಡಲಿದೆ ಎಂದರು.

ಇದನ್ನೂ ಓದಿ: ‘ನನ್ನ ಮನೆಗೆ ಬೆಂಕಿ ಹಾಕಿದವ್ರ ಜೊತೆ ಡಿ.ಕೆ ಶಿವಕುಮಾರ್ ನಿಂತಿದ್ದಾರೆ’ -ಅಖಂಡ ಬಹಿರಂಗ ವಾಗ್ದಾಳಿ

ಇದನ್ನೂ ಓದಿ: ‘ಜನ ಹೇಳಿದ್ದನ್ನೇ ನಾನು ಹೇಳ್ತಿದ್ದೇನೆ’- ಮತ್ತೆ ಸಿದ್ದರಾಮಯ್ಯ ಸಿಎಂ ಆಗಲಿ ಎಂದ ಜಮೀರ್

The post ಬೆಂ.ಗ್ರಾಮಾಂತರ ಉಸ್ತುವಾರಿಯಾಗಿ ಎಂಟಿಬಿ ನೇಮಕ ಬೆನ್ನಲ್ಲೇ ಸಿಎಂ ಬಿಎಸ್​​ವೈಗೆ ಅಶೋಕ್​ ಪತ್ರ appeared first on News First Kannada.

Source: newsfirstlive.com

Source link