ಬೆಚ್ಚಿಬೀಳಿಸಿದ ಶ್ರದ್ಧಾ ಕೊಲೆ ಪ್ರಕರಣ; ಇಂಥಾ ಪ್ರಕರಣಗಳಲ್ಲಿ ಸೀರಿಯಲ್​ ಕಿಲ್ಲರ್​ ಹೇಗಿರುತ್ತಾರೆ? ಅವರ ಮನಸ್ಥಿತಿ ಹೇಗಿರುತ್ತದೆ? – Shraddha Walker Murder case who we call butchers what goes on in the darkest corners of killer’s minds


ಅಮೆರಿಕದ ಕ್ರೈಮ್ ಶೋ ಡೆಕ್ಸ್ಟರ್‌ನಿಂದ ಸ್ಫೂರ್ತಿ ಪಡೆದ ಅಫ್ತಾಬ್, ತರಬೇತಿ ಪಡೆದ ಬಾಣಸಿಗನಾಗಿದ್ದರಿಂದ ಮಾಂಸದ ಚಾಕುವನ್ನು ಬಳಸುವುದರಲ್ಲಿ ನಿಪುಣನಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ. ತಜ್ಞರು ಹೇಳುವಂತೆ, ಕೆಲವು ಜನರಿಗೆ ಮನುಷ್ಯನ ದೇಹ ಕತ್ತರಿಸುವಾಗ ಅದು ಸಾಧ್ಯವಾಗದೇ ಇರಬಹುದು

ಅಫ್ತಾಬ್ ಅಮೀನ್ ಪೂನಾವಾಲಾ (Aaftab Ameen Poonawala)ತನ್ನ ಲಿವ್-ಇನ್ ಸಂಗಾತಿ ಶ್ರದ್ಧಾ ವಾಕರ್(Shraddha Walker) ಕತ್ತು ಹಿಸುಕಿ ಕೊಲೆಗೈದ ನಂತರ, 35 ತುಂಡುಗಳಾಗಿ ಕತ್ತರಿಸಿ, ದೇಹದ ಭಾಗಗಳನ್ನು ಸಂಗ್ರಹಿಸಲು ಫ್ರಿಡ್ಜ್ ಖರೀದಿಸಿದ್ದ. ನಂತರ 16 ರಾತ್ರಿ ಮನೆಯಿಂದ ಹೊರಗೆ ಹೋಗಿ ದಕ್ಷಿಣ ದೆಹಲಿಯ ಕಾಡಿನಲ್ಲಿ ಆ ದೇಹದ ತುಂಡುಗಳನ್ನು ಬಿಸಾಡಿದ್ದ. ತಾನು ಮಾಡಿದ ಕೊಲೆಯ ಕುರುಹು ಅಳಿಸುವುದಕ್ಕಾಗಿ ಅಫ್ತಾಬ್ ಗೂಗಲ್ ಮಾಡಿ ರಕ್ತವನ್ನು ತೊಳೆಯಲು ರಾಸಾಯನಿಕಗಳನ್ನು ಬಳಸಿದನು. ಆಕೆ ಬದುಕಿದ್ದಾಳೆ,ಸತ್ತಿಲ್ಲ ಎಂಬುದನ್ನು ಹೊರ ಜಗತ್ತಿಗೆ ತೋರಿಸುವುದಕ್ಕಾಗಿ ಆಕೆಯ ಸಾಮಾಜಿಕ ಮಾಧ್ಯಮದಲ್ಲಿ ಈತ ಸಕ್ರಿಯನಾಗಿರುತ್ತಾನೆ. ಪ್ರೇಯಸಿಯನ್ನು ಕೊಂದ ಕೋಣೆ ದುರ್ನಾತ ಬೀರದಂತೆ ಅಗರಬತ್ತಿ ಹಚ್ಚಿಡುತ್ತಿದ್ದ. ಅಷ್ಟೇ ಅಲ್ಲ ಹೊಸ ಗರ್ಲ್ ಫ್ರೆಂಡನ್ನು ಅದೇ ಫ್ಲ್ಯಾಟ್ ಗೆ ಕರೆತಂದಿದ್ದ ಈ ಅಫ್ತಾಬ್. ದೆಹಲಿಯಲ್ಲಿ ನಡೆದ ಶ್ರದ್ಧಾ ಕೊಲೆ ಪ್ರಕರಣದ ಬಗ್ಗೆ ಒಂದೊಂದೇ ಮಾಹಿತಿ ಹೊರಬರುತ್ತಿದ್ದಂತೆ ಅದೆಷ್ಟು ಭೀಭತ್ಸ ಕೃತ್ಯ ಅಲ್ಲಿ ನಡೆದಿತ್ತು ಎಂಬುದನ್ನು ಊಹಿಸಬಹುದು. ಇಂಥಾ ಘೋರ ಕೃತ್ಯವೆಸಗಿದ ಅಫ್ತಾಬ್‌ಗೆ ಕಠಿಣ ಶಿಕ್ಷೆಯಾಗಬೇಕೆಂದು ಜನರು ಒತ್ತಾಯಿಸುತ್ತಿದ್ದಾರೆ.

ಅಫ್ತಾಬ್ ಅಮೀನ್ ಪೂನಾವಾಲಾ ನಡೆಸಿರುವ ಈ ಭಯಾನಕ ಹತ್ಯೆ, ಸುರೀಂದರ್ ಕೋಲಿ, ರಾಜಾ ಕೊಲಂದರ್ ಮತ್ತು ಚಂದ್ರಕಾಂತ್ ಝಾ ಅವರಂತಹ ಭೀಕರ ಅಪರಾಧಗಳನ್ನು ನೆನಪಿಸುತ್ತದೆ. ಕೋಲಿ, ಕೊಲಂದರ್ ಮತ್ತು ಝಾ ಅನೇಕ ಜನರನ್ನು ಕೊಂದು ದೇಹವನ್ನು ತುಂಡರಿಸಿದ್ದರು. ಅಂದಹಾಗೆ ಶ್ರದ್ದಾಳನ್ನು ಕೊಲೆ ಮಾಡಿರುವುದಾಗಿ ಅಫ್ತಾಬ್ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಇಂಥಾ ಕೃತ್ಯಗಳು ನಡೆದಾಗ ಆರೋಪಿ ಸೀರಿಯಲ್ ಕಿಲ್ಲರ್,ಕೊಲೆಗಟುಕ,  ಸೈಕೋಪಾತ್ ಎಂದು ಹೇಳಲಾಗುತ್ತದೆ. ಅವರು ಯಾಕಾಗಿ ಈ ಕೃತ್ಯವೆಸಗಿದರು ಹಲವು ರೀತಿಯಲ್ಲಿ ಊಹಿಸಬಹುದು. ಯಾಕೆ ಇಂಥಾ ಕೃತ್ಯಗಳು ನಡೆಯುತ್ತವೆ? ಅವರೇಕೆ  ಕೊಲೆ ಮಾಡಿದರು? ಈ ಪ್ರಶ್ನೆಗಳನ್ನು ಅನ್ವೇಷಿಸುವ ಪ್ರಯತ್ನಗಳು ಯಾವುದೇ ರೀತಿಯಲ್ಲಿ ಸಮರ್ಥನೆಯಾಗಿರುವುದಿಲ್ಲ .ಆದರೆ ಭವಿಷ್ಯದಲ್ಲಿ ಇಂತಹ ಆಘಾತಕಾರಿ ಘಟನೆಗಳನ್ನು ತಡೆಯಲು ಸಹಾಯ ಮಾಡುವ ವಿವರಣೆಗಳನ್ನು ಅವು ಒದಗಿಸುತ್ತವೆ. ಸೀರಿಯಲ್ ಕಿಲ್ಲರ್ ಗಳು ಹೇಗೆ ಇರುತ್ತಾರೆ. ವಿವಿಧ ಪ್ರಕರಣಗಳಲ್ಲಿ ಅವರ ಮನಸ್ಥಿತಿ ಹೇಗಿತ್ತು ಎಂಬುದಕ್ಕೆ ನಾಲ್ಕು ಅಪರಾಧ ಪ್ರಕರಣಗಳನ್ನು  ಉದಾಹರಣೆಯಾಗಿ ನೀಡಿ ವಿವರಿಸಿರುವ ಇಂಡಿಯಾ ಟುಡೇ ವರದಿ ಇಲ್ಲಿದೆ.

ಪ್ರಕರಣ-1

ಅಫ್ತಾಬ್ ಪ್ರಕರಣದಿಂದಲೇ ಶುರು ಮಾಡೋಣ. ಮೊದಲನೆಯದಾಗಿ, ಮನೋರೋಗಿ ಅಥವಾ ಸೈಕೋಪಾತ್ ಎಂದರೆ ಯಾರು? ವಿಶಿಷ್ಟ ಮನೋರೋಗದ ಲಕ್ಷಣಗಳಲ್ಲಿ ಹಠಾತ್ ಪ್ರವೃತ್ತಿ, ಕುಶಲ ವರ್ತನೆ ಸೇರಿವೆ. ಆದರೆ ಅತ್ಯಂತ ಗಮನಾರ್ಹವಾದ ಗುಣಲಕ್ಷಣವೆಂದರೆ ಪಶ್ಚಾತ್ತಾಪ ಮತ್ತು ಸಹಾನುಭೂತಿಯ ಕೊರತೆ. ಕೆಲವೊಮ್ಮೆ ಇದು ಅಲ್ಲಿ ಏನಾಯಿತು ಎಂಬುದನ್ನು ವಿವರಿಸಲು ಸಾಧ್ಯವಾಗುತ್ತದೆ.

2012 ರ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿಗಳಲ್ಲಿ ಒಬ್ಬನನ್ನು ವಿದೇಶಿ ಪತ್ರಕರ್ತ ದೆಹಲಿಯ ತಿಹಾರ್ ಜೈಲು ಸಂಕೀರ್ಣದಲ್ಲಿ ಸಂದರ್ಶನ ಮಾಡಿದಾಗ ಈ ಪಶ್ಚಾತ್ತಾಪ ಮತ್ತು ಸಹಾನುಭೂತಿಯ ಕೊರತೆ ಇರುವುದು ಕಾಣಿಸಿತ್ತು. ಮುಂಬರುವ ದಿನಗಳಲ್ಲಿ, ತನಿಖಾಧಿಕಾರಿಗಳು ಅಫ್ತಾಬ್‌ನ ಮನಸ್ಥಿತಿಯನ್ನು ವಿವರಿಸಬಹುದು. ಆದರೆ ಇಲ್ಲಿಯವರೆಗೆ ಅಫ್ತಾಬ್ ಪಶ್ಚಾತಾಪಪಟ್ಟಂತೆ ಕಾಣುತ್ತಿಲ್ಲ.

ಅದೇನೇ ಇರಲಿ, ಕ್ರಿಮಿನಲ್ ಮನಶಾಸ್ತ್ರಜ್ಞರ ಪ್ರಕಾರ, ಅಫ್ತಾಬ್ ಮೇಲೆ ಆರೋಪಿಸಲ್ಪಟ್ಟ ಅಪರಾಧಗಳು ಉಪಪ್ರಜ್ಞೆಯ ಕ್ರೌರ್ಯದ (Subconscious cruelty)ಮೂರು ವರ್ಗಗಳಾಗಿ ಬರುತ್ತವೆ. ಮೊದಲ ಪ್ರಕರಣದಲ್ಲಿ, ಹಂತನಾಗಿರುವವನು ವೈದ್ಯ, ಕಟುಕ ಅಥವಾ ಬಾಣಸಿಗನಾಗಿದ್ದು ತಮ್ಮ ಜೀವನದ ಅನುಭವದಿಂದ ಕೊಚ್ಚುವ (ಕತ್ತರಿಸುವ) ವಿಧಾನಗಳನ್ನು ತಿಳಿದಿದ್ದಾರೆ. ಇಲ್ಲಿ ಗಮನಿಸಬೇಕಾದ ವಿಷಯ ಎಂದರೆ ಅಫ್ತಾಬ್ ಶೆಫ್(ಬಾಣಸಿಗ).

ಅಮೆರಿಕದ ಕ್ರೈಮ್ ಶೋ ಡೆಕ್ಸ್ಟರ್‌ನಿಂದ ಸ್ಫೂರ್ತಿ ಪಡೆದ ಅಫ್ತಾಬ್, ತರಬೇತಿ ಪಡೆದ ಬಾಣಸಿಗನಾಗಿದ್ದರಿಂದ ಮಾಂಸದ ಚಾಕುವನ್ನು ಬಳಸುವುದರಲ್ಲಿ ನಿಪುಣನಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ. ತಜ್ಞರು ಹೇಳುವಂತೆ, ಕೆಲವು ಜನರಿಗೆ ಮನುಷ್ಯನ ದೇಹ ಕತ್ತರಿಸುವಾಗ ಅದು ಸಾಧ್ಯವಾಗದೇ ಇರಬಹುದು. ಈ ಪ್ರಕರಣದಲ್ಲಿ  ರಕ್ಷಣಾತ್ಮಕ ಛೇದನ ವಿಧಾನವನ್ನು ಒಳಗೊಂಡಿರುವಂತೆ ತೋರುತ್ತಿದೆ. ಇದರಲ್ಲಿ ಇಡೀ ಶವವನ್ನು ಹೊರತೆಗೆಯುವುದು, ಮರೆಮಾಡುವುದು ಅಥವಾ ವಿಲೇವಾರಿ ಮಾಡುವುದು ಸೇರಿದೆ. ವಿವಿಧ ಸ್ಥಳಗಳಲ್ಲಿ ಎಸೆಯಲ್ಪಟ್ಟ ದೇಹದ ಸಣ್ಣ ಭಾಗಗಳು ಸಂತ್ರಸ್ತೆಯ ಗುರುತು ಪತ್ತೆ ಕಷ್ಟಕರವಾಗಿಸುತ್ತದೆ. ಅಪರಾಧ ಪತ್ತೆ ಮಾಡಲು ಪೊಲೀಸರು ಈ ದೇಹದ ಭಾಗಗಳೆಲ್ಲವನ್ನೂ ಒಟ್ಟುಗೂಡಿಸಬೇಕು. ಅದಕ್ಕೆ ಸಮಯ ಹಿಡಿಯುತ್ತದೆ. ಈಗ ಪೊಲೀಸರು ಮಾಡುತ್ತಿರುವುದೂ ಅದನ್ನೇ.

ಆಘಾತವನ್ನು ಅನುಭವಿಸಿದ ಜನರಲ್ಲಿ ಉಪಪ್ರಜ್ಞೆಯ ಕ್ರೌರ್ಯದ ಮತ್ತೊಂದು ರೂಪ ಕಂಡುಬರುತ್ತದೆ. ಅವರು ತಮ್ಮ ಪ್ರತಿಕ್ರಿಯೆಯನ್ನು ಹಿಡಿದಿಟ್ಟು, ಕೋಪವನ್ನು ತಗ್ಗಿಸಲು ನೋಡುತ್ತಾರೆ. ಎಲ್ಲಾ ಭಾವನೆಗಳಂತೆ, ಕೋಪವು ಚಲನೆಯಲ್ಲಿನ ಶಕ್ತಿಯಾಗಿದೆ. ಕೋಪ ನಿಗ್ರಹಿಸಿದಾಗ ಅದು ತಣ್ಣಗಾಗುತ್ತದೆ ಮತ್ತು ಬಿಡುಗಡೆಗಾಗಿ ತುಡಿಯುತ್ತಿರುತ್ತದೆ. ಹೀಗಿರುವಾಗ ಸಣ್ಣ ಪ್ರಚೋದನೆಯೂ ಕೆಲವೊಂದು ಹಂತದಲ್ಲಿ ಗಂಭೀರ ರೂಪವನ್ನು ತಾಳಬಹುದು.

ಅಂತಹ ಅಂಶಗಳು ಪ್ರಕರಣಕ್ಕೆ ಮುಂಚಿತವಾಗಿವೆಯೇ ಎಂದು ತಿಳಿಯಲು ಸಮಯ ತೆಗೆದುಕೊಳ್ಳುತ್ತದೆಯಾದರೂ, ಆರೋಪಿ ಅಥವಾ ಕೃತ್ಯವೆಸಗಿದ ವ್ಯಕ್ತಿ  ದಮನಿತ ಭಾವನೆಗಳನ್ನು ಬಿಡುಗಡೆ ಮಾಡಲು ಹಿಂಸಾತ್ಮಕ ಅಪರಾಧಗಳನ್ನು ಮಾಡಬಹುದು ಎಂದು ಮನೋವೈದ್ಯರು ಹೇಳುತ್ತಾರೆ. ಮದುವೆಗೆ ಶ್ರದ್ಧಾ ಒತ್ತಾಯ ಮಾಡಿದಾಗ ನಡೆದ ಜಗಳ ನಂತರ ಅಫ್ತಾಬ್ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

TV9 Kannada


Leave a Reply

Your email address will not be published.