ಕೊರೊನಾದ ನಡುವೆ ಲಿಬಿಯಾದಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದೆ. ಅದೊಂದು ರೋಬೋಟ್ ಲಿಬಿಯಾದ ನಿದ್ದೆ ಹಾರುವಂತೆ ಮಾಡಿದೆ. ಈ ಭಯನಾಕ ರೋಬೋಟ್ ಲಿಬಿಯಾದ್ಯಂತ ಆತಂಕದ ಕಾರ್ಮೋಡ ಕವಿಯುವಂತೆ ಮಾಡಿದೆ.
ಹೌದು.. ಅದೊಂದು ರೋಬೋ ಇದೀಗ ಎಲ್ಲೆಡೆ ಅಲ್ಲೋಲ ಕಲ್ಲೋಲ ಸೃಷ್ಠಿಸಿದೆ. ಲಿಬಿಯಾದಲ್ಲಿ ದಿಗಿಲು ಉಂಟು ಮಾಡಿದ ಆರೋಬೋ ಬರೀ ಲಿಬಿಯಾ ಮಾತ್ರವಲ್ಲದೇ ಜಾಗತಿಕ ಆತಂಕಕ್ಕೂ ಕಾರಣವಾಗಿದೆ.

ಮಾನವ ನಿರ್ಮಿಸಿದ ರೋಬೋಗಳು ಮಾನವನಿಗೆ ಮುಳುವಾಯ್ತಾ?
ಮನುಷ್ಯನನ್ನ ಕೊಲ್ಲೋದಕ್ಕೆ ಬರ್ತಿದ್ಯಾ ಕ್ವಾಡ್ ಕ್ವಾಫ್ಟರ್ ರೋಬೋ?
ಏನಿದು ಕ್ವಾಡ್ ಕ್ವಾಫ್ಟರೆನ್ನುವ ಖತರ್ನಾಕ್ ಕಿಲ್ಲಿಂಗ್ ರೋಬೋದ ಕಥೆ?

ಮನುಷ್ಯ ನಿರ್ಮಿಸಿದ ರೋಬೋಟ್ ಗಳು ಇದೀಗ ಮನುಷ್ಯನನ್ನೇ ಕೊಲ್ಲುತ್ತಿದೆ. ಲಿಬಿಯಾದಲ್ಲಿ ಮನುಷ್ಯನನ್ನು ಕೊಲ್ಲೋದಕ್ಕೆ ರೋಬೋಟ್ ಬರ್ತಿದೆಯಂತೆ. ಮಾನವನ ಮೇಲೆ ಕಿಲ್ಲರ್ ರೋಬೋ ಸದ್ದಿಲ್ಲದೆ ಅಟ್ಯಾಕ್ ಮಾಡ್ತಿದೆ. ಮನುಷ್ಯರನ್ನ ಕೊಲ್ಲುವ ಕ್ವಾಡ್ ಕ್ವಾಫ್ಟರ್ ಎನ್ನುವ ರೋಬೋ ಯಾವುದೇ ಅಪ್ಪಣೆ ಇಲ್ಲದೆ, ಸೂಜಿಯಷ್ಟು ಸುಳಿವವೂ ಬಿಟ್ಟುಕೊಡದೆ ಕೊಂದು ಮುಗಿಸಿದೆ ಎನ್ನಲಾಗಿದೆ. ಇವು ಸ್ವತಃ ಮಾನವನೇ ನಿರ್ಮಿಸಿರುವ ರೋಬೋಗಳು.. ಇದೀಗ ಮಾನವನ ಜೀವಕ್ಕೇ ಮುಳ್ಳಾಯ್ತಾ ಎಂಬ ಪ್ರಶ್ನೆ ಹುಟ್ಟುವಂತೆ ಮಾಡಿದೆ. ಮಾನವನನ್ನು ಕೊಲ್ಲಲು ರೋಬೋಗಳು ಬರ್ತಿದೆ ಎನ್ನುವ ಮಾಹಿತಿ ಲಿಬಿಯಾ ಮಾತ್ರವಲ್ಲದೇ ಜಾಗತಿಕ ಆತಂಕಕ್ಕೂ ಕಾರಣವಾಗಿದೆ.

ಕಿಲ್ಲರ್ ರೋಬೋಗಳನ್ನು ತಯಾರಿಸಿದ್ದು ಯಾರು ಗೊತ್ತಾ?
ಈ ರೋಬೋಗಳ ಬಗ್ಗೆ ವಿಶ್ವಸಂಸ್ಥೆ ಆತಂಕ ವ್ಯಕ್ತಪಡಿಸಿದ್ದೇಕೆ?
ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ನೀಡಿರುವ ಸೂಚನೆ ಏನು?

ಯಾವುದೇ ಅಪ್ಪಣೆ ಇಲ್ಲದೇ ಮಾನವನನ್ನು ಕೊಲ್ಲುವ ಕ್ವಾಡ್ ಕ್ವಾಫ್ಟರ್ ಎನ್ನುವ ರೋಬೋಗಳನ್ನು ಟರ್ಕಿಶ್ ಮಿಲಿಟರಿ ಕಂಪನಿ ತಯಾರು ಮಾಡಿದೆ ಎನ್ನಲಾಗಿದೆ. ಮಾನವನ ಜೀವಕ್ಕೆ ಕುತ್ತು ತರುವಂತಹ ಇಂತಹ ರೋಬೋಗಳನ್ನ ನಿರ್ಮಿಸಿರುವ ಟರ್ಕಿಶ್ ಮಿಲಿಟರಿ ಕಂಪನಿಯ ಅಸಲಿಯತ್ತು ಇನ್ನೂ ನಿಗೂಢವಾಗಿಯೇ ಉಳಿದಿದೆ. ಇದ್ರ ಆಳಕ್ಕೆ ಇಳಿದ್ರೆ ಮಾತ್ರ ಈ ರೋಬೋಗಳನ್ನು ನಿರ್ಮಿಸಿರುವ ಮೂಲ ಉದ್ದೇಶ ಸ್ಪಷ್ಟವಾಗಲಿದೆ.

ಮಾನವನನ್ನು ಕೊಲ್ಲಲು ರೋಬೋಗಳು ಬರ್ತಿದೆ ಎಂದು ಗೊತ್ತಾಗುತ್ತಿದ್ದಂತೆಯೇ ವಿಶ್ವಸಂಸ್ಥೆ ಕೂಡ ಆತಂಕಗೊಂಡಿದೆ. ಆಕ್ವಿವೇಟ್ ಕೋಡ್ ಗಳಿಲ್ಲದೆಯೇ ರೋಬೋಗಳು ಆಪರೇಟ್ ಆಗ್ತಿರುವುದು ನಿಜಕ್ಕೂ ಭಯಮೂಡಿಸಿದೆ. ಇಂತಹ ರೋಬೋಗಳು ನಿಜಕ್ಕೂ ಮನುಕುಲಕ್ಕೆ ಮಾರಕ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ ಎನ್ನಲಾಗಿದೆ. ಮಾನವನನ್ನ ಕೊಲ್ಲುವ ಇಂತಹ ರೋಬೋಗಳ ಕುರಿತು ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದ್ದು, ಮನುಷ್ಯನನ್ನು ಕೊಲ್ಲುವ ಇಂತಹ ರೋಬೋಗಳನ್ನು ತ್ವರಿತವಾಗಿ ನಾಶ ಮಾಡುವಂತೆ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ಸೂಚನೆ ನೀಡಿದೆ.

ಕಿಲ್ಲಿಂಗ್ ರೋಬೋ ಆಪರೇಟ್ ಆಗ್ತಿರೋದು ಇದೇ ಮೊದ್ಲೇನಾ?
ಇಂತಹ ರೋಬೋಗಳನ್ನು ಹಿಂದೆ ಎಲ್ಲಾದ್ರೂ ಬಳಸಲಾಗಿತ್ತಾ?

ರೋಬೋಗಳು ಆಪರೇಟ್ ಆಗ್ತೀರೋದು ಇದೇ ಮೊದ್ಲೇನಲ್ಲ. ಇಂತಹ ರೋಬೋಗಳನ್ನು ಮಿಲಟರಿಯಲ್ಲಿ ಬಳಸಲಾಗ್ತಿದೆ ಎನ್ನಲಾಗಿದೆ. ಕೆಲ ಸಂದರ್ಭಗಳಲ್ಲಿ ಬಾಂಬ್ ಗಳನ್ನು ನಿಷ್ಕ್ರಿಯಗೊಳಿಸಲು ರೊಬೋಗಳನ್ನು ಬಳಸಲಾಗ್ತಿದ್ದು. ಇವು ಉಗ್ರರ ಬೇಟೆಗೂ ಸಹಕಾರಿಯಾಗ್ತಿತ್ತು. ಈ ಮೂಲಕ ಶತ್ರುಗಳ ಚಹರೆಯ ಬಗ್ಗೆ ಮಾಹಿತಿ ನೀಡ್ತಿತ್ತು. ಮಾನವ ಚಾಲಿತ ವಸ್ತುವೊಂದು ಮಾನವನ ನಿಯಂತ್ರಣಕ್ಕೆ ಸಿಗದಂತೆ ಮನುಷ್ಯನನ್ನೇ ಕೊಲ್ಲೋಕೆ ಮುಂದಾಗಿರೋದು ನಿಜಕ್ಕೂ ದೊಡ್ಡ ದುರಂತ. ವೈಜ್ಷಾನಿಕ ನಾವು ಮಾಡುವ ಕೆಲ ಹೊಸ ಹೊಸ ಅನ್ವೇಷಣೆಗಳು ಮುಂದೆ ಮನುಕುಲಕ್ಕೆ ಹೇಗೆ ಮಾರಕವಾಗುತ್ತೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.

The post ಬೆಚ್ಚಿ ಬೀಳಿಸಿದ ಕಿಲ್ಲರ್ ರೋಬೋ.. ಲಿಬಿಯಾದಲ್ಲಿ ನಡೆದಿದ್ದೇನು ಗೊತ್ತಾ? appeared first on News First Kannada.

Source: newsfirstlive.com

Source link