ಬೆಟಗೇರಿ ಸುಮಯಾಳ ನೆರವಿಗೆ ಧಾವಿಸಿದ ಸಹೃದಯಿಯೊಬ್ಬರು ಹೊಸ ಪುಸ್ತಕಗಳನ್ನು ಕೊಡಿಸಿದ್ದಾರೆ | A benevolent person rushes to Betageri Sumaya’s help and buys new books for herಸಂಗಮೇಶ ಅವರು ಸುಮಯಾಗೆ ಹೊಸ ಪುಸ್ತಕ, ನೋಟ್ ಬುಕ್ಸ್, ಪೆನ್-ಪೆನ್ಸಿಲ್ ಕೊಡಿಸಿದ್ದಾರಲ್ಲದೆ ಒಂದು ವಾರಕ್ಕಾಗುವಷ್ಟು ರೇಷನ್ ಸಹ ನೀಡಿದ್ದಾರೆ.

TV9kannada Web Team


| Edited By: Arun Belly

Sep 12, 2022 | 11:41 AM
ಗದಗ: ಜಿಲ್ಲೆಯ ಬೆಟಗೇರಿಯಲ್ಲಿ ವಾಸವಾಗಿರುವ ಸುಮಯಾ (Sumaya) ಹೆಸರಿನ ವಿದ್ಯಾರ್ಥಿನಿಯ ಕತೆ-ವ್ಯಥೆಯನ್ನು ಟಿವಿ ಕನ್ನಡ ವಾಹಿನಿಯಲ್ಲಿ ವೀಕ್ಷಿಸಿದ ಸಂಗಮೇಶ ಕವಳಿಕಾಯೀ (Sangamesh Kavalikayi) ಹೆಸರಿನ ಸಹೃದಯಿಗಳು ಕುಟುಂಬದ ನೆರವಿಗೆ ಧಾವಿಸಿದ್ದಾರೆ. ಸುಮಯಾಳ ಸ್ಕೂಲ್ ಬ್ಯಾಗ್ (school bag) ಮತ್ತು ದವಸ ಧಾನ್ಯ ಮಳೆನೀರು ಮನೆಯೊಳಗೆ ನುಗ್ಗಿದ್ದರಿಂದ ತೊಯ್ದು ಹಾಳಾಗಿದ್ದವು. ಸಂಗಮೇಶ ಅವರು ಸುಮಯಾಗೆ ಹೊಸ ಪುಸ್ತಕ, ನೋಟ್ ಬುಕ್ಸ್, ಪೆನ್-ಪೆನ್ಸಿಲ್ ಕೊಡಿಸಿದ್ದಾರಲ್ಲದೆ ಒಂದು ವಾರಕ್ಕಾಗುವಷ್ಟು ರೇಷನ್ ಸಹ ನೀಡಿದ್ದಾರೆ.

TV9 Kannada


Leave a Reply

Your email address will not be published.