ಮಡಿಕೇರಿ: ಕೊರೊನಾ ಸೋಂಕಿನಿಂದ ಬಳಲುತ್ತಿರುವ ಮನೆಗಳಿಗೆ ಭೇಟಿ ನೀಡಿ ನಟ ಭುವನ್ ಪೊನ್ನಣ್ಣ ಹಾಗೂ ಹರ್ಷಿಕಾ ಪೂಣಚ್ಚ ನೆರವು ನೀಡಿದ್ದಾರೆ.

ಸ್ಯಾಂಡಲ್‍ವುಡ್ ಕಲಾವಿದರಾದ ನಟ ಭುವನ್ ಹಾಗೂ ನಟಿ ಹರ್ಷಿಕಾ ಪೂಣಚ್ಚ ಕೊಡಗು ಜಿಲ್ಲೆಯಲ್ಲಿ ಸಂಕಷ್ಟದಲ್ಲಿರುವ ಜನರಿಗೆ ಕಳೆದ ನಾಲ್ಕು ಐದು ದಿನಗಳಿಂದ ಸಹಾಯ ಹಸ್ತ ಚಾಚುತ್ತಿದ್ದಾರೆ.

ಕೊರೊನಾ ಮಾಹಾಮಾರಿಯಿಂದ ಸೋಂಕಿತರ ಮನೆಗಳಿಗೆ ಸೀಲ್ ಡೌನ್ ಮಾಡಿ ಮನೆಯಿಂದ ಹೊರಗೆ ಬರದಂತೆ ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾಕಾರ್ಯಕರ್ತರು ತಿಳಿಸಿದ್ದಾರೆ. ಹೀಗಾಗಿ ಬಡ ಕೂಲಿ ಕಾರ್ಮಿಕರು ತೋಟದ ಲೈನ್ ಮನೆಗಳಲ್ಲಿ ವಾಸವಾಗಿದ್ದಾರೆ. ಅದರಲ್ಲೂ ಮಡಿಕೇರಿ ತಾಲೂಕಿನ ಕಾಲೂರು ಗ್ರಾಮದಲ್ಲಿ ಸಾಕಷ್ಟು ಜನರು ಬೆಟ್ಟಗುಡ್ಡದ ವಾಸ ಮಾಡುವ ನಿವಾಸಿಗಳು ಮನೆಯಿಂದ ಹೊರ ಬರದೇ ಕಷ್ಟ ಪಡುತ್ತಿದ್ದಾರೆ. ಅಷ್ಟೇ ಅಲ್ಲದೇ ಕಾಲೂರಿನಲ್ಲಿ ಕೊರೊನಾದಿಂದ ಸೀಲ್ ಡೌನ್ ಆಗಿರುವ 40 ಮನೆಗಳಿಗೆ ಬೆಟ್ಟ ಗುಡ್ಡಗಳನ್ನು ಹತ್ತಿ ಭುವನಂ ತಂಡ ಹಾಗೂ ನಟಿ ಹರ್ಷಿಕಾ ಪೂಣಚ್ಚ ಭೇಟಿ ನೀಡಿ ಕಷ್ಟದಲ್ಲಿರುವ ಜನರಿಗೆ ಅಗತ್ಯ ವಸ್ತುಗಳನ್ನು ತಲುಪಿಸಿದ್ದಾರೆ.

ಸದ್ಯ ಭುವನ್ ತಂಡದ ಕಾರ್ಯಕ್ಕೆ ಗುಡ್ಡಗಾಡಿನ ಪ್ರದೇಶದ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

The post ಬೆಟ್ಟಗುಡ್ಡದಲ್ಲಿ ಸೀಲ್ ಡೌನ್ ಆದ ಸೋಂಕಿತರ ಮನೆಗಳಿಗೆ ಭುವನ್ ಹರ್ಷಿಕಾ ನೆರವು appeared first on Public TV.

Source: publictv.in

Source link