ಬೆಂಗಳೂರು:  ಕೊರೊನಾ ರೋಗಿಗಳಿಗೆ ನೀಡಬೇಕಾದ ಬೆಡ್​​ಗಳನ್ನ ಅಕ್ರಮವಾಗಿ ಬ್ಲಾಕ್ ಮಾಡುತ್ತಿದ್ದರು ಎನ್ನಲಾದ ಹಗರಣ ಸಂಬಂಧ ಮತ್ತೋರ್ವ ಆರೋಪಿಯನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬಾಬು ಬಂಧಿತ ಆರೋಪಿ. ಈತನನ್ನ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ಸಿಸಿಬಿ‌ ತನಿಖೆ ನಡೆಸುತ್ತಿದೆ.

ಏನಿದು ಪ್ರಕರಣ?
ಬಿಬಿಎಂಪಿ ದಕ್ಷಿಣ ವಲಯದ ಕೋವಿಡ್ ವಾರ್ ರೂಮ್​ನಲ್ಲಿ ಭಾರೀ ಅವ್ಯವಹಾರ ನಡೆದಿದೆ ಎನ್ನಲಾಗಿದ್ದು ಇದನ್ನ ಸಂಸದರಾದ ತೇಜಸ್ವಿ ಸೂರ್ಯ ಹಾಗೂ ಶಾಸಕ ಸತೀಶ್​ರೆಡ್ಡಿ ಮೇ 4ರಂದು ಬಯಲಿಗಳೆದಿದ್ದರು.

ಬಿಬಿಎಂಪಿ ಅಧಿಕಾರಿಗಳು ತಮಗೆ ಬೇಕಾದವರಿಗೆ, ಆಪ್ತರಿಗೆ ಹಾಗೂ ಪ್ರಭಾವಿಗಳಿಗಾಗಿ ಯಾರ್ಯಾರದ್ದೋ ಹೆಸರಿನಲ್ಲಿ 4,000 ಕ್ಕೂ ಹೆಚ್ಚು ಬೆಡ್​​ಗಳನ್ನು ಬುಕ್​ ಮಾಡಿದ್ದರು ಎನ್ನಲಾಗಿದೆ. ನಿತ್ಯ ಹತ್ತಾರು ಸಾವಿರ ಸೋಂಕಿತರು ಒಂದೆಡೆ ಬೆಡ್​​ಗಳಿಲ್ಲದೇ ಬಡಿದಾಡುತ್ತಿದ್ದರೆ ಇತ್ತ ಬಿಬಿಎಂಪಿ ಅಧಿಕಾರಿಗಳು.. ತಮಗೆ ಬೇಕಾದವರಿಗೆ ಲಕ್ಷ ಲಕ್ಷ ದುಡ್ಡು ಕೊಟ್ಟವರಿಗೆ ಐಸಿಯು, ವೆಂಟಿಲೇಟರ್, ಆಕ್ಸಿಜನ್ ಬೆಡ್​ಗಳನ್ನ ಬ್ಲಾಕ್ ಮಾಡಿಕೊಳ್ತಿದ್ದಾರೆ ಎಂದು ತೇಜಸ್ವಿ ಸೂರ್ಯ ಆರೋಪಿಸಿದ್ದರು. .

ಇನ್ನು ವಾರ್​ರೂಂನಿಂದ ಹೊರಗಿರುವ ದಲ್ಲಾಳಿಗಳು, ಕಿಂಗ್​ಪಿನ್​ಗಳ ನಿರ್ದೇಶನದಂತೆ ವಾರ್ ರೂಂ ಸಿಬ್ಬಂದಿ ಬೆಡ್​ಗಳನ್ನ ಬುಕ್​ ಮಾಡಿ ಕೊಡ್ತಿದ್ದರು ಅಂತ ಆರೋಪಿಸಲಾಗಿದೆ. ಇದು ಗಮನಕ್ಕೆ ಬರ್ತಿದ್ದಂತೆ ಕಿಂಗ್ ಪಿನ್ ಬಗ್ಗೆ ಪೊಲೀಸರಿಗೆ ಶಾಸಕ ಸತೀಶ್ ರೆಡ್ಡಿ & ಸಂಸದ ತೇಜಸ್ವಿ ಸೂರ್ಯಮಾಹಿತಿ ನೀಡಿದ್ದರು. ಈ ಸಂಬಂಧ ಸದ್ಯ ಸಿಸಿಬಿ ತನಿಖೆ ನಡೆಸುತ್ತಿದೆ.

ಇದನ್ನೂ ಓದಿ: ಬೆಡ್​ ಬ್ಲಾಕಿಂಗ್ ಪ್ರಕರಣ: ದಂಧೆ ಬಯಲಿಗೆಳೆದವರ ವಿರುದ್ಧವೇ ದೂರು ನೀಡಿದ ವಕೀಲ.. ಯಾಕೆ ಗೊತ್ತಾ..?

ಇದನ್ನೂ ಓದಿ: ಬೆಡ್​ ಬ್ಲಾಕಿಂಗ್ ಹಗರಣ; 8 ವಲಯಗಳಲ್ಲಿ 8 ತಂಡಗಳಾಗಿ ದಾಳಿ ನಡೆಸಿದ ತನಿಖಾ ತಂಡ

The post ಬೆಡ್​​ ಬ್ಲಾಕಿಂಗ್ ಕೇಸ್​​ನಲ್ಲಿ ಮತ್ತೋರ್ವ ಆರೋಪಿ ಅರೆಸ್ಟ್​ appeared first on News First Kannada.

Source: newsfirstlive.com

Source link