ಬೆಂಗಳೂರು: ಇಂದು ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಎಂ.ಎಸ್​ ರಾಮಯ್ಯ ಆಸ್ಪತ್ರೆಗೆ ದಿಢೀರ್ ಭೇಟಿ  ನೀಡಿ ಬೆಡ್ ಹಾಗೂ ಆಕ್ಸಿಜನ್ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿದ್ರು.

ಬೆಡ್ ಸಮಸ್ಯೆ ಕುರಿತು ದೂರು ಬಂದ ಹಿನ್ನೆಲೆ ಯಡಿಯೂರಪ್ಪ ಆಸ್ಪತ್ರೆಗಳಿಗೆ ಸ್ವತಃ ರೌಂಡ್ಸ್ ಹಾಕಿದ್ರು. ಎಂ.ಎಸ್​ ರಾಮಯ್ಯ ಆಸ್ಪತ್ರೆಗೆ ಖುದ್ದು ಭೇಟಿ ನೀಡಿ, ಆಸ್ಪತ್ರೆ ಮ್ಯಾನೇಜ್​​ಮೆಂಟ್ ಜೊತೆಗೆ ಚರ್ಚೆ ನಡೆಸಿದ್ರು. ಇದೇ ವೇಳೆ ಬೆಡ್ ನೀಡದಿರೋದಕ್ಕೆ ದೂರು ಬಂದ ಕುರಿತು ಆಸ್ಪತ್ರೆ ಅಧಿಕಾರಿಗಳ ವಿರುದ್ಧ ಸಿಎಂ ಕಿಡಿ ಕಾರಿದ್ರು. ಬಳಿಕ ಕಿಮ್ಸ್ ಆಸ್ಪತ್ರೆಗೆ ತೆರಳಿ, ಬೆಡ್ ಹಾಗೂ ಆಕ್ಸಿಜನ್ ಸಮಸ್ಯೆ ವಿಚಾರವಾಗಿ ಅಲ್ಲೂ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ರು.

ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ರಾಮಯ್ಯ ಆಸ್ಪತ್ರೆಯ ಜಯರಾಮ್ ಹಾಗೂ ಶ್ರೀನಿವಾಸ್ ಮೂರ್ತಿ ಜೊತೆ ಮಾತನಾಡಿದ್ದೇವೆ. ನಮಗೆ ಸಹಕಾರ ನೀಡೋದಾಗಿ ಜಯರಾಮ್ ಒಪ್ಪಿದ್ದಾರೆ. ಐಸಿಯು ವ್ಯವಸ್ಥೆ ಇರೋ 450 ಬೆಡ್, 450 ಇತರೆ ಬೆಡ್ ಇವೆ. ಹೆಚ್ಚುವರಿಯಾಗಿ 200-300 ಬೆಡ್ ವ್ಯವಸ್ಥೆ ಮಾಡಲಿದ್ದಾರೆ. ಸಂಜೆ ಸಭೆಗೂ ಆಗಮಿಸಲಿದ್ದಾರೆ ಎಂದರು.

ಕೆಂಪೇಗೌಡ ಆಸ್ಪತ್ರೆಯಲ್ಲಿ‌ ಪ್ರಮುಖರೊಂದಿಗೆ ಚರ್ಚೆ ಮಾಡಿದ್ದೇನೆ. ರಾಜ್ಯದಲ್ಲಿ 5 ರಿಂದ 6 ಪಟ್ಟು ಕೊರೊನಾ ಜಾಸ್ತಿ ಆಗ್ತಿದೆ. ಮರಣ ಸಂಖ್ಯೆ ಕೂಡ ನಮ್ಮ ಕೈಮಿರಿ ಹೋಗ್ತಿದೆ. ಇಂತಹ ಸಮಯದಲ್ಲಿ ಖಾಸಗಿ ಆಸ್ಪತ್ರೆಗಳು ಬೆಡ್ ನೀಡುವ ಮೂಲಕ ಸಹಾಯ ಮಾಡಬೇಕು. ಈ ವಿಚಾರವಾಗಿ ಸಂಜೆ ನಮ್ಮ ಮನೆಯಲ್ಲಿ ಖಾಸಗಿ ಆಸ್ಪತ್ರೆ ಮುಖ್ಯಸ್ಥರ ಜೊತೆಗೆ ಸಭೆ ಇಟ್ಕೊಂಡಿದ್ದೇನೆ. ಆ ಸಭೆಯಲ್ಲಿ ಸುದೀರ್ಘವಾಗಿ ಚರ್ಚೆ ಮಾಡುತ್ತೇನೆ ಎಂದು ತಿಳಿಸಿದ್ರು.

The post ಬೆಡ್​-ಆಕ್ಸಿಜನ್ ಸಮಸ್ಯೆ ಬಗ್ಗೆ ದೂರು: ದಿಢೀರ್ ಆಸ್ಪತ್ರೆಗಳಿಗೆ ತೆರಳಿ ಸಿಎಂ ಪರಿಶೀಲನೆ appeared first on News First Kannada.

Source: newsfirstlive.com

Source link