ಬೆಂಗಳೂರು: ಬೆಡ್ ಬುಕ್ಕಿಂಗ್ ದಂಧೆ ಆರೋಪ ಪ್ರಕರಣದಲ್ಲಿ ಸಸ್ಪೆಂಡ್​ ಆಗಿ, ಸಿಸಿಬಿ ವಿಚಾರಣೆ ಎದುರಿಸಿದ್ದ 17 ಮಂದಿ ಪೈಕಿ 11 ಸಿಬ್ಬಂದಿಯನ್ನ ಬಿಬಿಎಂಪಿ ಮರುನೇಮಕ ಮಾಡಿದೆ.

ಮೇ 4ನೇ ತಾರೀಖು ಸಂಸದ ತೇಜಸ್ವಿ ಸೂರ್ಯ ಬೆಡ್​​ ಬ್ಲಾಕಿಂಗ್​ ದಂಧೆಯಲ್ಲಿ ಸಿಲುಕಿದ್ದ 17 ಮಂದಿಯ ಹೆಸರನ್ನ ಬಹಿರಂಗಪಡಿಸಿದ್ರು. ಬಳಿಕ ಆ 17 ಮಂದಿಯನ್ನೂ ಕೆಲಸದಿಂದ ತೆಗೆದು ಹಾಕಲಾಗಿತ್ತು. ಈ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದರಿಂದ ಆಗಿದ್ದ ಗೊಂದಲದ ಹಿನ್ನಲೆ, ಸಿಸಿಬಿ 17 ಮಂದಿಯನ್ನೂ ವಿಚಾರಣೆಗೆ ಒಳಪಡಿಸಿತ್ತು. ನಂತರ ಅವರನ್ನ ಬೇರೆ ವಲಯಕ್ಕೆ ಏಜೆನ್ಸಿ ವರ್ಗಾವಣೆ ಮಾಡಿತ್ತು.

ಇದೀಗ ಅಷ್ಟೂ ಜನರನ್ನ ವಾಪಸ್ಸು ದಕ್ಷಿಣ ವಿಭಾಗಕ್ಕೆ ಪುನಃ ಟ್ರಾನ್ಸಫರ್ ಮಾಡಲಾಗಿದೆ. ಆದರೆ ಅವರನ್ನ ಬೆಡ್ ಬುಕ್ಕಿಂಗ್, ಪ್ರೈವೇಟ್ ಹಾಸ್ಪಟಲ್ ಡಿಟೇಲ್ಸ್, ಆಸ್ಪತ್ರೆ ಬೆಡ್ ಫಿಲ್ಲಿಂಗ್ ವಿಭಾಗದಿಂದ ತೆಗೆದಿದ್ದು, ಕಾಂಟ್ಯಾಕ್ಟ್ ಟ್ರೇಸಿಂಗ್​ ವಿಭಾಗಕ್ಕೆ ನೇಮಕ ಮಾಡಲಾಗಿದೆ.

The post ಬೆಡ್​ ಬುಕ್ಕಿಂಗ್​ ದಂಧೆ ಕೇಸ್: ಸಸ್ಪೆಂಡ್​ ಆಗಿದ್ದ 17 ಸಿಬ್ಬಂದಿಯಲ್ಲಿ 11 ಮಂದಿ ಮರುನೇಮಕ appeared first on News First Kannada.

Source: newsfirstlive.com

Source link