ಬೆಂಗಳೂರು: ಬೆಡ್ ಬುಕಿಂಗ್ ಹಗರಣ ಕೇಸ್​ನಲ್ಲಿ ಮತ್ತೋರ್ವ ಆರೋಪಿ ಅರೆಸ್ಟ್ ಆಗಿದ್ದಾನೆ. ಆಂಥೋನಿ ಎಂಬಾತನನ್ನ ಸಿಸಿಬಿ ಪೊಲೀಸ್ರು ಬಂಧಿಸಿದ್ದಾರೆ.

ಆರೋಪಿ ಆಂಥೋನಿ, ಸಪ್ತಗಿರಿ ಆಸ್ಪತ್ರೆಯಲ್ಲಿ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ರೋಗಿಗಳಿಂದ ಹಣ ಪಡೆದು ಬೆಡ್ ಹಂಚಿಕೆ ಮಾಡ್ತಿದ್ದ ಎಂದು ಆರೋಪಿಸಲಾಗಿದೆ.

ಸದ್ಯ ಸಿಸಿಬಿ ಪೊಲೀಸ್ರು ಆರೋಪಿಯನ್ನ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇದುವರೆಗೂ ಬೆಡ್ ಬ್ಲಾಕಿಂಗ್ ಕೇಸ್​ನಲ್ಲಿ 10 ಜನರನ್ನ ಬಂಧಿಸಲಾಗಿದ್ದು, ಅದ್ರಲ್ಲಿ ಇಬ್ಬರಿಗೆ ಕೋವಿಡ್ ಪಾಸಿಟಿವ್ ಆಗಿದೆ.

The post ಬೆಡ್​ ಬುಕ್ಕಿಂಗ್ ಹಗರಣ ಕೇಸ್​: ಸಪ್ತಗಿರಿ ಆಸ್ಪತ್ರೆಯ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಅರೆಸ್ಟ್​ appeared first on News First Kannada.

Source: newsfirstlive.com

Source link