ಬೆಂಗಳೂರು: ಕೊರೊನಾ ವೇಳೆ ಬೆಡ್ ಬ್ಲಾಕಿಂಗ್ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ತನಿಖಾ ವರದಿಯನ್ನ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಇಂದು ಹೈಕೋರ್ಟ್​ಗೆ ಸಲ್ಲಿಸಿದರು.

ಮೂರು ಎಫ್ಐಆರ್​ಗಳ ಅಡಿಯಲ್ಲಿ ತನಿಖೆ ನಡೆಯುತ್ತಿದೆ ಎಂದು ಹೆಚ್ಎಸ್ಆರ್ ಲೇಔಟ್, ಜಯನಗರ, ಸಿಸಿಬಿ ಎಫ್ಐಆರ್​ಗಳ‌ ಮಾಹಿತಿ ನೀಡಿದರು.. ಎರಡು ಪ್ರಕರಣಗಳ ತನಿಖೆ ನಡೆಯುತ್ತಿದೆ.. ಒಂದು ಪ್ರಕರಣದಲ್ಲಿ ಚಾರ್ಜ್ ಶೀಟ್ ಹಾಕಲಾಗಿದೆ ಎಂದು ಹೈಕೋರ್ಟ್​ಗೆ ಮಾಹಿತಿ ನೀಡಿದರು. ವರದಿಯನ್ನ ಹೈಕೋರ್ಟ್ ನ್ಯಾಯಪೀಠ ದಾಖಲಿಸಿಕೊಂಡಿತು.

The post ಬೆಡ್​ ಬ್ಲಾಕಿಂಗ್ ಹಗರಣ: ಹೈಕೋರ್ಟ್​ಗೆ ತನಿಖಾ ವರದಿ ಸಲ್ಲಿಸಿದ ಸಂದೀಪ್ ಪಾಟೀಲ್ appeared first on News First Kannada.

Source: newsfirstlive.com

Source link