ಬೆಂಗಳೂರು: ಬಿಬಿಎಂಪಿ ಕೋವಿಡ್ ವಾರ್ ರೂಮ್​ನಲ್ಲಿ ನಡೆಯುತ್ತಿದ್ದ ಬೆಡ್ ಬುಕ್ಕಿಂಗ್ ಆರೋಪದ ಕುರಿತಂತೆ ಮಹತ್ವದ ಸುದ್ದಿಗೋಷ್ಠಿ ನಡೆಸಿರುವ ಸಂಸದ ತೇಜಸ್ವಿ ಸೂರ್ಯ ಅವರು, ಬೆಡ್ ಬುಕ್ಕಿಂಗ್ ಸಾಫ್ಟ್‍ವೇರ್​ನಲ್ಲಿ ಮಾಡಿರುವ ಮಹತ್ವದ ಬದಲಾವಣೆಗಳ ಕುರಿತು ವಿವರಣೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತೇಜಸ್ವಿ ಸೂರ್ಯ ಅವರು, ನಾನು ಮತ್ತು ಮೂವರು ಶಾಸಕರು ಕೋವಿಡ್ ಬೆಡ್ ಕುರಿತ ಅವ್ಯವಹಾರವನ್ನು ಸರ್ಕಾರದ ಗಮನಕ್ಕೆ ತಂದಿದ್ದೆವು. ಬಿಬಿಎಂಪಿ ಸರ್ಕಾರಿ ಕೋಟಾ ಬೆಡ್‍ನಲ್ಲಿ ಪಾರದರ್ಶಕತೆ ಇರಲಿಲ್ಲ. ಒಬ್ಬರ ಹೆಸರಲ್ಲಿ ಹತ್ತಾರು ಬೆಡ್ ಹಂಚಿಕೆ ಆಗುತ್ತಿತ್ತು. ಬೆಂಗಳೂರಿನಲ್ಲಿ ದೊಡ್ಡ ಜಾಲ ಇದಕ್ಕಾಗಿ ಕೆಲಸ ಮಾಡುತ್ತಿತ್ತು. ಅಲ್ಲದೇ ಬೆಡ್‍ಅನ್ನು ಒಂದು ಲಕ್ಷಕ್ಕೂ ಅಧಿಕ ರೂಪಾಯಿಗೆ ಮಾರಾಟ ಮಾಡಲಾಗುತ್ತಿತ್ತು. ಸಿಎಂ ದಂಧೆ ಕುರಿತು ಸಭೆ ನಡೆಸಿ ಕ್ರಮಕ್ಕೆ ಆಗ್ರಹಿಸಿದ್ದರು. ವಿಷಯದ ಗಾಂಭೀರ್ಯತೆ ಗ್ರಹಿಸಿ ಕೋರ್ಟ್ ವರದಿ ಕೇಳಿದೆ.

ಮೊದಲು ಬೆಡ್ ಬುಕ್ ಆದ ಬಳಿಕ 10 ಗಂಟೆ ಸಮಯ ಇರುತ್ತಿತ್ತು. ಇದು ದುರುಪಯೋಗ ಆಗುತ್ತಿತ್ತು, ಇದನ್ನ ಬದಲಾಯಿಸಲಾಗಿದೆ. ಸೋಂಕಿತ ವ್ಯಕ್ತಿ 4 ಗಂಟೆ ಒಳಗೆ ಆಸ್ಪತ್ರೆಗೆ ದಾಖಲಾಗಬೇಕು. ಇಲ್ಲ ಎಂದರೆ ಬುಕ್ಕಿಂಗ್ ಕ್ಯಾನ್ಸಲ್ ಆಗಲಿದೆ. ಮ್ಯಾನುವಲ್ ಅನ್ ಬ್ಲಾಕ್ ವ್ಯವಸ್ಥೆ ನಿಂತಿದೆ. ಹೀಗಾಗಿ ದಂಧೆ ನಡೆಸೋದಕ್ಕೆ ಇದರಿಂದ ಸಾಧ್ಯವಾಗೋದಿಲ್ಲ. ನಂದನ್ ನಿಲೇಕಿಣಿ ತಂಡ, ಇನ್ಫೋಸಿಸ್ ತಂಡ, ಇ ಗವರ್ನೆನ್ಸ್ ತಂಡ ಇದಕ್ಕೆ ಸಹಕರಿಸಿದೆ. ಟೆಕ್ ತಜ್ಞರಾದ ನಂದನ್ ನಿಲೇಕಿಣಿ ಸೇರಿ ಹಲವರನ್ನು ಸಂಪರ್ಕಸಿದ್ದೆವು. ಅವರು ಈ ಸ್ಟಾಪ್ಟ್ ವೇರ್ ಸುಧಾರಣೆ ಕುರಿತು ಸಹಾಯ ಮಾಡಿದ್ದಾರೆ. ನೂರು ಗಂಟೆ ಒಳಗಡೆ ಬೆಡ್ ಬುಕ್ಕಿಂಗ್ ಅಂಶಗಳ ಲೂಪ್‍ಹೋಲ್ಸ್ ತೆಗೆದುಹಾಕೋದಾಗಿ ಹೇಳಿದ್ದೆವು. ಇದೀಗ ಬೆಡ್ ಬುಕ್ಕಿಂಗ್ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯಾಗಿದೆ ಎಂದರು.

  1. ಬೆಡ್ ಬುಕ್ಕಿಂಗ್ ಮಾಡುವ ವ್ಯಕ್ತಿ ಅಥವಾ ಅಧಿಕಾರಿ ಯಾರು ಅನ್ನೋ ಮಾಹಿತಿ ಸೇರಿಸಲಾಗಿದೆ. ಅವ್ಯವಹಾರವಾದಾಗ ಯಾರು ಇದರಲ್ಲಿ ಶಾಮೀಲಾಗಿದ್ದಾರೆ ಅಂತ ಗೊತ್ತಾಗಲಿದೆ.
  2. ಬೆಡ್ ಬುಕ್ ಆದ ತಕ್ಷಣ ಸೋಂಕಿತರ ಮೊಬೈಲ್‍ಗೆ ಮೆಸೇಜ್ ಬರಲಿದೆ. ಹಾಗೇ ನೋಡೆಲ್ ಆಫೀಸರ್ ಫೋನ್‍ಗೂ ಮೆಸೇಜ್ ಹೋಗಲಿದೆ. ಮೊದಲು ಹೋಮ್ ಐಸೋಲೇಶನ್ ನಲ್ಲಿರೋ ವ್ಯಕ್ತಿಗೆ ಬೆಡ್ ಬುಕ್ ಆಗಿರೋ ಮಾಹಿತಿ ಸಿಗುತ್ತಿರಲಿಲ್ಲ.
  3. ಯಾರಿಗೆಲ್ಲ ಬೆಡ್ ಬೇಕೋ ಅವರು ಬುಕ್ ಮಾಡಿದರೆ ಅವರೆಲ್ಲರ ಬಿಯು ನಂಬರ್ ಕ್ಯೂ ಲಿಸ್ಟ್ ನಲ್ಲಿ ತೋರಿಸಲಿದೆ. ಆದ್ಯತೆಯ ಆಧಾರದಲ್ಲಿ ಬೆಡ್ ಹಂಚಿಕೆ ಆಗುತ್ತೆ.
  4. ಜೆನರಲ್ ಬೆಡ್ನಲ್ಲಿರೋ ವ್ಯಕ್ತಿಗೆ ಐಸಿಯು ಬೇಕಾದ್ರೆ ಅವರು ಬುಕ್ ಮಾಡಿದ್ರೆ ಅವರ ಬಿಯು ನಂಬರ್ ಐಸಿಯು ಲಿಸ್ಟ್‍ಗೆ ಸೇರಲಿದೆ.
  5. ಡಿಸ್ಚಾರ್ಜ್ ಆಗಿರೋದು ಕೆಲವರು ತೋರಿಸುತ್ತಿಲ್ಲ. ಡಿಸ್ಚಾರ್ಜ್ ಆಗುವ ಹೊತ್ತಲ್ಲೇ ಬಿಬಿಎಂಪಿ ವೆಬ್‍ಸೈಟ್‍ನಲ್ಲಿ ತೋರಿಸೋ ವ್ಯವಸ್ಥೆ ಆಗಲಿದೆ.

ಬಹುದೊಡ್ಡ ಬೆಡ್ ದಂಧೆಯನ್ನು ನಾವು ಹೊರಹಾಕಿದ್ದೆವು. ಆದರೆ ಇದನ್ನೂ ದಿಕ್ಕು ತಪ್ಪಿಸೊ ಸಾಕಷ್ಟು ಷಡ್ಯಂತ್ರ ನಡೆಯುತ್ತಿದೆ. ಕಾಂಗ್ರೆಸ್ ಬಹುದೊಡ್ಡ ಸುಳ್ಳನ್ನು ಹೇಳುತ್ತಿದೆ. 17 ಜನರನ್ನು ನಾವು ಟಾರ್ಗೆಟ್ ಮಾಡಿ ಕೆಲಸದಿಂದ ತೆಗೆದುಹಾಕಿದ್ದೇವೆ ಅಂತಿದ್ದಾರೆ. ಆದರೆ ನಾವು ಅಕ್ರಮವನ್ನು ಬಯಲಿಗೆ ಎಳೆಯುವ ಎರಡು ದಿನ ಮೊದಲೇ ಕಂಪನಿ ಮತ್ತು ಬಿಬಿಎಂಪಿ ತೆಗೆದು ಹಾಕಲು ಶಾರ್ಟ್ ಲಿಸ್ಟ್ ಮಾಡಿತ್ತು. ನಾವು ವಾರ್ ರೂಂಗೆ ಹೋದಾಗ ಅಧಿಕಾರಿ ಇಬ್ಬರು 17 ಜನರ ಹೆಸರು ಕೊಟ್ಟರು. ಅವರನ್ನು ತೆಗೆದು ಹಾಕುತ್ತಿರೊದಾಗಿ ಹೇಳಿದ್ರು. ಹೇಗೆ ಅವರನ್ನ ಕೆಲಸಕ್ಕೆ ಸೇರಿಸಿಕೊಂಡಿದ್ದಿರಿ ಎಂದು ಪ್ರಶ್ನೆ ಮಾಡಿದ್ದೇನೆ.. ಇದು ತಪ್ಪು. ಮುಂದಿನ ನೂರು ಗಂಟೆಯಲ್ಲಿ ಒಳಗೆ ಮಹತ್ತರ ಬದಲಾವಣೆ ಆಗಲಿದೆ. ಬೆಡ್ ಬುಕ್ಕಿಂಗ್‍ನಲ್ಲಿ ಯಾರೇ ಭಾಗಿಯಾಗಿದ್ರೂ ಶಿಕ್ಷೆಯಾಗಲಿ. ಅದು ಸತೀಶ್ ರೆಡ್ಡಿಯಾಗಲಿ, ರಿಜ್ವಾನ್ ಹರ್ಷದ್ ಆಗಲಿ ಕೃಷ್ಣ ಬೈರೇಗೌಡ ಅವರೇ ಆಗಲಿ, ತನಿಖೆಯಾಗಲಿ.. ಅದು ಯಾರಾದ್ರೂ ಶಿಕ್ಷೆಯಾಗಲಿ ಎಂದರು.

The post ಬೆಡ್ ಬುಕ್ಕಿಂಗ್ ದಂಧೆ ತಪ್ಪಿಸಲು ಸಾಫ್ಟ್​ವೇರ್​ನಲ್ಲಿ ಮಹತ್ವದ ಬದಲಾವಣೆ.. ಇಲ್ಲಿದೆ ಡೀಟೇಲ್ಸ್ appeared first on News First Kannada.

Source: newsfirstlive.com

Source link