ಬೆಂಗಳೂರು: ಬೆಡ್ ಬ್ಲಾಕಿಂಗ್ ದಂಧೆ ಪ್ರಕರಣ ಸಂಬಂಧ ಈವರೆಗೆ ಹತ್ತು ಜನರನ್ನ ಅರೆಸ್ಟ್ ಮಾಡಲಾಗಿತ್ತು. ನಿನ್ನೆ ಮತ್ತೆ ಇಬ್ಬರನ್ನ ಅರೆಸ್ಟ್ ಮಾಡಲಾಗಿದೆ ಅಂತ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಹೇಳಿದ್ದಾರೆ.

ಇಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಂದೀಪ್ ಪಾಟೀಲ್​​, ಈ ಪ್ರಕರಣ ಸಂಬಂಧ ಒಟ್ಟು ಹನ್ನೆರಡು ಜನರನ್ನ ಅರೆಸ್ಟ್ ಮಾಡಿದ್ದೀವಿ. ವಾರ್ ರೂಮ್​ನಲ್ಲಿ ಕೆಲಸ ಮಾಡ್ತಿದ್ದ ವರುಣ್ ಹಾಗೂ ಆತನ ಸ್ನೇಹಿತ ಯಶವಂತ್​​ನನ್ನ ನಿನ್ನೆ ಬಂಧಿಸಿದ್ದೇವೆ ಎಂದರು.

ಸಂದೀಪ್ ಪಾಟೀಲ್

ಹೇಗೆ ಡೀಲ್ ನಡೆಸುತ್ತಿದ್ರು?
ಆರೋಪಿ ವರುಣ್ ವಾರ್ ರೂಮ್​ನಿಂದ ರೋಗಿಗಳ ಡೀಟೇಲ್ಸ್ ಮತ್ತು ನಂಬರನ್ನ ತನ್ನ ಸ್ನೇಹಿತ ಯಶವಂತ್​ಗೆ ಕಳಿಸ್ತಿದ್ದ. ನಂತರ ಯಶವಂತ್ ಸೋಂಕಿತರಿಗೆ ಕಾಲ್ ಮಾಡಿ, ಅವರ ಜೊತೆ ಬೆಡ್ ವ್ಯವಸ್ಥೆ ಬಗ್ಗೆ ಮಾತನಾಡಿ ಹಣಕ್ಕೆ ಡಿಮ್ಯಾಂಡ್ ಮಾಡ್ತಿದ್ದ. ಅಕೌಂಟ್ ಡೀಟೇಲ್ಸ್ ಕೊಟ್ಟು ಹಣ ಹಾಕಿಸಿಕೊಳ್ತಿದ್ರು. ಈ ಬಗ್ಗೆ ಮಾಹಿತಿ ಬಂದ ಹಿನ್ನೆಲೆ ತನಿಖೆ ನಡೆಸಿ ಆರೋಪಿಗಳಿಬ್ಬರನ್ನೂ ಅರೆಸ್ಟ್ ಮಾಡಿ ವಿಚಾರಣೆ ನಡೆಸ್ತಿದ್ದೀವಿ ಎಂದು ಸಂದೀಪ್ ಪಾಟೀಲ್ ತಿಳಿಸಿದ್ರು.

 

 

The post ಬೆಡ್ ಬ್ಲಾಕಿಂಗ್ ಪ್ರಕರಣದಲ್ಲಿ ಮತ್ತಿಬ್ಬರು ಅರೆಸ್ಟ್​, ಇವರು ಹೇಗೆ ಡೀಲ್ ಮಾಡ್ತಿದ್ರು ಗೊತ್ತಾ? appeared first on News First Kannada.

Source: newsfirstlive.com

Source link