ಬೆಂಗಳೂರು:  ಬೆಡ್ ಬ್ಲಾಕಿಂಗ್ ಹಗರಣದ ಸಂಬಂಧ ಸಿಸಿಬಿ ತನಿಖೆ ಚುರುಕುಗೊಳಿಸಿದೆ. ಇಂದು ಈ ಕೇಸ್​​ಗೆ ಸಂಬಂಧಿಸಿದಂತೆ ಒಟ್ಟು ಎಂಟು ಜನರನ್ನು ವಶಕ್ಕೆ ಪಡೆದಿದೆ.

ನಿನ್ನೆಯಷ್ಟೇ ಇಬ್ಬರನ್ನ ಜಯನಗರ ಪೊಲೀಸರು ಬಂಧಿಸಿದ್ದರು. ಅದರ ಬೆನ್ನಲ್ಲೇ ಇಂದು ಸಿಸಿಬಿ ಅಧಿಕಾರಿಗಳು ಇಬ್ಬರು ವೈದ್ಯರು ಸೇರಿ ಎಂಟು ಜನರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ‘ಬೆಡ್ ಬುಕ್ಕಿಂಗ್ ಹಗರಣ ಆರೋಪಿ ಕೈ ಕಾರ್ಯಕರ್ತೆ, ದಂಧೆ ಬಗ್ಗೆ ಸಿದ್ದರಾಮಯ್ಯ ಯಾಕೆ ತುಟಿ ಬಿಚ್ಚಿಲ್ಲ?’ -ಬಿಜೆಪಿ ಪ್ರಶ್ನೆ

ಏನಿದು ಹಗರಣ?
ರಾಜ್ಯದಲ್ಲಿ ಕೊರೊನಾ ಮಹಾಮಾರಿ ತಾಂಡವವಾಡ್ತಿದೆ. ಬೆಡ್​ ಇಲ್ಲ ಆಕ್ಸಿಜನ್ ಇಲ್ಲ ಅಂತ ಜನರು ಪರದಾಡ್ತಿದ್ದಾರೆ. ಈ ಮಧ್ಯೆ ಬೆಡ್​ಗಳನ್ನ ತಮಗೆ ಬೇಕಾದವರಿಗೆ ಬ್ಲಾಕ್​ ಮಾಡಿಟ್ಟುಕೊಳ್ಳುತ್ತಿದ್ದ ಬ್ರಹ್ಮಾಂಡ ಹಗರಣ ನಿನ್ನೆ ಬಯಲಾಗಿದೆ. ಸಂಸದ ತೇಜಸ್ವಿ ಸೂರ್ಯ, ಶಾಸಕ ಸತೀಶ್​ರೆಡ್ಡಿ ಹಾಗೂ ತಂಡ  ಈ ಹಗರಣವನ್ನ ಬಹಿರಂಗಪಡಿಸಿದ್ರು.

ಬಿಬಿಎಂಪಿ ಅಧಿಕಾರಿಗಳು ತಮಗೆ ಬೇಕಾದವರಿಗೆ, ಆಪ್ತರಿಗೆ ಹಾಗೂ ಪ್ರಭಾವಿಗಳಿಗಾಗಿ ಯಾರ್ಯಾರದ್ದೋ ಹೆಸರಿನಲ್ಲಿ 4,000ಕ್ಕೂ ಹೆಚ್ಚು ಬೆಡ್​​ಗಳನ್ನು ಬುಕ್​ ಮಾಡಿದ್ದಾರೆ ಎನ್ನಲಾಗಿದೆ. ನಿತ್ಯ ಹತ್ತಾರು ಸಾವಿರ ಸೋಂಕಿತರು ಒಂದೆಡೆ ಬೆಡ್​​ಗಳಿಲ್ಲದೇ ಬಡಿದಾಡುತ್ತಿದ್ದರೆ ಇತ್ತ ಬಿಬಿಎಂಪಿ ಅಧಿಕಾರಿಗಳು.. ತಮಗೆ ಬೇಕಾದವರಿಗೆ ಲಕ್ಷ ಲಕ್ಷ ದುಡ್ಡು ಕೊಟ್ಟವರಿಗೆ ಐಸಿಯು, ವೆಂಟಿಲೇಟರ್, ಆಕ್ಸಿಜನ್ ಬೆಡ್​ಗಳನ್ನ ಬ್ಲಾಕ್ ಮಾಡಿಕೊಳ್ತಿದ್ದಾರೆ ಎಂದು ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ. ಈ ಬಗ್ಗೆ ಜಯನಗರ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು ನಿನ್ನೆ ಇಬ್ಬರನ್ನ  ಬಂಧಿಸಿದ್ದಾರೆ. ಸದ್ಯ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್​ಪಂತ್ ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನ ಸಿಸಿಬಿಗೆ ವರ್ಗಾಯಿಸಿದ್ದಾರೆ.

ಇದನ್ನೂ ಓದಿ: ‘ಪಾಲು ಹಂಚಿಕೆ ಜಗಳದಿಂದ ಇಂಥ ಕಿಡಿ ಅಷ್ಟೆ ಅಲ್ವೇ ತೇಜಸ್ವಿ ಸೂರ್ಯ?’ -ಸಿದ್ದರಾಮಯ್ಯ ವಾಗ್ದಾಳಿ 

ಇದನ್ನೂ ಓದಿ: ಜನ ಸಾಯ್ತಿದ್ರೂ ಬೆಡ್​ಗಳ ಬ್ಲಾಕಿಂಗ್; ಬ್ರಹ್ಮಾಂಡ ದಂಧೆ ಬಯಲಿಗೆಳೆದ ತೇಜಸ್ವಿ ಸೂರ್ಯ, ಸತೀಶ್ ರೆಡ್ಡಿ ಟೀಂ

The post ಬೆಡ್ ಬ್ಲಾಕಿಂಗ್ ಪ್ರಕರಣ: 8 ಜನರನ್ನು ವಶಕ್ಕೆ ಪಡೆದ ಸಿಸಿಬಿ appeared first on News First Kannada.

Source: newsfirstlive.com

Source link