ಬೆಂಗಳೂರು: ಬೆಡ್​ ಬ್ಲಾಕಿಂಗ್ ಹಗರಣದ ವಿಚಾರವಾಗಿ ಸಂಸದ ತೇಜಸ್ವಿ ಸೂರ್ಯ ಇಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಅವರನ್ನ ಭೇಟಿಯಾಗಿ ಮಾಹಿತಿ ನೀಡಿದ್ದಾರೆ. ನಂತರ ಮಾಧ್ಯಗಳಿಗೆ ಹೇಳಿಕೆ ನೀಡಿದ ಅವರು.. ಬೆಡ್ ಹಗರಣ ಕುರಿತು ನಗರ ಪೊಲೀಸರಿಗೆ ಮಾಹಿತಿ ನೀಡಿದ್ದೇನೆ. ಯಾರೆಲ್ಲಾ ಇದ್ರಲ್ಲಿ‌ ಭಾಗಿಯಾಗಿದ್ದಾರೆ ಅಂತ ಮಾಹಿತಿ ಕೊಡಲಾಗಿದೆ..ರಾತ್ರಿಯಿಂದಲೂ ಸಾಕಷ್ಟು ಮಾಹಿತಿಯನ್ನು ಪೊಲೀಸರು ಕಲೆಹಾಕಿದ್ದಾರೆ ಎಂದಿದ್ದಾರೆ.

ನಾನು ಕೊಟ್ಟ ಮಾಹಿತಿಯಲ್ಲಿ ಎಲ್ಲಾ ಡಾಕ್ಯುಮೆಂಟರಿ ಎವಿಡೆನ್ಸ್ ಇದೆ. ಹಣ ಪಡೆದವರು ಎಲ್ಲಾ ಗೂಗಲ್ ಪೇ ಮೂಲಕ ಹಣ ಪಡೆದಿದ್ದಾರೆ. ಮುಖ್ಯಮಂತ್ರಿ ಸಹ ಇದ್ರಲ್ಲಿ ಯಾರೇ ಭಾಗಿಯಾಗಿದ್ರೂ ಬಂಧಿಸುವಂತೆ ಹೇಳಿದ್ದಾರೆ.

ನನಗೆ ಬಂದಿರೋ ಮಾಹಿತಿ ಎಲ್ಲವನ್ನೂ ನಗರ ಪೊಲೀಸ್ ಆಯುಕ್ತರಿಗೆ ನೀಡಿದ್ದೇನೆ. ಫೋನ್ ಸಂಭಾಷಣೆ ಸಹ ಸಾಕಷ್ಟು ಸಿಕ್ಕಿದ್ದು ಅದನ್ನೆಲ್ಲ ಪೊಲೀಸರು‌ ಪರಿಶೀಲನೆ ಮಾಡ್ತಾ ಇದ್ದಾರೆ. ಈ ಪ್ರಕರಣವನ್ನು ರಾಜಕೀಯ ಮಾಡ್ತಾ ಇಲ್ಲ.. ಸಮಸ್ಯೆಗಳ‌ ಜೊತೆಗೆ ಪರಿಹಾರ ಸಹ ಕೇಳುವಂತೆ ಸಿಎಂ ಹೇಳಿದ್ರು. ನಂದನ್‌ ನಿಲೇಕೇಣಿಗೂ ಕಾಲ್ ಮಾಡಿ ಮಾತನಾಡಿದ್ದೇನೆ. ದಿ ಬೆಸ್ಟ್ ಸಾಫ್ಟ್‌ವೇರ್ ಇಂಜನಿಯರ್ ಇರೋ ಟೀಂ‌‌ ಕೊಡೋದಾಗಿ ಹೇಳಿದ್ದಾರೆ. ಸಾಫ್ಟ್ ವೇರ್​ ನಲ್ಲಿ ಯಾವುದೇ ಲೋಪದೋಷ ಇಲ್ಲದ ಹಾಗೆ ಮಾಡಲಾಗುವುದು ಎಂದಿದ್ದಾರೆ.

The post ಬೆಡ್ ಬ್ಲಾಕಿಂಗ್ ಹಗರಣ: ಎಲ್ಲ ಮಾಹಿತಿಯನ್ನೂ ಕಮಲ್​ಪಂತ್ ಅವ್ರಿಗೆ ನೀಡಿದ್ದೇನೆ- ತೇಜಸ್ವಿ ಸೂರ್ಯ appeared first on News First Kannada.

Source: newsfirstlive.com

Source link