ರಾಜಸ್ಥಾನ: ಜೈಪುರದ ಕೋವಿಡ್-19 ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾ ರೋಗಿಗೆ ಐಸಿಯುವಿನಲ್ಲಿ ಬೆಡ್ ವ್ಯವಸ್ಥೆ ಮಾಡುವುದಕ್ಕಾಗಿ ಲಂಚ ಪಡೆದ ಪುರುಷ ನರ್ಸ್ ನನ್ನು ರಾಜಸ್ಥಾನದ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದೆ.

ಆರೋಪಿಯನ್ನು ಅಶೋಕ್ ಕುಮಾರ್ ಗುರ್ಜರ್ ಎಂದು ಗುರುತಿಸಲಾಗಿದ್ದು, ಈತ ಜೈಪುರದ ಮೆಟ್ರೋ ಮಾಸ್ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾನೆ. ಕೋವಿಡ್-19 ಸೋಂಕಿತನಿಗೆ ರಾಜಸ್ಥಾನ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ(ಆರ್‍ಯುಎಚ್‍ಎಸ್)ನಲ್ಲಿ ಐಸಿಯು ಬೆಡ್ ಮತ್ತು ಇತರ ಸೌಲಭ್ಯಗಳ ವ್ಯವಸ್ಥೆಗೊಳಿಸುವುದಕ್ಕಾಗಿ ರೋಗಿಯ ಬಳಿ 1.30 ಕ್ಷ ನೀಡವಂತೆ ಬೇಡಿಕೆ ಇಟ್ಟಿದ್ದಾನೆ.

ಆರೋಪಿ ಈಗಾಗಲೇ ರೋಗಿಯ ಬಳಿ 95, 000 ರೂ. ತೆಗೆದುಕೊಂಡಿದ್ದು, ಉಳಿದ 23,000 ರೂ ಸ್ವೀಕರಿಸುತ್ತಿದ್ದ ವೇಳೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಎಸಿಬಿ ಪೊಲೀಸ್ ಅಧಿಕಾರಿ ಬಿ.ಎಲ್. ಸೋನಿ ತಿಳಿಸಿದ್ದಾರೆ. ಇದೀಗ ಆರೋಪಿ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಅವನ ನಿವಾಸದಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

The post ಬೆಡ್ ವ್ಯವಸ್ಥೆಗೆ 1.30 ಲಕ್ಷ ಲಂಚ ಪಡೆದವ ಅರೆಸ್ಟ್ appeared first on Public TV.

Source: publictv.in

Source link