ನವದೆಹಲಿ: ದೆಹಲಿಯ ಸರಿತಾ ವಿಹಾರದ ಅಪೋಲೋ ಆಸ್ಪತ್ರೆಯಲ್ಲಿ ಬೆಡ್ ಸಿಗದ ಕಾರಣ ಕೋವಿಡ್-19 ರೋಗಿ ಸಾವನ್ನಪ್ಪಿದ್ದಾರೆ. ಇದರಿಂದ ಆಸ್ಪತ್ರೆಯ ವೈದ್ಯರು ಹಾಗೂ ನರ್ಸ್ ವಿರುದ್ಧ ಮೃತರ ಕುಟುಂಬಸ್ಥರು ಹಲ್ಲೆ ನಡೆಸಿದ್ದಾರೆ.

ಘಟನೆಗೆ ಸಂಬಂಧಿಸಿದ ಕೆಲವು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಲದ ಮೇಲೆ ರಕ್ತದ ಕಲೆಗಳು, ಕಿಟಕಿ, ಬಾಗಿಲುಗಳು ಸೇರಿದಂತೆ ಆಸ್ಪತ್ರೆಯ ಕೆಲವು ವಸ್ತುಗಳಿಗೆ ಹಾನಿಯಾಗಿದೆ.

ಇಂದು ಬೆಳಗ್ಗೆ 62 ವರ್ಷದ ಮಹಿಳೆಗೆ ಆಸ್ಪತ್ರೆಯಲ್ಲಿ ಐಸಿಯು ಬೆಡ್ ಸಿಗದ ಕಾರಣ ಮೃತಪಟ್ಟಿದ್ದರು.ಹೀಗಾಗಿ ಆಸ್ಪತ್ರೆಯ ಆಡಳಿತ ಮಂಡಳಿ ಮೇಲೆ ಆಕ್ರೋಶಗೊಂಡ ಮೃತ ಮಹಿಳೆ ಸಂಬಂಧಿಕರು ದೊಣ್ಣೆ ಹಾಗೂ ಮಾರಕಾಸ್ತ್ರಗಳಿಂದ ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಆಸ್ಪತ್ರೆಯ ಆವರಣವನ್ನು ಧ್ವಂಸಗೊಳಿಸಿದ್ದಾರೆ.

ಘಟನೆ ವೇಳೆ ವೈದ್ಯರು, ಆಸ್ಪತ್ರೆ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿ ಸೇರಿದಂತೆ ಸುಮಾರು 8 ಮಂದಿ ಗಾಯಗೊಂಡಿದ್ದಾರೆ. ಕಾಯುವ ಕೊಠಡಿ ವೇಳೆ ಕುರ್ಚಿಗಳು ಕೆಳಗೆ ಬಿದ್ದಿರುವುದು, ಗೋಡೆಗಳು ನುಚ್ಚು ನೂರಾಗಿರುವುದು ಹಾಗೂ ನೆಲದ ಮೇಲೆ ರಕ್ತದ ಕಲೆಗಳಾಗಿರುವುದನ್ನು ಕಾಣಬಹುದಾಗಿದೆ.

The post ಬೆಡ್ ಸಿಗದೇ ಕೋವಿಡ್ ರೋಗಿ ಸಾವು – ವೈದ್ಯರು, ಸಿಬ್ಬಂದಿ ಮೇಲೆ ಸಂಬಂಧಿಕರಿಂದ ಹಲ್ಲೆ appeared first on Public TV.

Source: publictv.in

Source link