ಚಿಕ್ಕಬಳ್ಳಾಪುರ: ಕಳೆದ ರಾತ್ರಿಯಿಂದ ನಾಪತ್ತೆಯಾಗಿದ್ದ ಸರ್ಕಾರಿ ಶಾಲಾ ಶಿಕ್ಷಕನೋರ್ವವನ್ನು ಬಲವಾದ ಆಯುಧದಿಂದ ಹಲ್ಲೆಮಾಡಿ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರ ಹೊರವಲಯದ ಹಿರೇಬಿದನೂರಿನಲ್ಲಿ ನಡೆದಿದೆ.

ವಿಶ್ವನಾಥ್(42) ಕೊಲೆಯಾದ ಶಿಕ್ಷಕ. ವಿಶ್ವನಾಥ್ ಅವರು ಗೌರಿಬಿದನೂರು ನಗರದ ಸದಾಶಿವ ಬಡಾವಣೆಯಲ್ಲಿ ವಾಸವಾಗಿದ್ದು, ಮೂಲತಃ ಬೊಮ್ಮಸಂದ್ರ ಗ್ರಾಮದ ಭೂಮೇನಹಳ್ಳಿ ಸರ್ಕಾರಿ ಶಾಲಾ ಶಿಕ್ಷಕರಾಗಿದ್ದರು.

ಕಳೆದ ರಾತ್ರಿ ಮನೆಯಿಂದ ಹೊರಹೋಗಿದ್ದ ವಿಶ್ವನಾಥ್ ಮತ್ತೆ ವಾಪಸ್ ಬಂದಿರಲಿಲ್ಲ. ಹೀಗಾಗಿ ಬೆಳಗ್ಗೆ ಪತ್ನಿ ಪೊಲೀಸರ ಮೊರೆ ಹೋಗಿದ್ದಾರೆ. ಪೊಲೀಸರು ಹುಟುಕಾಟ ಆರಂಭಿಸಬೇಕು ಎನ್ನುವಷ್ಟರಲ್ಲಿ ಹಿರೇಬಿದನೂರು ಬೈಪಾಸ್ ರಸ್ತೆಯ ನರ್ಸಿಂಗ್ ಕಾಲೇಜು ಎದುರು ನಿರ್ಜನ ಪ್ರದೇಶದಲ್ಲಿ ಅಪರಿಚಿತ ಶವ ಕಂಡ ಸ್ಥಳೀಯರು ಪೊಲೀಸ್ ಠಾಣೆಗೆ ಕರೆ ಮಾಡಿ ತಿಳಿಸಿದ್ದಾರೆ. ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದಾಗ ಮೃತದೇಹ ವಿಶ್ವನಾಥ್ ಅವದ್ದಾಗಿದೆ. ಇದನ್ನೂ ಓದಿ: ಪತ್ನಿ ಕಣ್ಣೇದುರೇ ಪತಿ ಸಾವು

ವಿಶ್ವನಾಥ್ ಬೈಕ್ ಸಹ ಅಲ್ಲೇ ಬಿದ್ದಿದ್ದು, ಮತ್ತೊಂದೆಡೆ ಚಪ್ಪಲಿ, ಮಾಸ್ಕ್ ಇದೆ. ವಿಶ್ವನಾಥ್ ಸಂಪೂರ್ಣ ಬೆತ್ತಲು ಮಾಡಿ ಪ್ಯಾಂಟ್‍ನಿಂದಲೇ ಕಾಲುಗಳನ್ನು ಕಟ್ಟಿ ಹಾಕಲಾಗಿದೆ. ಅಂಗಾತ ಮಲಗಿರುವ ಹಾಗೆ ಮೃತದೇಹ ಪತ್ತೆಯಾಗಿದ್ದು, ಬಲವಾದ ಆಯುಧದಿಂದ ಹೊಡೆದು ಹಲ್ಲೆ ಮಾಡಲಾಗಿದೆ.

ಈ ಸಂಬಂಧ ಗೌರಿಬಿದನೂರು ನಗರ ಪೊಲೀಸರು, ಎಸ್‍ಪಿ ಮಿಥುನ್ ಕುಮಾರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮೂರ್ನಾಲ್ಕು ಅನುಮಾನಗಳಿದ್ದು, ಕೆಲ ಸುಳಿವು ದೊರಕಿದೆ. ತನಿಖೆ ನಡೆಸಿ ಕೊಲೆಗಾರರನ್ನು ಪತ್ತೆ ಮಾಡುವುದಾಗಿ ತಿಳಿಸಿದ್ದಾರೆ. ಗೌರಿಬಿದನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

The post ಬೆತ್ತಲಾಗಿಸಿ ಹಲ್ಲೆಗೈದು ಶಾಲಾ ಶಿಕ್ಷಕನ ಕೊಲೆ appeared first on Public TV.

Source: publictv.in

Source link