ಬೆಂಗಳೂರು: ಜೈಲಿನಲ್ಲಿರುವ ಯುವರಾಜ್​ ಸ್ವಾಮಿಯಿಂದ ನನಗೆ ಕರೆ ಬಂದಿತ್ತು ಎಂದು ನಿನ್ನೆ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಹೇಳಿಕೆ ನೀಡಿದ್ದಾರೆ. ಈ ಹಿನ್ನೆಲೆ ಇದೀಗ ಜೈಲು ಸಿಬ್ಬಂದಿಗೆ ಭಯ ಶುರುವಾಗಿದೆಯಂತೆ.

ಬೆಲ್ಲದ್ ಹೇಳಿಕೆ ಆಧಾರದ ಮೇಲೆ ತನಿಖೆ ನಡೆಸುವ ಸಾಧ್ಯತೆ ಇದ್ದು ಇದರಿಂದ ಜೈಲು ಸಿಬ್ಬಂದಿಗೆ ಟೆನ್ಷನ್ ಶುರುವಾಗಿದೆಯಂತೆ. ಈ ಹಿಂದೆ ಜೈಲಿನಲ್ಲಿ ನಡೆಯುತ್ತಿದ್ದ ಅಕ್ರಮಗಳನ್ನ ಐಪಿಎಸ್ ಅಧಿಕಾರಿ ರೂಪಾ ಬಯಲಿಗೆಳೆದಿದ್ದರು. ಈ ವೇಳೆ ಮೊಬೈಲ್ ಫೋನ್ ಬಳಕೆ, ಗಾಂಜಾ ಸರಬರಾಜು ಸೇರಿ ಇನ್ನಿತರ ಅಕ್ರಮಗಳ ಬಗ್ಗೆ ರೂಪ ಧ್ವನಿ ಎತ್ತಿದ್ದರು.

ಸದ್ಯ ಪರಪ್ಪನ ಅಗ್ರಹಾರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂಬುದಕ್ಕೆ ಬೆಲ್ಲದ್ ಆರೋಪವೇ ಸಾಕ್ಷಿಯಾಗಿದೆ ಎನ್ನಲಾಗಿದೆ.
ಯುವರಾಜ್​ ಸ್ವಾಮಿ ಬಹುಕೋಟಿ ವಂಚಕ ಎನ್ನಲಾಗಿದ್ದು ಆತನಿಂದ ಕರೆ ಬಂದಿತ್ತು ಎಂದು ಬೆಲ್ಲದ್ ಹೇಳಿದ್ದಾರೆ. ಆದ್ರೆ ಪರಪ್ಪನ ಅಗ್ರಹಾರದಲ್ಲಿ ಅಧಿಕೃತವಾಗಿ ಮೊಬೈಲ್ ಬಳಕೆ ನಿಷೇಧಿಸಲಾಗಿದೆ. ಹೀಗಿದ್ರೂ ಯುವರಾಜ್​ಗೆ ಹೇಗೆ ಮೊಬೈಲ್ ಸಿಕ್ತು.? ಎಂಬ ಅನುಮಾನ ಶುರುವಾಗಿದೆ.

ಬೆಲ್ಲದ್ ಏನಾದರೂ ಅಧಿಕೃತ ದೂರು ನೀಡಿದರೆ ಜೈಲು ಅಧಿಕಾರಿ, ಸಿಬ್ಬಂದಿಯ ತಲೆದಂಡ ಫಿಕ್ಸ್ ಎನ್ನಲಾಗಿದೆ. ಮೊದಲು ಅನ್ ಅಫಿಷಿಯಲ್ ಆಗಿ ಬೇಸಿಕ್ ತನಿಖೆ ನಡೆಸಲಿರುವ ಪೊಲೀಸರು.. ಬೆಲ್ಲದ್ ಮೊಬೈಲ್​ಗೆ ಕರೆ ಮಾಡಿದ್ದು ಯುವರಾಜನೇನಾ ಎಂಬುದರ ಬಗ್ಗೆ ತನಿಖೆ ನಡೆಸಲಿದ್ದಾರಂತೆ.. ಆರೋಪ ದೃಢವಾದರೆ ಆತನಿಗೆ ಮೊಬೈಲ್ ಕೊಟ್ಟಿದ್ದು ಯಾರು..? ಯುವರಾಜ್ ಮೊಬೈಲ್ ಮುಖಾಂತರ ಇನ್ನು ಯಾರು ಯಾರಿಗೆ ಕರೆ ಮಾಡಿದ್ದಾನೆ..? ಈತನಿಗೆ ಮೊಬೈಲ್ ಕೊಟ್ಟಿದ್ದು ಯಾರು ಮತ್ತು ಹೇಗೆ ಎಲ್ಲದ್ರ ಕುರಿತು ತನಿಖೆ ನಡೆಸುವ ಸಾಧ್ಯತೆ ಇದೆ.

The post ಬೆಲ್ಲದ್​ಗೆ ಯುವರಾಜನಿಂದ ಫೋನ್​ ಕಾಲ್: ಸೆಂಟ್ರಲ್ ಜೈಲ್ ಸಿಬ್ಬಂದಿಗೆ ಶುರುವಾಯ್ತು ಟೆನ್ಶನ್ appeared first on News First Kannada.

Source: newsfirstlive.com

Source link