ಬೆಳಕಿಗೆ ಬಂತು ಮತ್ತೊಂದು ಚೈನ್​ಲಿಂಕ್ ಕೇಸ್: ಆನ್​ಲೈನ್​ನಲ್ಲೇ ನಡೆಯಿತು ಕೋಟಿ ಕೋಟಿ ವಂಚನೆ

ಬೆಳಕಿಗೆ ಬಂತು ಮತ್ತೊಂದು ಚೈನ್​ಲಿಂಕ್ ಕೇಸ್: ಆನ್​ಲೈನ್​ನಲ್ಲೇ ನಡೆಯಿತು ಕೋಟಿ ಕೋಟಿ ವಂಚನೆ

ಬೆಂಗಳೂರು: ನಗರದಲ್ಲಿ ಮತ್ತೊಂದು ಚೈನ್ ಲಿಂಕ್ ದೋಖಾ ಪ್ರಕರಣವೊಂದು ಪತ್ತೆಯಾಗಿದೆ. ಶೇಕಡಾ 25ರಷ್ಟು ಲಾಭದ ಆಸೆ ತೋರಿಸಿ ಕೋಟಿ ಕೋಟಿಯಷ್ಟು ವಂಚನೆ ಮಾಡಿದ್ದಾರೆ ಎನ್ನಲಾಗಿದೆ.

ಸುಮಾರು ಎರಡು ಸಾವಿರ ಜನರಿಗೆ ಕೋಟ್ಯಾಂತರ ರೂಪಾಯಿ ವಂಚನೆ‌ ಮಾಡಿರೋದು ಬೆಳಕಿಗೆ ಬಂದಿದೆ. ಈ ಬಗ್ಗೆ, ಸೋಷಿಯಲ್ ಮೀಡಿಯಾದಲ್ಲಿ ಕಂಪನಿ ಬಗ್ಗೆ ಪ್ರಚಾರವಾಗಿದೆ. ವಂಚಕರು ಆನ್​ಲೈನ್​ನಲ್ಲೇ ರಿಜಿಸ್ಟರ್, ಆನ್​ ಲೈನ್ನಲ್ಲೇ ಹೂಡಿಕೆ, ಆನ್ಲೈನ್​ನಲ್ಲೇ ಮೀಟಿಂಗ್ ಮಾಡಿಕೊಳ್ತಿದ್ದರಂತೆ. ರಿಜಿಸ್ಟರ್ ಮಾಡ್ಕೊಂಡು ನಂತರ ಹಣ ಹೂಡಿಕೆ ಮಾಡ್ತಿದ್ದ ವ್ಯಕ್ತಿ. ಜೊತೆಗಾರರ ವ್ಯಕ್ತಿಗಳ ಬಳಿ ಹಣ ಹೂಡಿಕೆ ಮಾಡಿಸಿದ್ರೆ ಒಂದು ಪರ್ಸೆಂಟ್ ಲಾಭದ ಆಸೆ ತೋರಿಸಿ, ಹಣ ದೋಚ್ತಾಯಿದ್ರು ಎನ್ನಲಾಗಿದೆ. ಸದ್ಯ ದೋಖಾ ಕಂಪನಿಯ ಕಿಂಗ್ ಪಿನ್ ಡಿಎಸ್ ರಂಗನಾಥ್​ನನ್ನ ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

The post ಬೆಳಕಿಗೆ ಬಂತು ಮತ್ತೊಂದು ಚೈನ್​ಲಿಂಕ್ ಕೇಸ್: ಆನ್​ಲೈನ್​ನಲ್ಲೇ ನಡೆಯಿತು ಕೋಟಿ ಕೋಟಿ ವಂಚನೆ appeared first on News First Kannada.

Source: newsfirstlive.com

Source link