ಬೆಂಗಳೂರು: ಬೆಳಗಾವಿ ಜಿಲ್ಲೆಗೆ 20 ಕೆ.ಎಲ್. ಸಾಮರ್ಥ್ಯದ ಆಕ್ಸಿಜನ್ ‌ಟ್ಯಾಂಕರ್ ಮಂಜೂರು ಮಾಡಲಾಗಿದೆ ಅಂತಾ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು.. ಬೆಳಗಾವಿ ಉಸ್ತುವಾರಿ ವಹಿಸಿಕೊಂಡ ನಂತರ ಆಕ್ಸಿಜನ್ ಪೂರೈಕೆಯನ್ನು 16 ಕೆಎಲ್ ನಿಂದ 24 ಕೆಎಲ್​ಗೆ ಹೆಚ್ಚಳ ಮಾಡಲಾಗಿದೆ. ಈಗಿರುವ 24ಕೆಎಲ್ ಬದಲು 30 ಕೆಎಲ್ ಗಿಂತ ಹೆಚ್ಚಿಸಲು ಮನವಿ ಮಾಡಲಾಗಿದೆ. ಸಚಿವ ಜಗದೀಶ್ ಶೆಟ್ಟರ್ ಭೇಟಿ ಮಾಡಿ ಮನವಿ ಮಾಡಿದ್ದೇನೆ ಎಂದರು.

ಮುಂದಿನ ಒಂದು ವಾರದಲ್ಲಿ ನಮ್ಮ ಬೇಡಿಕೆಗೆ ತಕ್ಕಂತೆ ಆಕ್ಸಿಜನ್ ಹಂಚಿಕೆ ಆಗುವ ವಿಶ್ವಾಸ ಇದೆ. ಆಕ್ಸಿಜನ್ ಹಂಚಿಕೆ ನಂತರ ಆಕ್ಸಿಜನ್ ಬೆಡ್​ಗಳ ಹೆಚ್ಚಳ ಕುರಿತು ತೀರ್ಮಾನ ಮಾಡುತ್ತೇವೆ. ಸಾರ್ವಜನಿಕರು ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನ ಪಾಲಿಸಬೇಕು ಎಂದರು.

The post ಬೆಳಗಾವಿಗೆ 20 ಕೆ.ಎಲ್. ಸಾಮರ್ಥ್ಯದ ಆಕ್ಸಿಜನ್ ‌ಟ್ಯಾಂಕರ್ ಮಂಜೂರು-ಕಾರಜೋಳ appeared first on News First Kannada.

Source: newsfirstlive.com

Source link