ಬೆಳಗಾವಿ: ಜಿಲ್ಲೆಯ ಖೆಳೆಗಾಂವ ಗ್ರಾಮದಲ್ಲಿ ಜವಾರಿ ಆಕಳು ಒಂದು ಮೂರು ಕರುಗಳಿಗೆ ಜನ್ಮ ನೀಡಿದೆ. ಖಿಳೇಗಾಂವ್ ಗ್ರಾಮದ ಕುಮಾರ್ ಸದಾಶಿವ ತಗಲಿ ಎಂಬ ರೈತನಿಗೆ ಸೇರಿದ ಹಸು ಇದಾಗಿದೆ.
ಸಾಮಾನ್ಯವಾಗಿ ಹಸುಗಳು ಒಂದು ಅಥವಾ ಎರಡು ಕರುಗಳಿಗೆ ಜನ್ಮ ನೀಡಿರುವುದನ್ನು ಕೇಳಿರುತ್ತೇವೆ, ನೋಡಿರುತ್ತೇವೆ. ಆದರೆ ಅಥಣಿ ತಾಲ್ಲೂಕಿನಲ್ಲಿ ಒಂದು ಜವಾರಿ (ಕಿಲಾರಿ ಆಕಳು) ಹಸು ಮೂರು ಕರುಗಳಿಗೆ ಜನ್ಮ ನೀಡಿ ಅಚ್ಚರಿ ಮೂಡಿಸಿದೆ.
ಮೂರು ಕರುಗಳು ಮತ್ತು ತಾಯಿ ಆಕಳು ಆರೋಗ್ಯವಾಗಿವೆ. ಕರುಗಳಿಗೆ ಸ್ವಲ್ಪ ಹಾಲಿನ ತೊಂದರೆಯಾಗುತ್ತಿದ್ದು, ಬೇರೆ ಆಕಳು ಹಾಲನ್ನು ಕರುಗಳಿಗೆ ನೀಡುತ್ತೇವೆ ಎಂದು ರೈತ ಕುಮಾರ್ ಹೇಳಿದ್ದಾರೆ. ಮೂರು ಕರುವನ್ನು ನೋಡಲು ಸುತ್ತಮುತ್ತಲಿನ ಗ್ರಾಮಸ್ಥರು ಬರುತ್ತಿದ್ದಾರೆ.