ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲೂಕಿನಾದ್ಯಂತ ಧಾರಾಕಾರ ಮಳೆ ಮುಂದುವರೆದಿದ್ದು ಕಣಕುಂಬಿ, ಅಮಗಾಂವನಲ್ಲಿ 18 ಸೆಂ.ಮೀ.ಮಳೆ ದಾಖಲಾಗಿದೆ. ಮಳೆಯಿಂದಾಗಿ ಹಬನಟ್ಟಿ ಮಲಪ್ರಭಾ ನದಿ ತೀರದಲ್ಲಿ ಬರುವ ಆಂಜನೇಯ ದೇವಸ್ಥಾನಮುಳುಗಡೆಯಾಗಿದೆ.

ಪಶ್ಚಿಮಘಟ್ಟ ‌ಪ್ರದೇಶದಲ್ಲಿ‌ ಧಾರಾಕಾರ ಮಳೆಯಿಂದ ಮಲಪ್ರಭಾ ನದಿ ಹಾಗೂ ಹಳ್ಳಗಳು ತುಂಬಿ ಹರಿಯುತ್ತಿವೆ. ಕಳಸಾ ಹಳ್ಳ ತುಂಬಿ ಹರಿದ ಪರಿಣಾಮ ಕಣಕುಂಬಿ- ಪಾರವಾಡ ರಸ್ತೆ ಸಂಪರ್ಕ ಕಡಿತವಾಗಿದೆ.

ನಗರದಲ್ಲಿ ಕೆಲ ರಸ್ತೆಗಳಲ್ಲಿ ನೀರು ತುಂಬಿದ್ದು ವಾಹನ ಸವಾರರು ಪರದಾಡುವಂತಾಗಿದೆ. ತಗ್ಗು ಪ್ರದೇಶದಲ್ಲಿನ ಮನೆ- ಅಂಗಡಿಗಳಿಗೆ ನೀರು ನುಗ್ಗಿದೆ. ತಾಲೂಕಿನ ನಾನಾವಾಡಿ- ಮಂಡೋಳ್ಳಿ ನಡುವಿನ ರಸ್ತೆ ಸಂಪರ್ಕ ಕಡಿತವಾಗಿದ್ದು.. ಮಾರ್ಕಂಡೇಯ ನದಿ ತುಂಬಿ ಹರಿದು ಪಕ್ಕದ ಹೊಲಗಳಿಗೆ ನೀರು ನುಗ್ಗಿದೆ. ಬಳ್ಳಾರಿ ನಾಲಾ ನೀರು ಪಕ್ಕದ ಜಮೀನುಗಳಿಗೆ ನುಗ್ಗಿ ನೂರಾರು ಎಕರೆ ಕಬ್ಬು, ಭತ್ತ ನೀರು ಪಾಲಾಗಿದೆ.

ಬೆಳಗಾವಿ ತಾಲೂಕಿನ ವಾಗ್ವಾಡಿ ಗ್ರಾಮದಲ್ಲಿ ಹಳ್ಳದ ನೀರಿನಲ್ಲಿ ಸಿಲುಕಿದ್ದ ಯುವಕನನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ.. ಮಹೇಶ್ ಎನ್ನುವ ಯುವಕ ಹೊಲಕ್ಕೆ ಹೋಗಿ ಹಳ್ಳದ ನೀರಲ್ಲಿ ಸಿಲುಕಿ ಪರದಾಡಿದ್ದಾನೆ.. ಈ ವೇಳೆ ಸ್ಥಳೀಯ ಯುವಕರು ಹಗ್ಗ ಹಾಕಿ ಮಹೇಶನ ರಕ್ಷಣೆ ಮಾಡಿದ್ದಾರೆ.

The post ಬೆಳಗಾವಿಯಲ್ಲಿ ಅಬ್ಬರಿಸಿದ ಮಳೆ.. ನೀರಿನಲ್ಲಿ ಮುಳುಗಿದ ಆಂಜನೇಯ ಸ್ವಾಮಿ ದೇವಸ್ಥಾನ appeared first on News First Kannada.

Source: newsfirstlive.com

Source link